ತಬಲಿಗೀ ಜಮಾತ್‌ನ ೨ ಸಾವಿರದ ೬೦೦ ಸದಸ್ಯರ ಮೇಲಿನ ಖಟ್ಲೆ ಮುಗಿಯುವ ತನಕ ದೇಶಬಿಟ್ಟು ಹೊಗಲು ಸಾಧ್ಯವಿಲ್ಲ !

ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರ

ನವ ದೆಹಲಿ – ಮಾರ್ಚ್ ೨೦೨೦ ರಲ್ಲಿ ದೆಹಲಿಯ ನಿಝಾಮುದ್ದೀನ್‌ನಲ್ಲಿ ತಬಲಿಗೀ ಜಮಾತ್‌ನ ಮರಕಝನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಕೊರೋನಾ ಸೋಂಕನ್ನು ದೇಶದಾದ್ಯಂತ ಹಬ್ಬಿಸಿದ ೨ ಸಾವಿರದ ೬೦೦ ಕ್ಕೂ ಹೆಚ್ಚು ತಬಲಿಗೀಗಳು ತಮ್ಮ ದೇಶಕ್ಕೆ ಹೋಗಲು ಸಾಧ್ಯವಿಲ್ಲ, ಎಂಬ ಪ್ರತಿಜ್ಞಾಪತ್ರವನ್ನು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದೆ. ಇದರಲ್ಲಿ ‘ಇವರೆಲ್ಲರ ಮೇಲೆ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಖಟ್ಲೆಗಳು ಮುಗಿಯುವ ವರೆಗೆ ಅವರು ಭಾರತದಲ್ಲೇ ಇರಬೇಕು’, ಎಂದು ಸರಕಾರ ತಿಳಿಸಿದೆ. ಇನ್ನೊಂದೆಡೆ ಸರಕಾರದ ಈ ನಿರ್ಣಯದ ವಿರುದ್ಧ ತಬಲಿಗೀ ಜಮಾತ್ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದು ಅದರ ಬಗ್ಗೆ ಜುಲೈ ೧೦ ರಂದು ಆಲಿಕೆಯಾಗಲಿದೆ.

ಕೊರೋನಾದಿಂದಾಗಿ ಹೇರಿದ ಸಂಚಾರ ನಿಷೇಧದ ಕಾಲಾವಧಿಯಲ್ಲಿ ಸರಕಾರ ನೀಡಿದ ನಿರ್ದೇಶನ ಹಾಗೂ ರಾಜ್ಯ ಸರಕಾರಗಳು ಅದೇರೀತಿ ಪೊಲೀಸರು ನೀಡಿದ ಆದೇಶವನ್ನು ಉಲ್ಲಂಘಿಸಿದೆ ಎಂಬ ಆರೋಪವು ಈ ವಿದೇಶಿ ತಬಲಿಗೀಯರ ಮೇಲಿದೆ. ವಿವಿಧ ರಾಜ್ಯಗಳಲ್ಲಿ ಈ ಅಪರಾಧವು ದಾಖಲಾಗಿವೆ. ಕೇಂದ್ರ ಸರಕಾರವು ತಮ್ಮ ‘ಬ್ಲಾಕ್ ಲೀಸ್ಟ್’ನಲ್ಲಿ ಇವರ ಹೆಸರುಗಳನ್ನು ಹಾಕಿದ್ದು ಅವರ ವೀಸಾವನ್ನೂ ರದ್ದುಪಡಿಸಲಾಗಿದೆ. ಆದ್ದರಿಂದ ಈ ಪ್ರಕರಣದ ಆಲಿಕೆಯಾಗುವ ತನಕ ತಬಲಿಗೀಯರು ಭಾರತದಿಂದ ಹೊರಹೋಗಲು ಸಾಧ್ಯವಿಲ್ಲ.