ಲೇಹ್‌ ಗೆ ದಿಢೀರ್ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

ಲೇಹ್ – ಚೀನಾದಿಂದ ಭಾರತಕ್ಕಾಗುವ ಆತಂಕದ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜುಲೈ ೩ ರಂದು ಲೇಹಗೆ ದಿಢೀರ್ ಭೇಟಿ ನೀಡಿದ್ದಾರೆ. ಅವರು ನೀಮು ಎಂಬಲ್ಲಿಯ ‘ಫಾರ್‌ವರ್ಡ್ ಪೋಸ್ಟ’ಗೆ ಹೋಗಿ ಸೈನಿಕರನ್ನು ಭೇಟಿಯಾದರು. ಇದು ಸಮುದ್ರ ಮಟ್ಟಕ್ಕಿಂತ ಸುಮಾರು ೧೧ ಸಾವಿರ ಅಡಿಯಷ್ಟು ಎತ್ತರದಲ್ಲಿದ್ದು ಇದು ಜಗತ್ತಿನ ಎಲ್ಲಕ್ಕಿಂತ ಎತ್ತರದ ಹಾಗೂ ಸವಾಲಿನ ಸ್ಥಳ ಎಂದು ಹೇಳಲಾಗುತ್ತದೆ. ಪ್ರಧಾನಮಂತ್ರಿ ಮೋದಿಯವರೊಂದಿಗೆ ರಕ್ಷಣಾ ಮುಖ್ಯಸ್ಥ ಬಿಪಿನ ರಾವತ್ ಹಾಗೂ ಸೇನಾಮುಖ್ಯಸ್ಥ ಎಮ್.ಎಮ್. ನರವಣೆ ಇವರೂ ಉಪಸ್ಥಿತರಿದ್ದರು.

ಈ ಸಮಯದಲ್ಲಿ ಪ್ರಧಾನಮಂತ್ರಿಯವರು ಸೈನ್ಯದಳ, ವಾಯುದಳ ಹಾಗೂ ಐಟಿಬಿಪಿಯ ಸೈನಿಕರನ್ನು ಭೇಟಿಯಾಗಿ ಅವರೊಂದಿಗೆ ಚರ್ಚೆಯನ್ನು ಮಾಡಿದ್ದಾರೆ. ಈ ಸಮಯದಲ್ಲಿ ಸೈನ್ಯಾಧಿಕಾರಿಯು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಲ್ಲಿ ಘಟಿಸಿದೆ ಪ್ರಸಂಗದ ಮಾಹಿತಿಯನ್ನು ನೀಡಿದರು. ಈ ಸಮಯದಲ್ಲಿ ಇಲ್ಲಿ ದೊಡ್ಡಪ್ರಮಾಣದಲ್ಲಿ ಸೈನಿಕರು ಉಪಸ್ಥಿತರಿದ್ದರು. ಈ ಪ್ರಸಂಗದಲ್ಲಿ ಸೈನಿಕರು ‘ಭಾರತ ಮಾತಾ ಕೀ ಜೈ’ ಹಾಗೂ ‘ವಂದೇ ಮಾತರಮ್’ ಎಂದು ಆವೇಶಪೂರ್ಣ ಘೋಷಣೆಯನ್ನು ಕೂಗಿದರು.