ಈ ರೀತಿ ಯಾಕೆ ಬೇಡಿಕೆಯನ್ನು ಮಾಡಬೇಕಾಗುತ್ತದೆ? ಅಮೇಝಾನ್‍ನಂತಹ ಆಪ್ ನಿಂದಾಗುವ ಹಿಂದೂವಿರೋಧಿ ಹಾಗೂ ಭಾರತವಿರೋಧಿ ಚಿತ್ರಣವನ್ನು ಗಮನಕ್ಕೆ ತೆಗೆದುಕೊಂಡು ಕೇಂದ್ರ ಸರಕಾರವು ಇಂತಹ ಎಲ್ಲ ಆ್ಯಪ್‍ಗಳ ಮೇಲೆ ತಕ್ಷಣ ನಿರ್ಬಂಧ ಹಾಕುವುದು ಆವಶ್ಯವಾಗಿದೆ!
ನವ ದೆಹಲಿ – `ಅಮೆಝಾನ್ ಪ್ರೈಮ್’ನ `ಒಟಿಟಿ; ಆಪ್‍ನ `ತಾಂಡವ’ ವೆಬ್ ಸಿರಿಸ್ ನ ನಂತರ ಈಗ `ಮಿರ್ಝಾಪುರ’ ಈ ವೆಬ್ ಸಿರಿಸ್ ಅನ್ನು ಸಹ ನಿರ್ಬಂಧಿಸಬೇಕೆಂಬ ಬೇಡಿಕೆಯಾಗತೊಡಗಿದೆ. ಈ ವೆಬ್ ಸಿರಿಸ್‍ನ ವಿರುದ್ಧ ಅರವಿಂದ ಚತುರ್ವೇದಿ ಇವರು ಕೊತವಾಲಿ ಪೊಲೀಸ್ ಠಾಣೆಯಲ್ಲಿ ಅಪರಾಧವನ್ನು ನೊಂದಾಯಿಸಿದ್ದಾರೆ. `ಮಿರ್ಝಾಪುರ ವೆಬ್ ಸಿರಿಸ್‍ನಿಂದ ಪ್ರಾದೇಶಿಕ, ಸಾಮಾಜಿಕ ಮತ್ತು ಧಾರ್ಮಿಕ ಭಾವನೆಗಳನ್ನು ನೋಯಿಸಲಾಗಿದೆ’ ಎಂದು ಚತುರ್ವೇದಿ ಇವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿರುವ ಮಿರ್ಝಾಪುರ ಚುನಾವಣಾಕ್ಷೇತ್ರದ ಶಾಸಕ ಮತ್ತು ಅಪ್ನಾ ದಳದ ರಾಷ್ಟ್ರೀಯ ಅಧ್ಯಕ್ಷ ಅನುಪ್ರಿಯಾ ಪಟೇಲ ಇವರು `ಮಿರ್ಝಾಪುರ’ ವೆಬ್ ಸಿರಿಸ್ ನ ನಿರ್ಮಾಪಕರ ವಿರುದ್ಧ ಕಾರ್ಯಾಚರಣೆಯ ಬೇಡಿಕೆಯನ್ನು ಸಲ್ಲಿಸಿದ್ದಾರೆ. ರಿತೇಶ ಸಿಧ್ವಾನಿ, ಫರಹಾನ್ ಅಖ್ತರ್ ಮತ್ತು ಭೌಮಿಕ ಗೋಂದಾಲಿಯಾ ಇವರು ಮಿರ್ಝಾಪುರ ವೆಬ್ ಸಿರಿಸ್ ನ ನಿರ್ಮಾಪಕರಾಗಿದ್ದಾರೆ.