ರೈಲ್ವೆ ಮುಂಗಡ ಟಿಕೆಟ್ ನಿಯಮಗಳಲ್ಲಿ ಬದಲಾವಣೆ ನೀವು ಓದಲೇ ಬೇಕು !

  • ಈಗ 120 ದಿನಗಳ ಬದಲು 60 ದಿನಗಳ ಮೊದಲು ಮುಂಗಡ ಟಿಕೆಟ್ ಬುಕ್ ಮಾಡಲು ಸಾಧ್ಯ !

  • ನವೆಂಬರ್ 1 ರಿಂದ ಜಾರಿ

ನವ ದೆಹಲಿ – ರೈಲ್ವೇ ಸಚಿವಾಲಯ ಮುಂಗಡ ಟಿಕೆಟ್ ನಿಯಮಗಳನ್ನು ಬದಲಾಯಿಸುತ್ತಾ 120 ದಿನಗಳ ಮೊದಲು ಅಲ್ಲ, ಬದಲಾಗಿ 60 ದಿನಗಳ ಮೊದಲು (ಪ್ರಯಾಣ ದಿನ ಹೊರತುಪಡಿಸಿ) ಸಿಗಲಿದೆಯೆಂದು ಮಾಹಿತಿ ನೀಡಿದೆ. ಈ ನಿಯಮವು ನವೆಂಬರ್ 1, 2024 ರಿಂದ ಜಾರಿಗೆ ಬರಲಿದೆ. ಅಕ್ಟೋಬರ್ 31 ರವರೆಗೆ ಯಾರು ಆಸನವನ್ನು ಕಾದಿರಿಸಿದ್ದಾರೆಯೋ, ಅವರ ಕಾದಿರಿಸುವಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಯಾವ ರೈಲಿನ ಟಿಕೆಟ್‌ಗಳ ಕಾಯ್ದಿಸರಿಸುವಿಕೆಯ ಕಾಲಾವಧಿ ಮೊದಲಿನಿಂದಲೂ ಕಡಿಮೆಯಿದೆಯೋ, ಅವುಗಳ ಮೇಲೆ ಈ ನಿಯಮದ ಯಾವುದೇ ಪರಿಣಾಮವಾಗುವುದಿಲ್ಲ. 120 ದಿನಗಳ ಮೊದಲು ಅಂದರೆ 4 ತಿಂಗಳ ಮುಂಚಿತವಾಗಿ ಮುಂಗಡ ಟಿಕೆಟ್ ಮಾಡಿ ಕೊನೇಯ ಕ್ಷಣದಲ್ಲಿ ರದ್ದುಗೊಳಿಸುವ ಪ್ರಕಾರ ಬಹಳ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ ಇತರ ಪ್ರಯಾಣಿಕರಿಗೆ ಆಗುವ ಅನಾನುಕೂಲತೆ ಮತ್ತು ರೈಲ್ವೆಗೆ ಆಗುವ ನಷ್ಟವನ್ನು ತಪ್ಪಿಸಲು ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆಯೆಂದು ಹೇಳಲಾಗುತ್ತಿದೆ.