ಹಿಂದೂ ದ್ವೇಷ ನಿರ್ಮಾಣವಾಗಿ ದೇವಸ್ಥಾನ ಧ್ವಂಸಗೊಳಿಸಿದ !
ಸಿಕಂದರಾಬಾದ (ತೆಲಂಗಾಣ) – ಇಲ್ಲಿನ ಮುತ್ಯಾಲಮ್ಮ ದೇವಸ್ಥಾನವನ್ನು ಧ್ವಂಸ ಮಾಡಿರುವ ಪ್ರಕರಣದಲ್ಲಿ ಸಲ್ಮಾನ ಸಲೀಮನನ್ನು ಬಂಧಿಸಲಾಗಿದೆ. ಅವನು ಮುಂಬ್ರಾ (ಜಿಲ್ಲೆ ಥಾಣೆ) ಇಲ್ಲಿನ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿದ್ದಾನೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಅವನು ಜಾಕಿರ್ ನಾಯಿಕನ ವೀಡಿಯೋ ನೋಡಿ ಹಿಂದೂಗಳ ವಿರುದ್ಧ ಮನಸ್ಸಿನಲ್ಲಿ ದ್ವೇಷದ ಭಾವನೆ ನಿರ್ಮಾಣವಾಗಿತ್ತು. ಅದರಿಂದಲೇ ಅವನು ದೇವಸ್ಥಾನವನ್ನು ಧ್ವಂಸಗೊಳಿಸಿದನು ಎಂದು ತಿಳಿಸಿದನು.
ಮುಂಬಯಿಯಲ್ಲಿಯೂ ದೇವಸ್ಥಾನವನ್ನು ಧ್ವಂಸಗೊಳಿಸಿದ್ದನು
ಹಾಗೆಯೇ ಈ ಹಿಂದೆಯೂ ಅವನು ಈ ರೀತಿಯ ಕೃತ್ಯಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ವಸಯಿ-ವಿರಾರ(ಅಗಸ್ಟ 2024)ಮತ್ತು ಮುಂಬಯಿ(ಸೆಪ್ಟೆಂಬರ್ 2024) ಇಲ್ಲಿಯೂ ಅವನು ದೇವಸ್ಥಾನ ಧ್ವಂಸಗೊಳಿಸಿದ್ದನು.
2022 ರಲ್ಲಿ ಶ್ರೀ ಗಣೇಶೋತ್ಸವ ಮಂಟಪದಲ್ಲಿ ಬೂಟು ಧರಿಸಿ ಹೋಗುವುದು ಮತ್ತು ಮೂರ್ತಿಯ ಎದುರಿಗೆ ಆಕ್ಷೇಪಾರ್ಹ ರೀತಿಯಲ್ಲಿ ವರ್ತಿಸಿದ್ದರಿಂದ ಅವನ ಮೇಲೆ ಅಪರಾಧವನ್ನು ದಾಖಲಿಸಲಾಗಿತ್ತು. ವಸಯಿ-ವಿರಾರ್ ಇಲ್ಲಿನ ಭಗವಾನ ಶಂಕರಾಚಾರ್ಯ ದೇವಸ್ಥಾನ ಧ್ವಂಸಗೊಳಿಸಿರುವ ಪ್ರಕರಣದಲ್ಲಿ ಅವನನ್ನು ಬಂಧಿಸಲಾಗಿತ್ತು. (ಈ ಹಿಂದೆ ಮಾಡಿರುವ ಇಂತಹ ಘಟನೆಗಳ ನಂತರ, ಅವನ ಬಂಧನವಾಗಿದ್ದರೂ ಅವನ ಮೇಲೆ ಯಾವುದೇ ಪರಿಣಾಮವಾಗಿಲ್ಲ ಮತ್ತು ಅವನು ಪುನಃ ಬೇರೆ ನಗರಕ್ಕೆ ಹೋಗಿ ಅದೇ ಅಪರಾಧವನ್ನು ಮಾಡಿದನು. ಇದರಿಂದ ಇಂತಹ ದ್ವೇಷದಿಂದ ತುಂಬಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಯಾರಾದರೂ ಕೋರಿದರೆ ಅದನ್ನು ತಪ್ಪೆಂದು ಪರಿಗಣಿಸಬಾರದು ! – ಸಂಪಾದಕರು)
ಸಂಪಾದಕೀಯ ನಿಲುವು
|