ನಾನು ಕೆನಡಾದ ಪ್ರಧಾನಿ ಟ್ರುಡೋ ಜೊತೆ ಸಂಪರ್ಕದಲ್ಲಿದ್ದೇನೆ ! – ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು

ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು ಇವನ ಸ್ವೀಕೃತಿ

ಓಟಾವಾ (ಕೆನಡಾ) – ‘ಸಿಖ್ ಫಾರ್ ಜಸ್ಟಿಸ್’ ಭಾರತದಿಂದ ನಿಷೇಧಿಸಿರುವ ಈ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಗುರುಪತವಂತ ಸಿಂಹ ಪನ್ನು ಇವನು ಒಂದು ಸಂದರ್ಶನದಲ್ಲಿ, ತಾನು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಇವರ ಸಂಪರ್ಕದಲ್ಲಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಕೆನಡಾದ ವಾರ್ತಾ ವಾಹಿನಿ ‘ಸಿಬಿಸಿ ನ್ಯೂಸ್’ ಗೆ ನೀಡಿರುವ ಸಂದರ್ಶನದಲ್ಲಿ ಪನ್ನು, ಅವನ ಸಂಘಟನೆ ‘ಸಿಖ್ ಫಾರ್ ಜಸ್ಟಿಸ್’ ಕಳೆದ ೨-೩ ವರ್ಷಗಳಿಂದ ಕೆನಡಾದ ಪ್ರಧಾನಮಂತ್ರಿ ಜಸ್ಟೀನ್ ಟ್ರುಡೋ ಇವರ ಸಂಪರ್ಕದಲ್ಲಿದ್ದಾನೆ. ಪನ್ನು ಇವನು ಟ್ರುಢೋಗೆ ಭಾರತೀಯ ರಾಯಭಾರಿ ಕಚೇರಿಯ ಗುಪ್ತಚರ ಜಾಲದ ಮಾಹಿತಿ ನೀಡಿದ್ದನು. ಪನ್ನು ಈಗ ಅಮೆರಿಕದಲ್ಲಿ ವಾಸಿಸುತ್ತಿದ್ದಾನೆ. ಅವನ ಹತ್ತಿರ ಅಮೆರಿಕ ಮತ್ತು ಕೆನಡಾ ಈ ಎರಡು ದೇಶದ ಪೌರತ್ವ ಇದೆ.

ಸಂಪಾದಕೀಯ ನಿಲುವು

ಭಯೋತ್ಪಾದಕ ಕಾರ್ಯ ಚಟುವಟಿಕೆ ಮಾಡುವ ಸಂಘಟನೆಯ ಮೇಲೆ ಭಾರತ ನಿಷೇಧ ಹೇರಿರುವಾಗ, ಅದರ ಮುಖ್ಯಸ್ಥರ ಜೊತೆಗೆ ಸಂಬಂಧ ಹೊಂದುವ ಕೆನಡಾದ ಪ್ರಧಾನಿ ಭಾರತ ವಿರೋಧಿಯಾಗಿದ್ದಾರೆ, ಇದೇ ಇದರಿಂದ ಸ್ಪಷ್ಟವಾಗುತ್ತದೆ. ಭಯೋತ್ಪಾದಕರನ್ನು ಬೆಂಬಲಿಸುವ ಟ್ರುಡೋ ಇವರಿಂದ ಭಾರತದ ಮೇಲೆ ಆರೋಪ ಹೋರಿಸದೆ ಇರುವುದು ಆಶ್ಚರ್ಯ !