ಲಕ್ಷ್ಮಣಪುರಿ (ಉತ್ತರಪ್ರದೇಶ)ದಲ್ಲಿ ದೇವಸ್ಥಾನದ ಅರ್ಚಕರನ್ನು ಹತ್ಯೆಗೈದು ಲೂಟಿ !

ಉತ್ತರಪ್ರದೇಶದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಾದ ಸಾಧು ಸಂತರು ಮತ್ತು ಅರ್ಚಕರ ಹತ್ಯೆಗಳನ್ನು ನೋಡಿದರೆ ಇಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಗಾಳಿಗೆ ತೂರಲಾಗಿದೆ ಎಂಬುದು ಗಮನಕ್ಕೆ ಬರುತ್ತದೆ. ರಾಜ್ಯದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಘಟನೆಗಳಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿನ ಶಿವಪುರಿ ಊರಿನಲ್ಲಿರುವ ಐತಿಹಾಸಿಕ ರಣಬಾಬಾ ಮಹಾದೇವ ದೇವಸ್ಥಾನದಲ್ಲಿ ೧೯ ಜನವರಿಯ ರಾತ್ರಿ ಅಪರಿಚಿತರು ಲೂಟಿ ಮಾಡಿ ಅಲ್ಲಿನ ೮೦ ವರ್ಷದ ಬಾಬಾ ಫಕೀರೆ ದಾಸ ಇವರನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಇಲ್ಲಿನ ಅರ್ಪಣೆ ಪೆಟ್ಟಿಗೆಯಲ್ಲಿರುವ ಹಣವನ್ನು ಕದ್ದು ಪಲಾಯನ ಮಾಡಿದ್ದಾರೆ ಹಾಗೂ ಘಂಟೆಗಳು ಹಾಗೂ ದೇವಸ್ಥಾನದಲ್ಲಿರುವ ಧಾನ್ಯವನ್ನೂ ಸಹ ಕಳ್ಳರೂ ಕದ್ದೊಯ್ದಿದ್ದಾರೆ. ೧೫ ವರ್ಷಗಳಿಂದ ಬಾಬಾ ಫಕೀರೆ ದಾಸರು ಇಲ್ಲಿ ವಾಸಿಸುತ್ತಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ. ಪೊಲೀಸರು ಈ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದಾರೆ.