‘ಸಡಕ್ ೨ ಚಲನಚಿತ್ರದ ಪೋಸ್ಟ್‌ರ್‌ನಲ್ಲಿ ಕೈಲಾಸ ಪರ್ವತದ ಛಾಯಾಚಿತ್ರ !

‘ಓಟಿಟಿನ ಮೇಲೆ ಶೀಘ್ರದಲ್ಲಿಯೇ ಪ್ರದರ್ಶನಗೊಳ್ಳಲಿರುವ ‘ಸಡಕ್ ೨ ಎಂಬ ಚಲನಚಿತ್ರದ ಫಲಕದ ಮೇಲೆ (ಪೋಸ್ಟರ್) ಕೈಲಾಸ ಮಾನಸಸರೋವರ ಪರ್ವತದ ಛಾಯಾಚಿತ್ರವನ್ನು ತೋರಿಸಿ ಅದರ ಮೇಲಿನ ಬದಿಯಲ್ಲಿ ‘ಸಡಕ್ ೨ ಎಂದು ಬರೆಯಲಾಗಿದೆ. ಅದೇ ರೀತಿ ಅದರ ಕೆಳಗೆ ರಸ್ತೆಯ ಚಿತ್ರವನ್ನು ತೋರಿಸಲಾಗಿದೆ.

ತಬಲಿಗೀ ಜಮಾತ್‌ನ ೨ ಸಾವಿರದ ೬೦೦ ಸದಸ್ಯರ ಮೇಲಿನ ಖಟ್ಲೆ ಮುಗಿಯುವ ತನಕ ದೇಶಬಿಟ್ಟು ಹೊಗಲು ಸಾಧ್ಯವಿಲ್ಲ !

ಮಾರ್ಚ್ ೨೦೨೦ ರಲ್ಲಿ ದೆಹಲಿಯ ನಿಝಾಮುದ್ದೀನ್‌ನಲ್ಲಿ ತಬಲಿಗೀ ಜಮಾತ್‌ನ ಮರಕಝನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಕೊರೋನಾ ಸೋಂಕನ್ನು ದೇಶದಾದ್ಯಂತ ಹಬ್ಬಿಸಿದ ೨ ಸಾವಿರದ ೬೦೦ ಕ್ಕೂ ಹೆಚ್ಚು ತಬಲಿಗೀಗಳು ತಮ್ಮ ದೇಶಕ್ಕೆ ಹೋಗಲು ಸಾಧ್ಯವಿಲ್ಲ, ಎಂಬ ಪ್ರತಿಜ್ಞಾಪತ್ರವನ್ನು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದೆ.

ನ್ಯಾಯಾಲಯದಲ್ಲಿ ದಿನಾಂಕ ೧೩ ರಂದು ಅನುಪಸ್ಥಿತನಾಗಿದ್ದರಿಂದ ಅತ್ಯಾಚಾರಿ ಬಿಷಪ್ ಮುಲಕ್ಕಲ್‌ಗೆಬಂಧಿಸುವುದಾಗಿ ನ್ಯಾಯಾಲಯದ ಎಚ್ಚರಿಕೆ

ಪಂಜಾಬಿನ ಜಾಲಂಧರ್‌ನ ಮಾಜೀ ಬಿಷಪ್ ಫ್ರಾಂಕೋ ಮುಲಕ್ಕಲ್‌ನ ಮೇಲೆ ೪೪ ವರ್ಷದ ನನ್ ಮೇಲೆ ಅತ್ಯಾಚಾರ ನಡೆಸಿರುವ ಆರೋಪದ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ. ಒಂದು ವೇಳೆ ಅವನು ಜುಲೈ ೧೩ರಂದು ಮುಲಕ್ಕಲ್‌ನು ನ್ಯಾಯಾಲಯದಲ್ಲಿ ಹಾಜರಾಗದಿದ್ದರೆ ಅವನನ್ನು ಬಂಧಿಸಲಾಗುವುದು, ಎಂದು ಎಚ್ಚರಿಕೆ ನೀಡಿದೆ

ಲೇಹ್‌ ಗೆ ದಿಢೀರ್ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

ಚೀನಾದಿಂದ ಭಾರತಕ್ಕಾಗುವ ಆತಂಕದ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜುಲೈ ೩ ರಂದು ಲೇಹಗೆ ದಿಢೀರ್ ಭೇಟಿ ನೀಡಿದ್ದಾರೆ. ಅವರು ನೀಮು ಎಂಬಲ್ಲಿಯ ‘ಫಾರ್‌ವರ್ಡ್ ಪೋಸ್ಟ’ಗೆ ಹೋಗಿ ಸೈನಿಕರನ್ನು ಭೇಟಿಯಾದರು. ಇದು ಸಮುದ್ರ ಮಟ್ಟಕ್ಕಿಂತ ಸುಮಾರು ೧೧ ಸಾವಿರ ಅಡಿಯಷ್ಟು ಎತ್ತರದಲ್ಲಿದ್ದು ಇದು ಜಗತ್ತಿನ ಎಲ್ಲಕ್ಕಿಂತ ಎತ್ತರದ ಹಾಗೂ ಸವಾಲಿನ ಸ್ಥಳ ಎಂದು ಹೇಳಲಾಗುತ್ತದೆ.

ಮತಾಂತರಕ್ಕೆ ಪ್ರೊತ್ಸಾಹ ನೀಡುವ ‘ಗಾಡ್ ಟಿವಿ’  ಈ ಖಾಸಗಿ ಕ್ರೈಸ್ತ ದೂರದರ್ಶನದ ಮೇಲೆ ಇಸ್ರೈಲ್‌ನಿಂದ ನಿರ್ಬಂಧ

ಹಿಬ್ರು ಭಾಷೆಯಲ್ಲಿ ಪ್ರಕ್ಷೇಪಣೆಯಾಗುವ ‘ಗಾಡ್ ಟಿವಿ’ ಎಂಬ ಕ್ರೈಸ್ತ ಮಿಷನರಿಯ ಖಾಸಗಿ ದೂರದರ್ಶನವನ್ನು ಇಸ್ರೇಲ್ ನಿಷೇಧ ಹೇರಿದೆ. ‘ಈ ವಾಹಿನಿಯು ಪ್ರಕ್ಷೇಪಣೆ ಆರಂಭಿಸುವ ಬಗ್ಗೆ ಅರ್ಜಿ ಸಲ್ಲಿಸಿದಾಗ ಅದರ ಒಡೆತನ ಮಿಷನರಿಗಳ ಬಳಿ ಇದೆ ಎಂಬ ಮಾಹಿತಿಯನ್ನು ಅಡಗಿಸಿಟ್ಟಿದ್ದು ಈ ವಾಹಿನಿಯ ಮೂಲಕ ದೇಶದಲ್ಲಿ ಮತಾಂತರಕ್ಕೆ ಪ್ರೋತ್ಸಾಹ ನೀಡುತ್ತಿತ್ತು’, ಎಂದು ಆರೋಪಿಸಲಾಗಿದೆ.

ಹಿಂದೂಗಳ ದೇವಸ್ಥಾನದ ಪಾತ್ರೆ ಹಾಗೂ ದೀಪಗಳನ್ನು ಹರಾಜು ಮಾಡುವ ಕೇರಳ ಸರಕಾರದ ಆದೇಶವನ್ನು ರದ್ದು ಪಡಿಸಿದ ಉಚ್ಚ ನ್ಯಾಯಾಲಯ

‘ದೇವಸ್ಥಾನದ ದೀಪ ಹಾಗೂ ಪಾತ್ರೆಗಳನ್ನು ಹರಾಜು ಮಾಡಬಾರದೆಂದು ಆದೇಶವನ್ನು ಕೇರಳದ ಉಚ್ಚ ನ್ಯಾಯಾಲಯಯು ಸರಕಾರಕ್ಕೆ ನೀಡಿದೆ. ‘ಹಿಂದೂ ಸೇವಾ ಕೇಂದ್ರ’ವು ದಾಖಲಿಸಿದೆ ಅರ್ಜಿಯ ಮೇಲೆ ಈ ನಿರ್ಣಯವನ್ನು ನೀಡಿದೆ. ಕೇರಳದ ಉಚ್ಚ ನ್ಯಾಯಾಲಯವು ‘ಮಲಬಾರ ದೇವಸ್ವಮ್ ಬೋರ್ಡ್’ನ ಪ್ರತಿಯೊಂದು ದೇವಸ್ಥಾನದ ನಿಧಿಯಿಂದ ೧ ಲಕ್ಷ ರೂಪಾಯಿ ‘ಮುಖ್ಯಮಂತ್ರಿ ಸಹಾಯ ನಿಧಿ’ಗೆ ನೀಡುವ ನಿರ್ಧಾರವನ್ನೂ ತಡೆಹಿಡಿಯಲಾಗಿದೆ.

ಸಂಚಾರ ನಿಷೇದದ ಕಾಲಾವಧಿಯಲ್ಲಿ ಆಂಧ್ರಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ಹೆಚ್ಚಳ

ಸಂಚಾರ ನಿಷೇಧದ ಮೊದಲು ಮಹಿಳೆಯರ ಸಂದರ್ಭದಲ್ಲಿ ವಾರದಲ್ಲಿ ಸರಾಸರಿ ೧೦ ದೂರನ್ನು ದಾಖಲಿಸಲಾಗುತ್ತಿತ್ತು. ಸಂಚಾರ ನಿಷೇಧದಲ್ಲಿ ೧ ವಾರದಲ್ಲೇ ಮಹಿಳೆಯರ ಮೇಲೆ ಹಿಂಸಾಚಾರದ ೨೦ ಘಟನೆಗಳು ಬೆಳಕಿಗೆ ಬರುತ್ತಿದೆ. ಮಹಿಳಾ ಆಯೋಗದಲ್ಲಿ ಪ್ರತಿತಿಂಗಳು ೩೦೦ ದೂರು ಆಂಧ್ರಪ್ರದೇಶ ಮಹಿಳಾ ಆಯೋಗದ ಅಧ್ಯಕ್ಷೆ ವಾಸಿ ರೆಡ್ಡಿಯವರು, “ಸಂಚಾರ ನಿರ್ಬಂದದ ಕಾಲದಲ್ಲಿ ನಮ್ಮಲ್ಲಿ ಪ್ರತಿತಿಂಗಳು ಸುಮಾರು ೩೦೦ ದೂರುಗಳು ಬಂದಿವೆ.

ದೆಹಲಿಯ ಸರಕಾರಿ ಬಂಗಲೆಯನ್ನು ತೊರೆಯುವಂತೆ ಪ್ರಿಯಾಂಕಾ ವಾದ್ರಾರಿಗೆ ಕೇಂದ್ರ ಸರಕಾರದ ಆದೇಶ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ಮಗಳು ಹಾಗೂ ಕಾಂಗ್ರೆಸ್‌ನ ಪ್ರಧಾನಕಾರ್ಯದರ್ಶಿ ಪ್ರಿಯಂಕಾ ವಾದ್ರಾರಿಗೆ ದೆಹಲಿಯಲ್ಲಿನ ಲೊಧಿ ಎಸ್ಟೇಟ್‌ನಲ್ಲಿಯ ಸರಕಾರಿ ಬಂಗಲೆಯನ್ನು ೧ ತಿಂಗಳಲ್ಲಿ ತೊರೆಯಬೇಕು ಎಂದು ಕೇಂದ್ರ ಸರಕಾರ ಆದೇಶ ನೀಡಿದೆ. ಇದರ ಬಗ್ಗೆ ಕೇಂದ್ರದ ವಸತಿ ಹಾಗೂ ನಾಗರಿಕ ವ್ಯವಹಾರ ಸಚಿವಾಲಯದಿಂದ ಪ್ರಿಯಾಂಕಾ ವಾದ್ರಾಗೆ ಪತ್ರವನ್ನು ಕಳುಹಿಸಲಾಗಿದೆ.

ರಾಜಸ್ಥಾನ ಉಚ್ಚ ನ್ಯಾಯಾಲಯದ ಪರಿಸರದಲ್ಲಿರುವ ಮನು ಋಷಿಗಳ ಪ್ರತಿಮೆಗೆ ಭದ್ರತೆಯನ್ನು ನೀಡಿ ! – ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಲ್ಲಿ ಬೇಡಿಕೆ

ಇಲ್ಲಿಯ ಹಿಂದುಳಿದವರ್ಗದವರಿಂದ ರಾಜಸ್ಥಾನ ಉಚ ನ್ಯಾಯಾಲಯದ ಪರಿಸರದಲ್ಲಿರುವ ಮನು ಋಷಿಗಳ ಪ್ರತಿಮೆಯನ್ನು ಧ್ವಂಸ ಮಾಡುವಂತೆ ಆಗ್ರಹಿಸಿದ್ದಾರೆ. ಇದಕ್ಕೆ ‘ಯುಥ್ ಫಾರ್ ಇಕ್ವಲಿಟಿ’ಯು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಇಂದ್ರಜಿತ ಮಹಂತಿಯವರಲ್ಲಿ ಈ ಪ್ರತಿಮೆಗೆ ಭದ್ರತೆಯನ್ನು ನೀಡುವಂತೆ ಆಗ್ರಹಿಸಿದ್ದಾರೆ.

ಕೊರೋನಾ ಮತ್ತು ಅಗ್ನಿಹೋತ್ರದ ಉಪಯುಕ್ತತೆ !

ಅಗ್ನಿಹೋತ್ರ ಮಾಡುವ ಮೊದಲು ಮತ್ತು ಅಗ್ನಿಹೋತ್ರ ಮಾಡಿದ ನಂತರ ‘ಆಸ್ಪತ್ರೆಯಲ್ಲಿನ ಗಾಳಿಯಲ್ಲಿ ಕೊರೊನಾ ರೋಗಾಣುಗಳ ಪ್ರಮಾಣವು ಎಷ್ಟಿದೆ ?’, ಎಂಬುದನ್ನು ಅಧ್ಯಯನ ಮಾಡಬೇಕು ಹಾಗೆಯೇ ‘ಆಸ್ಪತ್ರೆಯಲ್ಲಿನ ವಸ್ತುಗಳ ಮೇಲಿನ ಭಾಗಗಳಲ್ಲಿ ಕೊರೊನಾ ರೋಗಾಣುಗಳ ಪ್ರಮಾಣದಲ್ಲಿ ಏನು ಬದಲಾವಣೆಯಾಗುತ್ತದೆ ?’, ಎಂಬ ಅಧ್ಯಯನ ಮಾಡಬೇಕು.