Court Order: ತಿಂಗಳಿಗೆ 2 ಬಾರಿ ಪೊಲೀಸ್ ಠಾಣೆಗೆ ಬಂದು ರಾಷ್ಟ್ರಧ್ವಜಕ್ಕೆ ‘ವಂದನೆ’ ಸಲ್ಲಿಸಿ 21 ಬಾರಿ ‘ಭಾರತ ಮಾತಾ ಕಿ ಜೈ’ ಎಂದು ಘೋಷಣೆ ನೀಡಬೇಕು !

‘ಪಾಕಿಸ್ತಾನ ಜಿಂದಾಬಾದ್’ ಎಂದು ಕೂಗಿದ ಫೈಜಾನ್‌ಗೆ ನ್ಯಾಯಾಲಯದಿಂದ ಷರತ್ತು ಬದ್ಧ ಜಾಮೀನು

ಭೋಪಾಲ (ಮಧ್ಯಪ್ರದೇಶ) – ಸಾರ್ವಜನಿಕ ಸ್ಥಳದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್, ‘ಹಿಂದೂಸ್ತಾನ್ ಮುರ್ದಾಬಾದ್’ ಎಂದು ಘೋಷಣೆ ಕೂಗಿದ ಫೈಜಾನನಿಗೆ ಮಧ್ಯಪ್ರದೇಶ ಉಚ್ಚನ್ಯಾಯಾಲಯವು ಜಾಮೀನು ನೀಡುವಾಗ ಕೆಲವು ಷರತ್ತುಗಳನ್ನು ವಿಧಿಸಿದೆ. ಅದರಂತೆ ಅವನು ತಿಂಗಳಿಗೆ 2 ಸಲ ಅಂದರೆ ತಿಂಗಳಿನ ಮೊದಲ ಮತ್ತು ನಾಲ್ಕನೇಯ ಮಂಗಳವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ ಸ್ಥಳೀಯ ಪೊಲೀಸ ಠಾಣೆಗೆ ಹಾಜರಾಗಿ, ಪೊಲೀಸ್ ಠಾಣೆಯಲ್ಲಿ ಹಾರಾಡುತ್ತಿರುವ ರಾಷ್ಟ್ರಧ್ವಜಕ್ಕೆ 21 ಬಾರಿ ‘ಸೆಲ್ಯೂಟ್’ ಮಾಡಬೇಕು. ಹೀಗೆ ಮಾಡುವಾಗ ‘ಭಾರತಮಾತಾ ಕಿ ಜೈ’ ಎಂದು ಘೋಷಣೆ ಕೂಗಬೇಕು ಮತ್ತು ಇದನ್ನು ಅವನು ಪ್ರಕರಣ ಮುಗಿಯುವವರೆಗೂ ಮಾಡುತ್ತಿರಬೇಕು. ಇದಲ್ಲದೇ ನ್ಯಾಯಾಲಯವು 50 ಸಾವಿರ ರೂಪಾಯಿಗಳ ಮುಚ್ಚಳಿಕೆ ಪತ್ರದ ಮೇಲೆ ಆರೋಪಿಗೆ ಜಾಮೀನು ಮಂಜೂರು ಮಾಡಿತು. ಫೈಝಾನ ಮೇ ತಿಂಗಳಿನಲ್ಲಿ ಪಾಕಿಸ್ತಾನವನ್ನು ಬೆಂಬಲಿಸುವ ಘೋಷಣೆಯನ್ನು ಕೂಗಿದ್ದನು. ಆಗ ಅವನನ್ನು ಬಂಧಿಸಲಾಗಿತ್ತು. ಆಗಿನಿಂದ ಅವನು ಜೈಲಿನಲ್ಲಿಯೇ ಇದ್ದನು.