‘ಸಡಕ್ ೨ ಚಲನಚಿತ್ರದ ಪೋಸ್ಟ್‌ರ್‌ನಲ್ಲಿ ಕೈಲಾಸ ಪರ್ವತದ ಛಾಯಾಚಿತ್ರ !

ಹಿಂದೂಗಳ ಭಾವನೆಯನ್ನು ನೋಹಿಸಿದ ಪ್ರಕರಣದಲ್ಲಿ ಮಹೇಶ ಭಟ್ ಹಾಗೂ ಆಲಿಯಾ ಭಟ್ ಇವರ ವಿರುದ್ಧ ದೂರು ದಾಖಲು

ಮುಂಬೈ – ‘ಓಟಿಟಿನ ಮೇಲೆ ಶೀಘ್ರದಲ್ಲಿಯೇ ಪ್ರದರ್ಶನಗೊಳ್ಳಲಿರುವ ‘ಸಡಕ್ ೨ ಎಂಬ ಚಲನಚಿತ್ರದ ಫಲಕದ ಮೇಲೆ (ಪೋಸ್ಟರ್) ಕೈಲಾಸ ಮಾನಸಸರೋವರ ಪರ್ವತದ ಛಾಯಾಚಿತ್ರವನ್ನು ತೋರಿಸಿ ಅದರ ಮೇಲಿನ ಬದಿಯಲ್ಲಿ ‘ಸಡಕ್ ೨ ಎಂದು ಬರೆಯಲಾಗಿದೆ. ಅದೇ ರೀತಿ ಅದರ ಕೆಳಗೆ ರಸ್ತೆಯ ಚಿತ್ರವನ್ನು ತೋರಿಸಲಾಗಿದೆ. ಹಿಂದೂ ಧರ್ಮದಲ್ಲಿ ಕೈಲಾಸ ಪರ್ವತವನ್ನು ಧಾರ್ಮಿಕದೃಷ್ಟಿಯಿಂದ ಮಹತ್ವದ ಸ್ಥಾನವಾಗಿದೆ ಹೀಗಿರುವಾಗಲೂ ಫಲಕದ ಮೇಲೆ ‘ಸಡಕ್ ೨ ಎಂದು ಬರೆದು ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸಿದ ಪ್ರಕರಣದಲ್ಲಿ ಈ ಚಲನಚಿತ್ರದ ನಿರ್ದೇಶಕರಾದ ಮಹೇಶ ಭಟ್ ಹಾಗೂ ನಟಿ ಆಲಿಯಾ ಭಟ್ ವಿರುದ್ಧ ಭಾರತ ದಂಡ ಸಂಹಿತೆ ಕಲಮ್ ೨೯೫ (ಅ ) ಹಾಗೂ ೧೨೦ (ಬ) ಅನ್ವಯ ಅಪರಾಧವನ್ನು ದಾಖಲಿಸಲಾಗಿದೆ. ‘ಡಿಝನೀ ಹಾಟ್ ಸ್ಟಾರ್ ಜಾಲತಾಣದಲ್ಲಿ ಈ ಚಲನಚಿತ್ರವು ಪ್ರದರ್ಶನಗೊಳ್ಳಲಿದೆ. ನ್ಯಾಯವಾದಿ ಪ್ರಿಯರಂಜನ್ ಅಣುರವರು ನ್ಯಾಯಾಲಯಕ್ಕೆ ಈ ದೂರು ನೀಡಿದ್ದಾರೆ. ಮುಂಬರುವ ಜುಲೈ ೮ರಂದು ಈ ಪ್ರಕರಣದಲ್ಲಿ ಆಲಿಕೆ ನಡೆಯಲಿದೆ. ಈ ಚಲನಚಿತ್ರದಲ್ಲಿ ನಟಿ ಆಲಿಯಾ ಭಟ್ ಇವರೊಂದಿಗೆ ಅವರ ಸಹೋದರಿ ಪೂಜಾ ಭಟ್ ನಟ ಸಂಜಯ ದತ್ತ ಹಾಗೂ ಆದಿತ್ಯ ರಾಯ್ ಕಪೂರ್‌ರವರು ಕೂಡ ನಟಿಸಿದ್ದಾರೆ.