ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿವಿವಾದ ಮುಖ್ಯಮಂತ್ರಿ ಬಿ.ಎಸ್. ಯುಡಿಯೂರಪ್ಪ ನವರಿಂದ ಉದ್ಧವ ಠಾಕರೆ ಇವರಿಗೆ ಪ್ರತ್ಯುತ್ತರ ಕರ್ನಾಟಕದ ಒಂದಿಂಚೂ ಭೂಮಿಯನ್ನು ಸಹ ಕೊಡಲಾರೆವು

ಬೆಂಗಳೂರು : ಕರ್ನಾಟಕದ ಒಂದಿಂಚೂ ಭೂಮಿಯನ್ನು ಸಹ ಕೊಡಲಾರೆವು ಎಂದು ಮುಖ್ಯಮಂತ್ರಿ ಬಿ.ಎಸ್. ಯುಡಿಯೂರಪ್ಪನವರು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕರೆ ಇವರ ಹೇಳಿಕೆಗೆ ಪ್ರತ್ಯುತ್ತರ ನೀಡುತ್ತಾ ಹೇಳಿದರು. ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿವಿವಾದದ ಬಗ್ಗೆ ಮಾತನಾಡುವಾಗ ಉದ್ಧವ ಠಾಕರೆಯವರು, ‘ಕರ್ನಾಟಕದಲ್ಲಿರುವ ಮರಾಠಿ ಭಾಷಾ ಹಾಗೂ ಸಾಂಸ್ಕೃತಿಕ ಪ್ರದೇಶಗಳನ್ನು ಮಹಾರಾಷ್ಟ್ರದೊಳಗೆ ತರುವುದೇ ಈ ಗಡಿ ಹೋರಾಟದಲ್ಲಿ ಹುತಾತ್ಮರಾದ ಸೈನಿಕರಿಗೆ ಸಲ್ಲಿಸುವಂತಹ ಶ್ರದ್ಧಾಂಜಲಿಯಾಗುವುದು. ಅದಕ್ಕಾಗಿ ನಾವು ಸಂಘಟಿತ ಹಾಗೂ ಕಟಿಬದ್ಧರಾಗಿದ್ದೇವೆ’ ಎಂದು ಹೇಳಿದ್ದರು

೧. ಕರ್ನಾಟಕದ ಬೆಳಗಾವಿ, ಕಾರವಾರ, ನಿಪ್ಪಾಣಿ ಸಹಿತ ಅನೇಕ ಊರುಗಳನ್ನು ಮಹಾರಾಷ್ಟ್ರದೊಳಗೆ ಸೇರಿಸಲು ಸಂಘರ್ಷ ಮಾಡುತ್ತಿರುವ ‘ಮಹಾರಾಷ್ಟ್ರ ಏಕೀಕರಣ ಸಮಿತಿಯು’ ಪ್ರತಿವರ್ಷ ೧೭ ಜನವರಿಯಂದು ಹುತಾತ್ಮ ದಿನವನ್ನು ಆಚರಿಸುತ್ತದೆ. ಈ ದಿನ ಗಡಿ ಸಮಸ್ಯೆಯಲ್ಲಿ ಹುತಾತ್ಮರಾದವರಿಗೆ ಅಭಿವಾದನ ಮಾಡುತ್ತಿರುವಾಗ ಮುಖ್ಯಮಂತ್ರಿ ಉದ್ಧವ ಠಾಕರೆಯವರು ಈ ಹೇಳಿಕೆಯನ್ನು ನೀಡಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸಹಿತ ಎಲ್ಲ ಪಕ್ಷಗಳ ನೇತಾರರು ಉದ್ಧವರ ಹೇಳಿಕೆಗೆ ನಿಷೇಧವನ್ನು ವ್ಯಕ್ತಪಡಿಸಿದ್ದಾರೆ.

೨. ಉದ್ಧವ ಠಾಕರೆಯವರಿಗೆ ಉತ್ತರ ನೀಡುವಾಗ ಯುಡಿಯೂರಪ್ಪನವರು, ‘ಠಾಕರೆಯವರ ಹೇಳಿಕೆಯು ಸೌಹಾರ್ದಪೂರ್ಣ ವಾತಾವರಣವನ್ನು ಹಾಳು ಮಾಡಬಲ್ಲದು. ನಿಜವಾದ ಭಾರತೀಯರೆಂದು ಠಾಕರೆಯವರು ಭಾರತೀಯ ಗಣರಾಜ್ಯವನ್ನು ಗೌರವಿಸುವರು ಎಂದು ನಾನು ಆಶಿಸುತ್ತೇನೆ ಎಂದರು.