|
ನವದೆಹಲಿ – ಓಮರ್ ಅಬ್ದುಲ್ಲಾ ಅಥವಾ ಅವರ ‘ನ್ಯಾಷನಲ್ ಕಾನ್ಫರೆನ್ಸ್’ ಪಕ್ಷದಿಂದ ನಮಗೆ ಯಾವ ರೀತಿಯ ಅಪೇಕ್ಷೆ ಕೂಡ ಇಲ್ಲ. ಕಾಶ್ಮೀರಿ ಹಿಂದುಗಳು ಮುಖ್ಯಮಂತ್ರಿ ಓಮರ್ ಅಬ್ದುಲ್ಲ ಇವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಕಾಶ್ಮೀರಿ ಹಿಂದೂ ಜನಾಂಗ ಸ್ಪಷ್ಟವಾಗಿ ಹೇಳಿದೆ. ಯಾವ ಪಕ್ಷವು ಅನೇಕ ದಶಕಗಳಿಂದ ನಿಯೋಜಿತವಾಗಿ ನಮ್ಮ ನರಸಂಹಾರ ಮಾಡಿದೆ, ಅದೇ ಪಕ್ಷ ಇಂದಿಗೂ ಕೂಡ ನಮ್ಮ ನೋವಿನ ಮತ್ತು ಪರಂಪರೆಯ ಅವಮಾನ ಮಾಡುತ್ತಿದೆ. ಓಮರ ಅಬ್ದುಲ್ಲ ಇವರು ಅವರ ತಂದೆ ಫಾರುಖ್ ಅಬ್ದುಲ್ಲ ಮತ್ತು ತಾತಾ ಶೇಖ್ ಅಬ್ದುಲ್ಲ ಇವರಂತೆಯೇ ಕಾಶ್ಮೀರಿ ಹಿಂದುಗಳನ್ನು ನಿರ್ಲಕ್ಷಿಸಿದ್ದಾರೆ. ನಾವು ಇನ್ನು ಮುಂದೆ ಸುಮ್ಮನೆ ಕೂರುವುದಿಲ್ಲ, ಎಂದು ಕಠಿಣ ನಿಲುವು ತಾಳಿರುವುದಾಗಿ ‘ಯೂಥ್ ಫಾರ್ ಪನೂನ ಕಾಶ್ಮೀರ್’ ಈ ಸಂಘಟನೆ ಕಾಶ್ಮೀರಿ ಹಿಂದುಗಳನ್ನು ಕಾಶ್ಮೀರಿ ಕಣಿವೆಯಲ್ಲಿ ಪುನರ್ ಸ್ಥಾಪಿಸಲು ಕಾರ್ಯನಿರತವಾಗಿರುವ ಸಂಘಟನೆ ಹೇಳಿದೆ. ಅಕ್ಟೋಬರ್ ೧೬ ರಂದು ಓಮರ್ ಅಬ್ದುಲ್ಲಾ ಇವರು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಸ್ಥಾನದ ಪ್ರಮಾಣವಚನ ಸ್ವೀಕರಿಸಿದರು. ಅದರ ಹಿನ್ನೆಲೆಯಲ್ಲಿ ಸಂಘಟನೆಯ ವತಿಯಿಂದ ಪ್ರಸಿದ್ಧಿ ಪತ್ರ ಪ್ರಸಾರ ಮಾಡಲಾಗಿದೆ.
ಪ್ರಸಿದ್ಧಿ ಪತ್ರದಲ್ಲಿನ ಮಹತ್ವಪೂರ್ಣ ಅಂಶಗಳು –
೧. ‘ನ್ಯಾಷನಲ್ ಕಾನ್ಫರೆನ್ಸ್’ ನಿಂದ ಕಾಶ್ಮೀರಿ ಹಿಂದುಗಳಿಗೆ ಮಾಡಿರುವ ವಿಶ್ವಾಸದ್ರೋಹ ಐತಿಹಾಸಿಕ !
‘ನ್ಯಾಷನಲ್ ಕಾನ್ಫರೆನ್ಸ್’ ನಿಂದ ಕಾಶ್ಮೀರಿ ಹಿಂದುಗಳಿಗೆ ಮಾಡಿರುವ ವಿಶ್ವಾಸದ್ರೋಹ ಐತಿಹಾಸಿಕವಾಗಿದೆ. ತಥಾಕಥಿತ ‘ಕಾಶ್ಮೀರಿನ ಸಿಂಹ’ ಆಗಿರುವ ಶೇಖ್ ಅಬ್ದುಲ್ಲ ಇವರು ಅವರ ಪ್ರತ್ಯೇಕತಾವಾದಿ ರಾಜಕಾರಣದಿಂದ ಹಿಂದೂ ಜನಾಂಗವನ್ನು ಉದ್ದೇಶ ಪೂರ್ವಕವಾಗಿ ನಿರ್ಲಕ್ಷಿಸಿತು ಮತ್ತು ವಂಚಿತ ಗೊಳಿಸಿತು. ಅವರ ನೇತೃತ್ವದಲ್ಲಿ ಹಿಂಸೆ ನೀಡುವ ಅಡಿಪಾಯ ಇಡಲಾಯಿತು. ಇದೆಲ್ಲದರ ಪರಿಣಾಮದಿಂದ ನಾವು ಪಲಾಯನ ಮಾಡಬೇಕಾಯಿತು.
೨. ಪಾರುಕ್ ಅಬ್ದುಲ್ಲ ಇವರ ಉಸ್ತುವಾರಿಯಲ್ಲಿ ಕಾಶ್ಮೀರಿ ಹಿಂದುಗಳಿಗೆ ಪಲಾಯನ ಮಾಡಬೇಕಾಯಿತು !
೧೯೯೦ ರಲ್ಲಿ ಯಾವಾಗ ಕಣಿವೆಯಲ್ಲಿ ಜಿಹಾದಿ ಭಯೋತ್ಪಾದನೆಯ ರಕ್ತತಾಂಡವ ಆಯಿತು ಮತ್ತು ಕಾಶ್ಮೀರಿ ಹಿಂದುಗಳಿಗೆ ಕಲ್ಪನಾತೀತ ಭೀಕರತೆ ಎದುರಿಸಬೇಕಾಯಿತು. ಆಗ ಜಮ್ಮು-ಕಾಶ್ಮೀರಿನ ಅಂದಿನ ಮುಖ್ಯಮಂತ್ರಿ ಫಾರುಖ್ ಅಬ್ದುಲ್ಲ ಇವರು ನಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು. ಅವರು ನಮ್ಮ ನರಸಂಹಾರವನ್ನು ನಿರ್ಲಕ್ಷಿಸಿದರು. ಅವರ ಉಸ್ತುವಾರಿಯಲ್ಲಿಯೇ ಕಾಶ್ಮೀರಿ ಹಿಂದುಗಳು ಪಲಾಯನ ಮಾಡುವಂತಹ ಪರಿಸ್ಥಿತಿ ಬಂದಿತು ಮತ್ತು ಸ್ವಂತ ದೇಶದಲ್ಲಿಯೇ ನಿರಾಶ್ರಿತರಾಗಿ ವಾಸಿಸಲು ಅನಿವಾರ್ಯಗೊಳಿಸಿದರು.
೩. ಅಬ್ದುಲ್ಲಾ ಮನೆತನದ ಕೈಯಲ್ಲಿ ನಮ್ಮ ರಕ್ತದಿಂದ ಮಿಂದಿದೆ !
ಈಗ ಓಮರ್ ಅಬ್ದುಲ್ಲಾ ಇವರು ರಕ್ತದಿಂದ ಕೂಡಿರುವ ತಮ್ಮ ಪರಂಪರೆ ಮುಂದುವರೆಸಿದ್ದಾರೆ. ಅವರು ಐತಿಹಾಸಿಕ ತಪ್ಪಿನ ನಿರಾಕರಣೆ ಮಾಡುವುದಕ್ಕಾಗಿ ಏನನ್ನು ಮಾಡಲಿಲ್ಲ ಮತ್ತು ಅವರ ಪಕ್ಷದಿಂದ ಇತ್ತೀಚಿಗೆ ನಡೆದಿರುವ ಕೃತ್ಯಗಳು ನಮ್ಮ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆ ಇದರ ಕುರಿತು ಸಂಪೂರ್ಣವಾಗಿ ಅಗೌರವ ತೋರಿಸುತ್ತದೆ. ನಮ್ಮ ದುಃಖದ ಅಪಹಾಸ್ಯ ಮಾಡಲಾಗುತ್ತದೆ. ನಮ್ಮ ಮೇಲೆ ನಡೆದಿರುವ ಅನ್ಯಾಯದ ಬಗ್ಗೆ ಅವರ ಕುಟುಂಬದ ನಿಲುವಿನಿಂದ ಅವರು ಎಂದಿಗೂ ನಮ್ಮ ಕ್ಷಮೆಯಾಚಿಸಿಲ್ಲ. ನಮಗೆ ಮತ್ತೆ ಕಾಶ್ಮೀರ ಕಣಿವೆಯಲ್ಲಿ ವಾಸಿಸುವುದಕ್ಕಾಗಿ ಅಥವಾ ಅದಕ್ಕಾಗಿ ಮಾಡುವ ಪ್ರಯತ್ನಗಳಿಗೆ ಬೆಂಬಲ ನೀಡುವುದಕ್ಕಾಗಿ ಯಾವುದೇ ಪ್ರಯತ್ನವನ್ನು ಅವರು ಎಂದಿಗೂ ಮಾಡಿಲ್ಲ. ನಮ್ಮ ನರಸಂಹಾರದ ಬಗ್ಗೆ ಅವರ ಮೌನ ಇದು ಅವರ ಕೇವಲ ಹೇಡಿತನ ಅಷ್ಟೇ ಅಲ್ಲದೆ ಅದು ನರಸಂಹಾರದ ಕೃತಿಗಳಲ್ಲಿ ಸಹಭಾಗವಾಗಿದೆ, ಹೀಗೆ ನಾವು ನಂಬುತ್ತೇವೆ. ಅಬ್ದುಲ್ಲಾ ಮನೆತನದ ಕೈಗಳು ನಮ್ಮ ರಕ್ತದಿಂದ ಮಿಂದಿದೆ ಮತ್ತು ಎಷ್ಟೇ ರಾಜಕೀಯ ಪಾವಿತ್ರತೆಯಿಂದ ಅದನ್ನು ತೊಳೆಯಲು ಸಾಧ್ಯವಿಲ್ಲ.
೪. ನಮ್ಮ ಮೇಲಿನ ದೌರ್ಜನ್ಯದ ‘ಸತ್ಯ’ ನಾವು ಎಂದಿಗೂ ಮರೆಯುವುದಿಲ್ಲ !
ಅಬ್ದುಲ್ಲಾ ಕುಟುಂಬ ಮತ್ತು ನ್ಯಾಷನಲ್ ಕಾಂಫರೆನ್ಸ್‌ಗೆ ನಾವು ಎಂದಿಗೂ ಕ್ಷಮಿಸುವುದಿಲ್ಲ. ಅವರಿಂದ ನಮ್ಮ ಮೇಲೆ ಆಗಿರುವ ದೌರ್ಜನ್ಯ ನಾವು ಎಂದಿಗೂ ಮರೆಯುವುದಿಲ್ಲ. ನಾವು ಸುಮ್ಮನಿರುವುದಿಲ್ಲ. ನಮ್ಮ ಅಸ್ತಿತ್ವ ಅಳಿಸಲು ಬಿಡುವುದಿಲ್ಲ ಮತ್ತು ನ್ಯಾಯಕ್ಕಾಗಿ ನಾವು ನಿರಂತರವಾಗಿ ಹೋರಾಡುವೆವು. ನ್ಯಾಷನಲ್ ಕಾನ್ಫರೆನ್ಸ್ ಇತಿಹಾಸದ ಪುನರ್ ಲೇಖನ ಮಾಡುವುದಕ್ಕಾಗಿ ಎಷ್ಟೇ ಪ್ರಯತ್ನ ಮಾಡಿದರು ಕೂಡ ಅವರು ನಮ್ಮ ಮೇಲೆ ಮಾಡಿರುವ ದೌರ್ಜನ್ಯದ ಸತ್ಯ ನಾವು ಎಂದಿಗೂ ಮರೆಯುವುದಿಲ್ಲ.
#KashmiriPandits reject @OmarAbdullah and @JKNC_ and hold the family responsible for their Genocide.@PTIofficial @SanatanPrabhat @TimesNow @timesofindia @IndiaToday @ABPNews @CNNnews18 @ZeeNews @SudarshanNewsTV @OpIndia_com pic.twitter.com/dVUlGfKEzB
— Youth 4 PanunKashmir (@Y4PK_Homeland) October 16, 2024