ಸಂಚಾರ ನಿಷೇದದ ಕಾಲಾವಧಿಯಲ್ಲಿ ಆಂಧ್ರಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ಹೆಚ್ಚಳ

ಸಮಾಜಕ್ಕೆ ಸಾಧನೆಯನ್ನು ಕಲಿಸದಿರುವುದರ ಪರಿಣಾಮವಾಗಿದೆ. ಸಾಧನೆಯನ್ನು ಮಾಡುವ ಸಮಾಜ ಇರುತ್ತಿದ್ದರೆ, ಈ ರೀತಿಯ ಸ್ಥಿತಿ ಬರುತ್ತಿರಲಿಲ್ಲ !

ವಿಶಾಖಾಪಟ್ಟಣಮ್ (ಆಂಧ್ರಪ್ರದೇಶ) – ಕೊರೋನಾದಿಂದಾಗಿ ಜಾರಿಗೊಳಿಸಲಾಗಿದ್ದ ಸಂಚಾರ ನಿಷೇಧದಿಂದಾಗಿ ಆಂಧ್ರಪ್ರದೇಶ ರಾಜ್ಯದ ದುರ್ಗಮ ಗ್ರಾಮದಲ್ಲಿ ಮಹಿಳೆಯರ ಮೇಲೆ ಕೌಟುಂಬಿಕ ಹಿಂಸಾಚಾರ, ಶೋಷಣೆ ಇತ್ಯಾದಿ ಘಟನೆಗಳು ದ್ವಿಗುಣಗೊಂಡಿರುವುದು ಬೆಳಕಿಗೆ ಬಂದಿದೆ. ಸಂಚಾರ ನಿಷೇಧದ ಮೊದಲು ಮಹಿಳೆಯರ ಸಂದರ್ಭದಲ್ಲಿ ವಾರದಲ್ಲಿ ಸರಾಸರಿ ೧೦ ದೂರನ್ನು ದಾಖಲಿಸಲಾಗುತ್ತಿತ್ತು. ಸಂಚಾರ ನಿಷೇಧದಲ್ಲಿ ೧ ವಾರದಲ್ಲೇ ಮಹಿಳೆಯರ ಮೇಲೆ ಹಿಂಸಾಚಾರದ ೨೦ ಘಟನೆಗಳು ಬೆಳಕಿಗೆ ಬರುತ್ತಿದೆ. ಮಹಿಳಾ ಆಯೋಗದಲ್ಲಿ ಪ್ರತಿತಿಂಗಳು ೩೦೦ ದೂರು ಆಂಧ್ರಪ್ರದೇಶ ಮಹಿಳಾ ಆಯೋಗದ ಅಧ್ಯಕ್ಷೆ ವಾಸಿ ರೆಡ್ಡಿಯವರು, “ಸಂಚಾರ ನಿರ್ಬಂದದ ಕಾಲದಲ್ಲಿ ನಮ್ಮಲ್ಲಿ ಪ್ರತಿತಿಂಗಳು ಸುಮಾರು ೩೦೦ ದೂರುಗಳು ಬಂದಿವೆ. ಈ ಅಂಕಿಅಂಶಗಳು ಹೆಚ್ಚಿದೆ; ಏಕೆಂದರೆ ಹೆಚ್ಚಿನ ಮಹಿಳೆಯರು ದೂರನ್ನು ದಾಖಲಿಸಲು ಪೊಲೀಸ್ ಠಾಣೆ ಅಥವಾ ಆಯೋಗದ ಬಳಿ ಹೋಗುವುದಿಲ್ಲ. ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ಸರಾಯಿ ಕುಡಿದು ಮಹಿಳೆಯರಿಗೆ ಹೊಡೆಯುವ ಪ್ರಕರಣಗಳಾಗುತ್ತವೆ”, ಎಂದಿದ್ದಾರೆ.

ಸರಾಯಿ ಕುಡಿದ ಮೇಲೆ ಮಹಿಳೆಯರ ಮೇಲೆ ಹಲ್ಲೆಯಾಗುತ್ತಿದ್ದರಿಂದ ಸರಾಯಿ ಅಂಗಡಿಗಳನ್ನು ಕೂಡಲೇ ನಿಲ್ಲಿಸಬೇಕು ! – ಆಂಧ್ರಪ್ರದೇಶದ ಗೃಹಸಚಿವ ಮೆಕಾಥೋತಿ ಸುಚರಿತಾ

ಸರಾಯಿ ಕುಡಿಯುವುದರಿಂದ ಅಪರಾಧಗಳು ನಡೆಯುತ್ತದೆ, ಎಂಬುದು ಸ್ಪಷ್ಟವಿರುವಾಗ ಸಂಪೂರ್ಣ ದೇಶದಲ್ಲೇ ಸರಾಯಿ ಮೇಲೆ ನಿರ್ಬಂಧ ಏಕೆ ಹೇರುವುದಿಲ್ಲ ? ಕೇವಲ ಆದಾಯಕ್ಕಾಗಿ ಸರಾಯಿ ಮಾರಾಟ ಆರಂಭಿಸುವುದು, ಇದು ಸರಕಾರಕ್ಕೆ ನಾಚಿಕೆಯ ವಿಷಯವಾಗಿದೆ.

ಆಂಧ್ರಪ್ರದೇಶದ ಗೃಹಸಚಿವ ಮೆಕಾಥೋತಿ ಸುಚರಿತಾರವರು, ‘ಈ ರೀತಿಯ ದೂರುಗಳ ಪ್ರಮಾಣ ಹೆಚ್ಚಾದಾಗ ರಾಜ್ಯ ಸರಕಾರವು ಒಂದು ಸಮೀಕ್ಷೆಯನ್ನು ನಡೆಸಿತು. ಅದರಲ್ಲಿ ಅನೇಕ ಆಘಾತಕಾರಿ ಅಂಶಗಳು ಬೆಳಕಿಗೆ ಬಂದವು. ಪುರುಷನು ಸರಾಯಿ ಕುಡಿದು ಮನೆಗೆ ಬಂದಾಗ ಮಹಿಳೆಯರ ಮೇಲೆ ಹಲ್ಲೆ ಮಾಡುತ್ತಾನೆ, ಅದೇ ರೀತಿ ಅವರ ಮೇಲೆ ಶೋಷಣೆ ಮಾಡುತ್ತಾನೆ. ಹಾಗಾಗಿ ಸರಾಯಿ ಮಾರಾಟವನ್ನು ಕೂಡಲೇ ನಿಲ್ಲಿಸಲಾಯಿತು ಹಾಗೂ ಬೆಲೆಯೂ ಹೆಚ್ಚಿಸಲಾಯಿತು. ೫ ವರ್ಷದಲ್ಲಿ ಸರಾಯಿ ಮಾರಾಟ ಸಂಪೂರ್ಣ ನಿಲ್ಲಿಸಲಾಗುವುದು. ಸರಾಯಿಯಿಂದ ಸಿಗುವ ಆದಾಯದ ಪರ್ಯಾಯದ ಬಗ್ಗೆ ವಿಚಾರ ಮಾಡಲಾಗುತ್ತಿದೆ” ಎಂದು ಹೇಳಿದರು.