ಗುಜರಾತನ ಭಾಜಪ ಸರಕಾರದ ಅಭಿನಂದನೀಯ ನಿರ್ಣಯ ! ಈಗ ಕೇಂದ್ರ ಸರಕಾರವೂ ಈ ವಿಷಯದಲ್ಲಿ ನಿರ್ಣಯ ತೆಗೆದುಕೊಳ್ಳಬೇಕು!
ಕರ್ಣಾವತಿ (ಗುಜರಾತ) – ಗುಜರಾತನ ಭಾಜಪ ಸರಕಾರವು `ಡ್ರಾಗನ್ ಫ್ರೂಟ್’ ಎಂದು ಪ್ರಸಿದ್ಧವಾಗಿರುವ ಹಣ್ಣಿಗೆ `ಕಮಲಮ್’ ನಾಮಕರಣ ಮಾಡಿದೆ. ಈ ಹಣ್ಣಿಗೆ ಡ್ರಾಗನ್ ಎಂಬ ಶಬ್ದವನ್ನು ಉಪಯೋಗಿಸುವುದು ಯೋಗ್ಯವಲ್ಲ. ಡ್ರಾಗನ್ ಹಣ್ಣು ಕಮಲದಂತೆ ಕಾಣುತ್ತದೆ. ಹಾಗಾಗಿ ಈ ಹಣ್ಣಿಗೆ ಸಂಸ್ಕೃತ ಭಾಷೆಗನುಸಾರ `ಕಮಲಮ್’ ಎಂದು ಹೆಸರು ನೀಡಲಾಗಿದೆ. ಈ ಮಾಹಿತಿಯನ್ನು ಮುಖ್ಯಮಂತ್ರಿ ವಿಜಯ ರೂಪಾಣಿ ಇವರು ನೀಡಿದ್ದಾರೆ. ಸದ್ಯಕ್ಕೆ ಈ ಹೆಸರು ಗುಜರಾತ ರಾಜ್ಯಕ್ಕೆ ಸೀಮಿತವಾಗಿರಲಿದೆ. ಗುಜರಾತನ ಕಚ್ಛ ಮತ್ತು ನವಸಾರಿ ಈ ಪ್ರದೇಶಗಳಲ್ಲಿ ರೈತರು ಕಮಲಮ್ ಹಣ್ಣಿನ ಕೃಷಿಯನ್ನು ಮಾಡುತ್ತಾರೆ. ಗುಜರಾತ ಅರಣ್ಯ ಇಲಾಖ್ಯೆಯು ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಬಳಿ `ಡ್ರಾಗನ್ ಫ್ರೂಟ್’ನ ಹೆಸರು ಬದಲಾಯಿಸುವಂತೆ ಯಾಚಿಕೆಯನ್ನು ಸಲ್ಲಿಸಿದೆ (ಇಂತಹ ಬೇಡಿಕೆಯನ್ನು ಏಕೆ ಮಾಡಬೇಕಾಗುತ್ತದೆ? – ಸಂಪಾದಕರು)
#Gujarat govt decides to rename #DragonFruit to #Kamalam. The Chief Minister said that the renaming was done because the fruit looked like a lotus. He also added that the word dragon is associated with #China pic.twitter.com/rBgeauPzIo
— Mirror Now (@MirrorNow) January 20, 2021
(ಸೌಜನ್ಯ :IBT Times India)