ಯಾವುದೇ ಸರಕಾರಿ ಹುದ್ದೆಯಲ್ಲಿ ಇಲ್ಲದಿರುವವರಿಗೆ ಸರಕಾರಿ ಬಂಗಲೆ ಹೇಗೆ ಸಿಗುತ್ತದೆ ? ಅಥವಾ ಅದು ‘ಗಾಂಧಿ ಕುಟುಂಬದ ವ್ಯಕ್ತಿಗಳಿಗೆ ಮಾತ್ರ ಸೀಮಿತವಿದೆಯೇ ? ಇದು ಜನರ ಹಣದ ಲೂಟಿಯಾಗಿದೆ. ಸರಕಾರವು ಇದರ ತನಿಖೆಯನ್ನು ನಡೆಸಿ ಸಂಬಂಧಪಟ್ಟವರಿಗೆ ಜೀವಾವಧಿ ಶಿಕ್ಷೆಯನ್ನು ನೀಡಬೇಕು !
ನವ ದೆಹಲಿ – ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ಮಗಳು ಹಾಗೂ ಕಾಂಗ್ರೆಸ್‌ನ ಪ್ರಧಾನಕಾರ್ಯದರ್ಶಿ ಪ್ರಿಯಂಕಾ ವಾದ್ರಾರಿಗೆ ದೆಹಲಿಯಲ್ಲಿನ ಲೊಧಿ ಎಸ್ಟೇಟ್‌ನಲ್ಲಿಯ ಸರಕಾರಿ ಬಂಗಲೆಯನ್ನು ೧ ತಿಂಗಳಲ್ಲಿ ತೊರೆಯಬೇಕು ಎಂದು ಕೇಂದ್ರ ಸರಕಾರ ಆದೇಶ ನೀಡಿದೆ. ಇದರ ಬಗ್ಗೆ ಕೇಂದ್ರದ ವಸತಿ ಹಾಗೂ ನಾಗರಿಕ ವ್ಯವಹಾರ ಸಚಿವಾಲಯದಿಂದ ಪ್ರಿಯಾಂಕಾ ವಾದ್ರಾಗೆ ಪತ್ರವನ್ನು ಕಳುಹಿಸಲಾಗಿದೆ.
೨೩ ವರ್ಷಗಳ ಹಿಂದೆ ಅಂದರೆ ೨೧ ಫೆಬ್ರವರಿ ೧೯೯೭ ರಲ್ಲಿ ವಾದ್ರಾರವರಿಗೆ ಈ ಬಂಗಲೆ ಸಿಕ್ಕಿತ್ತು. ಆಗ ಅವರಿಗೆ ‘ಸ್ಪೆಶಲ್ ಪ್ರೊಟೆಕ್ಷನ್ ಗ್ರೂಪ್’ (‘ಎಸ್.ಪಿ.ಜಿ’ಯ) ಕಮಾಂಡೊಗಳ ಭದ್ರತೆಯನ್ನೂ ನೀಡಲಾಗಿತ್ತು. ಪ್ರಿಯಾಂಕಾ ಗಾಂಧಿ ಈ ಬಂಗಲೆಗಾಗಿ ೩೭ ಸಾವಿರ ತಿಂಗಳ ಬಾಡಿಗೆ ತುಂಬುತ್ತಿದ್ದರು. ೨೦೦೦ ರಲ್ಲಿ ಸರಕಾರವು ಈ ನಿಯಮದಲ್ಲಿ ಬದಲಾವಣೆಯನ್ನು ಮಾಡಿ ‘ಎಸ್.ಪಿ.ಜಿ’ಯ ಭದ್ರತೆ ಇಲ್ಲದ ವ್ಯಕ್ತಿಗೆ ಬಂಗಲೆಯನ್ನು ನೀಡಬಾರದು ಎಂದು ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು. ಇದರೊಂದಿಗೆ ಈ ಹಿಂದೆ ಈ ಶ್ರೇಣಿಯ ಬಂಗಲೆಯನ್ನು ಮಾರುಕಟ್ಟೆಗಿಂತ ಶೇ. ೫೦ ರಷ್ಟು ಹೆಚ್ಚು ದರದಲ್ಲಿ ಬಾಡಿಗೆಯನ್ನು ಹೆಚ್ಚಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು; ಆದರೆ ನಂತರ ಈ ದರವು ಶೇ. ೫೦ ರ ಬದಲಾಗಿ ಶೇ. ೩೦ ರಷ್ಟು ಮಾಡಲಾಯಿತು.
‘ಕೇಂದ್ರದ ಸೇಡಿನ ನಿರ್ಧಾರ ! (ವಂತೆ) – ಕಾಂಗ್ರೆಸ್
ಕಾನೂನುಬಾಹಿರವಾಗಿ ಸರಕಾರಿ ಬಂಗಲೆಯಲ್ಲಿ ವಾಸಿಸುವ ತಮ್ಮ ನಾಯಕರನ್ನು ಬೆಂಬಲಿಸುವ ಕಾಂಗ್ರೆಸ್ ಕಾನೂನುದ್ರೋಹಿಯಾಗಿದೆ !
ಕೇಂದ್ರ ಸರಕಾರಾದ ಈ ನಿರ್ಣಯವನ್ನು ಟೀಕಿಸಿದ ಕಾಂಗ್ರೆಸ್ ನಾಯಕ ರಣದೀಪ ಸುರಜೆವಾಲಾರವರು, “ಪ್ರಿಯಾಂಕಾ ವಾದ್ರಾ ಕಳೆದ ಕೆಲವು ದಿನಗಳಿಂದ ಉತ್ತರಪ್ರದೇಶ ಸರಕಾರ ಹಾಗೂ ಕೇಂದ್ರ ಸರಕಾರವನ್ನು ಟೀಕಿಸುತ್ತಿದ್ದಾರೆ. ಆದ್ದರಿಂದ ಸೇಡಿಗಾಗಿ ಈ ನಿರ್ಧಾರನ್ನು ತೆಗೆದುಕೊಳ್ಳಲಾಗಿದೆ” ಎಂದು ಹೇಳಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ಪಂಜಾಬ್‌ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಇವರೂ ಕೇಂದ್ರ ಸರಕಾರದ ಈ ನಿರ್ಣಯವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.