ನ್ಯಾಯಾಲಯದಲ್ಲಿ ದಿನಾಂಕ ೧೩ ರಂದು ಅನುಪಸ್ಥಿತನಾಗಿದ್ದರಿಂದ ಅತ್ಯಾಚಾರಿ ಬಿಷಪ್ ಮುಲಕ್ಕಲ್‌ಗೆಬಂಧಿಸುವುದಾಗಿ ನ್ಯಾಯಾಲಯದ ಎಚ್ಚರಿಕೆ

೧೩ನೇ ತಾರೀಖಿಗೆ ಅನುಪಸ್ಥಿತನಾಗಿದ್ದರೆ ಮುಲಕ್ಕಲ್‌ನನ್ನು ಇಲ್ಲಿಯವರೆಗೆ ಬಂಧಿಸಬೇಕಿತ್ತು, ಎಂದು ಜನರಿಗೆ ಅನಿಸುತ್ತಿದೆ !

ಕೊಚ್ಚಿ (ಕೇರಳ) – ಪಂಜಾಬಿನ ಜಾಲಂಧರ್‌ನ ಮಾಜೀ ಬಿಷಪ್ ಫ್ರಾಂಕೋ ಮುಲಕ್ಕಲ್‌ನ ಮೇಲೆ ೪೪ ವರ್ಷದ ನನ್ ಮೇಲೆ ಅತ್ಯಾಚಾರ ನಡೆಸಿರುವ ಆರೋಪದ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ. ಈ ಪ್ರಕರಣದ ಮೇರೆಗೆ ೧೩ ನೇ ಬಾರಿ ನ್ಯಾಯಾಲಯದಲ್ಲಿ ಗೈರಾದ ಕಾರಣ ನ್ಯಾಯಾಲಯವು ಅಸಮಧಾನವ್ಯಕ್ತಪಡಿಸಿದ್ದು ಒಂದು ವೇಳೆ ಅವನು ಜುಲೈ ೧೩ರಂದು ಮುಲಕ್ಕಲ್‌ನು ನ್ಯಾಯಾಲಯದಲ್ಲಿ ಹಾಜರಾಗದಿದ್ದರೆ ಅವನನ್ನು ಬಂಧಿಸಲಾಗುವುದು, ಎಂದು ಎಚ್ಚರಿಕೆ ನೀಡಿದೆ, ಈಗ ಮುಲಕ್ಕಲ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಕೇರಳ ಸರಕಾರವು ‘ಮುಲಕ್ಕಲ್‌ನ ವಿರುದ್ಧ ಸಾಕಷ್ಟು ಪುರಾವೆಗಳಿವೆ, ಎಂದು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದೆ.

ಮೊಕದ್ದಮೆಯನ್ನು ರದ್ದು ಪಡಿಸುವ ಬೇಡಿಕೆಯನ್ನು ತಳ್ಳಿಹಾಕಿದ ನ್ಯಾಯಾಲಯ

ಫ್ರಾಂಕೋ ಮುಲಕ್ಕಲ್‌ನು ಕೇರಳದ ಉಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿಯನ್ನು ಸಲ್ಲಿಸಿ ತನ್ನ ಮೇಲಿರುವ ಅತ್ಯಾಚಾರದ ಆರೋಪದ ಅರ್ಜಿಯನ್ನು ರದ್ದು ಪಡಿಸಬೇಕು ಎಂದು ಬೇಡಿಕೆ ಸಲ್ಲಿಸಿದ್ದನು; ಆದರೆ ಉಚ್ಚ ನ್ಯಾಯಾಲಯವು ಈ ಅರ್ಜಿಯನ್ನು ತಳ್ಳಿಹಾಕಿದೆ.