ನವ ದೆಹಲಿ – ‘ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್’ ನ ಅಧ್ಯಕ್ಷ ಬದರುದ್ದೀನ್ ಅಜಮಲ್ ಇವರು ನೂತನ ಸಂಸದ್ ಭವನವನ್ನು ‘ವಕ್ಫ್ ಬೋರ್ಡ್’ ನ ಜಾಗದಲ್ಲಿ ಕಟ್ಟಲಾಗಿದೆ ಎಂದು ದಾವೆ ಮಾಡಿದ್ದಾರೆ. ಸರಕಾರವು ವಕ್ಫ್ ಜಮೀನನ್ನು ಕಬಳಿಸಬೇಕೆಂದಿದೆ. ವಕ್ಫ್ ಜಾಗವನ್ನು ಮುಸಲ್ಮಾನರಿಗೆ ಹಿಂತಿರುಗಿಸಬೇಕು, ಎಂದೂ ಕೂಡ ಅವರು ಆಗ್ರಹಿಸಿದ್ದಾರೆ. ಬದರುದ್ದೀನ್ ಅಜಮಲ್ ಇವರ ಈ ದಾವೆಯಿಂದ ಹೊಸ ರಾಜಕೀಯ ಬಿರುಗಾಳಿ ಎದ್ದಿದೆ.
ಸಂಪಾದಕೀಯ ನಿಲುವು‘ನಾಲಿಗೆಗೆ ಎಲುಬು ಇಲ್ಲ ಅಂತ ಹೇಗೆ ಬೇಕಾದರೂ ಹೊರಳಿಸಬಹುದು’, ಈ ಪ್ರವೃತ್ತಿಯ ಅಜಮಲ್ ! ಹೀಗೆ ಇದ್ದರೆ, ಸಂಸತ್ತಿನ ಕಾಮಗಾರಿ ನಡೆಯುವ ಸಮಯದಲ್ಲಿ ಅಜಮಲ್ ಇದನ್ನು ಏಕೆ ಹೇಳಲಿಲ್ಲ ? ಅಥವಾ ಅದರ ವಿರುದ್ಧ ಅವರು ನ್ಯಾಯಾಲಯಕ್ಕೆ ಏಕೆ ಹೋಗಲಿಲ್ಲ ? ಸರಕಾರ ಇಂತಹವರ ಮೇಲೆ ಕ್ರಮ ಕೈಗೊಳ್ಳಬೇಕು ! ಭವಿಷ್ಯದಲ್ಲಿ ಇಂತಹವರು ‘ಈ ದೇಶ ‘ವಕ್ಫ್ ಬೋರ್ಡ್’ ನ ಜಾಗದಲ್ಲಿ ಇದೆ’, ಎಂದು ಹೇಳಿದರೆ ಮತ್ತು ಕಾಂಗ್ರೆಸ್ ಸಹಿತ ಎಲ್ಲಾ ಹಿಂದೂ ವಿರೋಧಿ ಪಕ್ಷದವರು ಅದನ್ನು ಒಪ್ಪಿದರೆ ಆಶ್ಚರ್ಯ ಪಡಬಾರದು ! ಹೀಗೆ ಆಗಬಾರದೆಂದಿದ್ದರೆ, ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವುದು ಅನಿವಾರ್ಯ ! |