ಸಾವರಕರರು ಆಂಗ್ಲರಲ್ಲಿ ಕ್ಷಮಾಯಾಚನೆ ಮಾಡಿರುವುದರಿಂದ ಸ್ವಾತಂತ್ರ್ಯಸೈನಿಕರ ಚಿತ್ರದೊಂದಿಗೆ ಅವರ ಚಿತ್ರವನ್ನು ಇಡುವುದೆಂದರೆ ಸ್ವಾತಂತ್ರ್ಯ ಸೈನಿಕರಿಗಾದ ಅವಮಾನ(ವಂತೆ) ಕಾಂಗ್ರೆಸ್‍ನ ನಿತ್ಯದ ಕುಹಕ ನುಡಿ !
|
ಲಕ್ಷ್ಮಣಪುರಿ (ಉತ್ತರಪ್ರದೇಶ) – ರಾಜ್ಯದ ಕಾಂಗ್ರೆಸ್ ನೇತಾರ ದೀಪಕ ಸಿಂಹ ಇವರು ವಿಧಾನಪರಿಷತ್ತಿನ ಸಭಾಗೃಹದಲ್ಲಿ ಹಾಕಿರುವ ಸ್ವಾತಂತ್ರ್ಯವೀರ ಸಾವರಕರರ ಛಾಯಾಚಿತ್ರವನ್ನು ತೆಗೆದುಹಾಕಬೇಕೆಂದು ಸಭಾಪತಿಗಳಿಗೆ ಪತ್ರವನ್ನು ಬರೆದು ಬೇಡಿಕೆಯನ್ನಿಟ್ಟಿದ್ದಾರೆ. `ಆಂಗ್ಲರಲ್ಲಿ ಕ್ಷಮಾಯಾಚನೆಯನ್ನು ಮಾಡುವ ಸಾವರಕರರ ಛಾಯಾಚಿತ್ರವನ್ನು ಸ್ವಾತಂತ್ರ್ಯ ಸೈನಿಕರ ಜೊತೆಗೆ ಹಾಕುವುದು ಇದು ಅವರಿಗಾದ ಅವಮಾನವಾಗಿದೆ. ಈ ಛಾಯಾಚಿತ್ರವನ್ನು ಭಾಜಪವು ತನ್ನ ಕಾರ್ಯಾಯಲದಲ್ಲಿ ಹಾಕಬೇಕು ಎಂದು ಸಿಂಹ ಇವರು ಪತ್ರದಲ್ಲಿ ತಿಳಿಸಿದ್ದಾರೆ.
ದೀಪಕ ಸಿಂಹರು ಪತ್ರದಲ್ಲಿ ಮಂಡಿಸಿದ ಅಂಶಗಳು
೧. ಸಾವರಕರರು ಅಂಡಮಾನ್ ನ ಕಾರಾಗೃಹದಲ್ಲಿದ್ದು ಕೆಲವು ತಿಂಗಳಾದ ನಂತರ ಆಂಗ್ಲರಿಗೆ ಪತ್ರವನ್ನು ಬರೆದು, `ಬ್ರಿಟಿಷ್ ಸರಕಾರವು ನನ್ನನ್ನು ಕ್ಷಮಿಸಬೇಕು. ನಾನು ಭಾರತದ ಸ್ವಾತಂತ್ರ್ಯ ಹೋರಾಟದಿಂದ ನನ್ನನ್ನು ದೂರವಿಡುವೆನು ಮತ್ತು ಆಂಗ್ಲರಿಗೆ ಪ್ರಾಮಾಣಿಕ (ನಿಷ್ಠ)ನಾಗಿರುವೆನು. ಎಂದು ಹೇಳಿದ್ದರು. ಅನಂತರ ಅವರು ಕಾರಾಗೃಹದಿಂದ ಹೊರಗೆ ಬಂದರು ಮತ್ತು ಅವರು ಭಾರತದ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದರು.
(ಸಾವರಕರರು ಅಲ್ಲ, ಕಾಂಗ್ರೆಸ್‍ನವರೇ ಭಾರತದ ವಿರುದ್ಧ ಕಾರ್ಯ ಮಾಡುತ್ತಾರೆ. ಕಾಶ್ಮೀರದ ಸಮಸ್ಯೆಯಿರಬಹುದು ಅಥವಾ ಚೀನಾದ ಆಕ್ರಮಣವಿರಬಹುದು, ಇದರಿಂದ ಸಾವಿರಾರು ಚದರ ಕಿಲೋ ಮೀಟರ್ ಭೂಮಿಯನ್ನು ಚೀನಾ ಮತ್ತು ಪಾಕ್ ಇವರ ನಿಯಂತ್ರಣಕ್ಕೆ ಹೋಗಲು ಕಾಂಗ್ರೆಸ್ ಪಕ್ಷವೇ ಜವಾಬ್ದಾರವಾಗಿದೆ ಎಂಬುದು ಇತಿಹಾಸವಾಗಿದೆ ! – ಸಂಪಾದಕರು)
೨. ಮಹಮದ್ ಆಲಿ ಜಿನ್ನಾ ಇವರ ಹಿಂದೂ ರಾಷ್ಟ್ರದ ಭೂಮಿಕೆಯನ್ನು ಸಾವರಕರರು ಕರ್ಣಾವತಿಯ ಹಿಂದೂ ಮಹಾಸಭಾದ ಅಧಿವೇಶನದಲ್ಲಿ ಮಂಡಿಸಿದ್ದರು (ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಬದಲಾಗಿ ಕಾಂಗ್ರೆಸ್ ವಿಶೇಷವಾಗಿ ಗಾಂಧಿ-ನೆಹರೂ ಇವರೇ ಜಿನ್ನಾರ ಈ ಭೂಮಿಕೆಯನ್ನು ಸ್ವೀಕರಿಸಿ ಭಾರತದ ವಿಭಜನೆಗೆ ಒಪ್ಪಿಗೆ ನೀಡಿದರು ಎಂಬುದು ಇತಿಹಾಸವಾಗಿದೆ! – ಸಂಪಾದಕರು)
೩. ಸಾವರಕರರು ನೇತಾಜಿ ಸುಭಾಷಚಂದ್ರ ಬೋಸ ಇವರ ಆಝಾದ ಹಿಂದ ಸೇನೆಯ ವಿರುದ್ಧ ಆಂಗ್ಲರಿಗೆ ಸಹಾಯ ಮಾಡಿದರು. (ಕಾಂಗ್ರೆಸ್‍ನ ಇನ್ನೊಂದು ಹಾಸ್ಯಾಸ್ಪದ ದಾವೆ! ನೇತಾಜಿ ಬೋಸ ಇವರು ಸಶಸ್ತ್ರ ಸೈನ್ಯವನ್ನು ಸ್ಥಾಪಿಸಿ ಕಾರ್ಯ ಮಾಡಬೇಕು’ ಎಂಬ ಸಲಹೆಯನ್ನು ಸಾವರಕರರೇ ಅವರಿಗೆ ನೀಡಿದ್ದರು, ಎಂಬುದು ಇತಿಹಾಸವಾಗಿದೆ. ಇದಕ್ಕೆ ವಿರುದ್ಧವಾಗಿ ನೇತಾಜಿ ಬೋಸರು ಕಾಂಗ್ರೆಸ್‍ನಲ್ಲಿರುವಾಗ ಅವರನ್ನು ಬೇಕೆಂದೇ ಅವಮಾನಿಸಿ ಅವರಿಗೆ ಕಾಂಗ್ರೆಸ್ ತೊರೆಯುವಂತೆ ಪ್ರವೃತ್ತಗೊಳಿಸಲಾಗಿತ್ತು. ಸ್ವಾತಂತ್ರ್ಯಾನಂತರ ನೇತಾಜಿ ಬೋಸರು ಜೀವಂತವಿರುವ ಸಾಧ್ಯತೆ ಕಂಡುಬಂದಾಗ ಅವರು ಭಾರತಕ್ಕೆ ಬರಬಾರದು ಎಂದು ನೆಹರೂ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದರು ಎಂದು ಹೇಳಲಾಗುತ್ತದೆ.
ಇದಕ್ಕಾಗಿ ಕಾಂಗ್ರೆಸ್ ಗೆ ಶಿಕ್ಷೆಯಾಗಬೇಕು! -ಸಂಪಾದಕರು)
(ಸೌಜನ್ಯ : ABP NEWS )