NASA Launches Europa Clipper : ಗುರು ಗ್ರಹದ ‘ಯುರೋಪಾ’ ಹೆಸರಿನ ಚಂದ್ರನ ಮೇಲೆ ‘ನಾಸಾ’ ಜೀವ ಸೃಷ್ಟಿ ಹುಡುಕಲಿದೆ !

  • ‘ಯುರೋಪಾ ಕ್ಲಿಪರ್’ ಹೆಸರಿನ ಅಂತರಿಕ್ಷಯಾನ ಉಡಾವಣೆ !

  • ೨೦೩೦ ರಲ್ಲಿ ಗುರುವಿನ ಕಕ್ಷೆಗೆ ತಲುಪುವುದು !

ವಾಷಿಂಗ್ಟನ್ (ಅಮೇರಿಕಾ) – ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಕ್ಕಿಂತ ಸಾತ್ವಿಕವಾಗಿರುವ ಗುರು ಗ್ರಹದ ‘ಯುರೋಪಾ’ ಹೆಸರಿನ ಹಿಮಪ್ರದೇಶ ಚಂದ್ರನ ಮೇಲೆ ಜೀವ ಸೃಷ್ಟಿಯ ಹುಡುಕಾಟಕ್ಕಾಗಿ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದಿಂದ ‘ಯುರೋಪಾ ಕ್ಲಿಪರ್’ ಹೆಸರಿನ ಒಂದು ಅಂತರಿಕ್ಷಯಾನ ಕಳುಹಿಸಲಾಗಿದೆ. ಫ್ಲರಿಡಾದ ‘ಕೆನೆಡಿ ಸ್ಪೇಸ್ ಸೆಂಟರ್’ನಿಂದ ಇಲಾನ್ ಮಸ್ಕ್ ಇವರ ಕಂಪನಿಯ ಸ್ಪೇಸ್ ಎಕ್ಸ್ ನ ‘ಫಾಲ್ಕನ್ ಹೆವಿ ರಾಕೆಟ್’ನಿಂದ ಈ ಅಂತರಿಕ್ಷಯಾನದ ಪ್ರಕ್ಷೇಪಣೆ ಮಾಡಲಾಯಿತು. ಈ ಅಭಿಯಾನ ೬ ವರ್ಷ ನಡೆಯುವುದು. ಈ ಕಾಲಾವಧಿಯಲ್ಲಿ ಯಾನ ೩ ಅಬ್ಜ ಕಿ.ಮೀ ದೂರವನ್ನು ಕ್ರಮಿಸುವುದು. ಈ ಅಭಿಯಾನಕ್ಕಾಗಿ ನಾಸಾ ೪೩ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದೆ.

೧. ‘ಯುರೋಪಾ ಕ್ಲಿಪರ್’ ಈ ಬಾಹ್ಯಾಕಾಶ ಯಾನ ಎಪ್ರಿಲ್ ೧೧, ೨೦೩೦ ರಂದು ಗುರುವಿನ ಕಕ್ಷೆಗೆ ಪ್ರವೇಶ ಮಾಡುವುದು. ಅದರ ನಂತರ ಮುಂದಿನ ನಾಲ್ಕು ವರ್ಷಗಳಲ್ಲಿ ಅದು ೪೯ ಬಾರಿ ‘ಯುರೋಪಾ’ ಚಂದ್ರನ ಹತ್ತಿರದಿಂದ ಹೋಗುವುದು.

೨. ವಿಜ್ಞಾನಿಗಳಿಗೆ, ‘ಯುರೋಪಾ’ದ ಹಿಮಾಚ್ಛಾದಿತ ಪೃಷ್ಟಭಾಗದ ಕೆಳಗೆ ನೀರಿನ ಮಹಾಸಾಗರವಿದೆ ಎಂದು ಅನಿಸುತ್ತಿದೆ. ಆದ್ದರಿಂದ ಈ ಚಂದ್ರ ವಾಸಿಸಲು ಯೋಗ್ಯವಾಗಬಹುದು. ಆದ್ದರಿಂದ ವಿಜ್ಞಾನಿಗಳು ಈ ಮಹಾಸಾಗರದ ಆಳ ತಿಳಿದುಕೊಳ್ಳುವ ಪ್ರಯತ್ನ ಮಾಡುವರು. ಇದಲ್ಲದೆ ಅದು ಯುರೋಪಾದ ಪೃಷ್ಟ ಭಾಗದ ಮೇಲೆ ಜೀವನಾವಶ್ಯಕ ಇರುವ ಇತರ ವಿಷಯಗಳು ಶೋಧ ಕೂಡ ನಡೆಸುವುದು. ಹಾಗೂ ಅದು ಚಂದ್ರನ ಪೃಷ್ಟಭಾಗದ ಮೇಲಿನ ಕಾಂತಿಯ ಕ್ಷೇತ್ರ ಕೂಡ ಪರಿಶೀಲಿಸುವುದು.