ಚೀನಾದಿಂದ ಅರುಣಾಚಲ ಪ್ರದೇಶದಲ್ಲಿರುವ ಭಾರತೀಯ ಗಡಿಯಲ್ಲಿ ಅತಿಕ್ರಮಣ ಮಾಡಿ ವಸತಿ ನಿರ್ಮಾಣ ಕಾಂಗ್ರೆಸ್ ಅವಧಿಯಲ್ಲಿ ಅಂದರೆ ೧೯೮೦ರ ದಶಮಾನದಿಂದಲೇ ಚೀನಾವು ಭಾರತೀಯ ಭೂಮಿಯ ಮೇಲೆ ನಿಯಂತ್ರಣ ಸಾಧಿಸಿದೆ ! – ಭಾಜಪದ ಶಾಸಕ ತಾಪಿರ ತಾಓ ಇವರ ದಾವೆ

ಚೀನಾವು ಅರುಣಾಚಲಪ್ರದೇಶದಲ್ಲಿ ಭಾರತದ ಗಡಿಯೊಳಗೆ ನುಸುಳಿ ನಿರ್ಮಿಸಿದ ಒಂದು ಹಳ್ಳಿ

* ಕಾಂಗ್ರೆಸ್ ಅವಧಿಯಲ್ಲಾದ ತಪ್ಪು ಭಾಜಪದ ರಾಜ್ಯದಲ್ಲಿ ಸುಧಾರಣೆಯಾಗಲೇಬೇಕು ಇದನ್ನು ಗಮನದಲ್ಲಿರಿಸಿ ಕೇಂದ್ರ ಸರಕಾರವು ಅದಕ್ಕಾಗಿ ಪ್ರಯತ್ನಿಸುವುದು ಆವಶ್ಯಕವಾಗಿದೆ. ಹಿಂದೂಗಳಿಗೆ ಹಾಗೆಯೇ ಅನಿಸುತ್ತದೆ.

ಈಟಾ ನಗರ (ಅರುಣಾಚಲ ಪ್ರದೇಶ) – ೧೯೮೦ರಿಂದ ಚೀನಾವು ನಿರಂತರವಾಗಿ ಭಾರತೀಯ ಭೂಪ್ರದೇಶಗಳ ಮೇಲೆ ನಿಯಂತ್ರಣವನ್ನು ಸಾಧಿಸುತ್ತಿದೆ. ಚೀನಾವು ಊರುಗಳನ್ನು ಕಬಳಿಸುವುದು, ಸೇನಾ ನೆಲೆಗಳನ್ನು ಕಟ್ಟುವುದು ಇವೆಲ್ಲ ಹೊಸ ಸಂಗತಿಗಳೇನಲ್ಲ. ಕಾಂಗ್ರೆಸ್‌ನ ಅಯೋಗ್ಯ ನಿಲುವಿನಿಂದ ದೇಶವು ಇದರ ಬೆಲೆಯನ್ನು ತೆರಬೇಕಾಗುತ್ತಿದೆ, ಎಂದು ಭಾಜಪದ ಶಾಸಕ ತಾಪಿರ ಗಾಓ ಇವರು ಆರೋಪಿಸಿದ್ದಾರೆ. ಚೀನಾವು ಅರುಣಾಚಲ ಪ್ರದೇಶದ ಭಾರತದ ಗಡಿಯಲ್ಲಿ ಅತಿಕ್ರಮಣ ಮಾಡಿ ಅಲ್ಲಿ ಒಂದು ಊರನ್ನೇ ನೆಲೆಸಿದೆ ಎಂಬ ಮಾಹಿತಿಯು ಬೆಳಕಿಗೆ ಬಂದಿದೆ. ಈ ಊರಿನಲ್ಲಿ ಸುಮಾರು ೧೦೧ ಮನೆಗಳಿರುವುದು ಕಂಡುಬರುತ್ತದೆ. ಈ ಊರು ಭಾರತದ ಪ್ರತ್ಯಕ್ಷ ಗಡಿಯಿಂದ ನಾಲ್ಕುವರೆ ಕಿ.ಮೀ.ನ ಒಳಗಡೆ ಇದೆ ಎಂದು ಹೇಳಲಾಗುತ್ತಿದೆ. ಸರಕಾರಿ ಮಾನಚಿಹ್ನೆ (ನಕಾಶೆ) ಗನುಸಾರ ಈ ಪ್ರದೇಶವು ಭಾರತೀಯ ಗಡಿ ಪ್ರದೇಶದಲ್ಲಿ ಬರುತ್ತದೆ; ಆದರೆ ೧೯೫೯ ರಿಂದ ಚೀನಾವು ಅದರ ಮೇಲೆ ನಿಯಂತ್ರಣವನ್ನು ಸಾಧಿಸಿದೆ. ಮೊದಲು ಇಲ್ಲಿ ಕೇವಲ ಚೀನಾ ಸೈನಿಕರ ಚೌಕಿ ಇತ್ತು. ಆದರೆ ಹೊಸ ಛಾಯಾಚಿತ್ರದಲ್ಲಿ ಇಲ್ಲಿ ಊರು ನೆಲೆಯಾಗಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಗಾಓ ಇವರು ಮೇಲಿನಂತೆ ಆರೋಪಿಸಿದ್ದಾರೆ.