Muslim Attack Durga Devi Procession: ಶ್ರೀ ದುರ್ಗಾದೇವಿ ಮೂರ್ತಿ ವಿಸರ್ಜನೆಯ ಮೆರವಣಿಗೆ ಮೇಲೆ ಮುಸ್ಲಿಮರಿಂದ ದಾಳಿ; ಇಬ್ಬರಿಗೆ ಗಾಯ

  • ಅಂಗೂರ್ ಆಲಂನ ಬಂಧನ

  • ಹಿಂದಿನ ದ್ವೇಷದಿಂದ ಹಲ್ಲೆ ಮಾಡಿರುವುದಾಗಿ ಪೊಲೀಸರ ಹೇಳಿಕೆ

ದೇವರಿಯಾ (ಉತ್ತರ ಪ್ರದೇಶ) – ಇಲ್ಲಿನ ಮಝೌಲಿರಾಜ ಪ್ರದೇಶದಲ್ಲಿ ಅಕ್ಟೋಬರ್ 16 ರಂದು, ಶ್ರೀ ದುರ್ಗಾದೇವಿ ಮೂರ್ತಿಯ ವಿಸರ್ಜನೆಯ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರು ದಾಳಿ ನಡೆಸಿ, 2 ಹಿಂದೂ ಯುವಕರ ಮೇಲೆ ಚೂರಿಯಿಂದ ಹಲ್ಲೆ ನಡೆಸಿದರು. ಇದರಲ್ಲಿ ಓರ್ವ ಯುವಕ ಗಂಭೀರವಾಗಿ ಗಾಯಗೊಂಡನು. ಪೊಲೀಸರು ಈ ಪ್ರಕರಣದಲ್ಲಿ ಅಂಗೂರ ಆಲಂ ಇವನನ್ನು ಬಂಧಿಸಿದರು. ಪೊಲೀಸರು ಈ ಘಟನೆಯನ್ನು ದ್ವೇಷದಿಂದ ನಡೆದ ದಾಳಿಯೆಂದು ಹೇಳಿದ್ದಾರೆ.

ಮೆರವಣಿಗೆ ಮಾಢಾಳಿರಾಜ ಶಾಹಿ ವೃತ್ತದಲ್ಲಿ ತಲುಪಿದಾಗ ಕೆಲವು ಮುಸಲ್ಮಾನರು ಅಲ್ಲಿ ನುಗ್ಗಿ ಹಿಂದೂ ಯುವಕರೊಂದಿಗೆ ವಾದ ಮಾಡಲು ಪ್ರಾರಂಭಿಸಿದರು. ಇದನ್ನು ಹಿಂದೂಗಳು ವಿರೋಧಿಸಿದಾಗ ಅವರು ರಾಜನ ಪಟೇಲ(ವಯಸ್ಸು 19 ವರ್ಷಗಳು) ಇವನ ಮೇಲೆ ಚೂರಿಯಿಂದ ಹಲ್ಲೆ ಮಾಡಿದರು. ಇದರಲ್ಲಿ ಪಟೇಲ ಗಾಯಗೊಂಡನು. ಅವನನ್ನು ರಕ್ಷಿಸಲು ಮುಂದೆ ಬಂದ ಜಿತೇಶ ಸಿಂಗ ಮೇಲೆಯೂ ಚೂರಿಯಿಂದ ಹಲ್ಲೆ ನಡೆಸಿದರು. ಅವನೂ ಗಾಯಗೊಂಡನು. ನಂತರ ಮುಸಲ್ಮಾನ ಯುವಕನು ಪಲಾಯನ ಮಾಡಿದನು. ಗಾಯಗೊಂಡ ಯುವಕರನ್ನು ಆಸ್ಪತ್ರೆಗೆ ಒಯ್ಯಲಾಯಿತು. ಹಾಗೆಯೇ ಹಿಂದೂಗಳು ಪ್ರತಿಭಟನೆ ನಡೆಸುತ್ತಾ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದರು. ತದನಂತರ ಪೊಲೀಸರು ಅಂಗೂರ ಅಲಂನನ್ನು ಬಂಧಿಸಿದರು.

ರಾಜನ್ ಪಟೇಲ್, ವಿಸರ್ಜನಾ ಮೆರವಣಿಗೆಯಲ್ಲಿ ಮುಸಲ್ಮಾನ ಯುವಕ ಬಂದು ನರ್ತಿಸಲು ಪ್ರಾರಂಭಿಸಿದ್ದರಿಂದ ವಾದ ಪ್ರಾರಂಭವಾಯಿತು ಮತ್ತು ನಂತರ ಗಲಭೆ ಪ್ರಾರಂಭವಾಯಿತು.

ಸಂಪಾದಕೀಯ ನಿಲುವು

ದೇಶದಲ್ಲಿ ಹಿಂದೂಗಳ ಧಾರ್ಮಿಕ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರಿಂದ ನಿರಂತರವಾಗಿ ದಾಳಿಗಳು ನಡೆಯುತ್ತಿರುವಾಗ ಇಲ್ಲಿ ನಡೆದ ಘಟನೆಯನ್ನು `ಹಿಂದಿನ ದ್ವೇಷದ ಕಾರಣದಿಂದ ದಾಳಿ ನಡೆದಿದೆ’ ಎಂದು ಹೇಳಿ ಮುಸಲ್ಮಾನರನ್ನು ರಕ್ಷಿಸುವ ಪ್ರಯತ್ನವಾಗಿದೆ. ಇಂತಹ ಪೊಲೀಸರ ವಿರುದ್ಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಕ್ರಮ ಕೈಕೊಳ್ಳುವುದು ಅಗತ್ಯವಾಗಿದೆ !