‘Jai Shri Ram’ in Mosque Case : ಮಸೀದಿಯಲ್ಲಿ ‘ಜೈ ಶ್ರೀರಾಮ’ ಘೋಷಣೆ ಕೂಗಿದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ ! – ಕರ್ನಾಟಕ ಹೈಕೋರ್ಟ್‌

ಬೆಂಗಳೂರು – ಮಸೀದಿಯಲ್ಲಿ ‘ಜೈ ಶ್ರೀರಾಮ’ ಘೋಷಣೆ ಕೂಗಿದ್ದ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ನಡೆಯುತ್ತಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಕೈಬಿಡುವಂತೆ ಕರ್ನಾಟಕ ಉಚ್ಚನ್ಯಾಯಾಲಯ ನಿರ್ದೇಶನ ನೀಡಿದೆ. ಮಸೀದಿಯಲ್ಲಿ `ಜೈ ಶ್ರೀರಾಮ’ನ ಘೋಷಣೆ ಕೂಗಿದ್ದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ ಎಂದು ಕರ್ನಾಟಕ ಉಚ್ಚನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

1. ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳಾದ ಇಬ್ಬರು ವ್ಯಕ್ತಿಗಳು ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಒಂದು ರಾತ್ರಿ ಸ್ಥಳೀಯ ಮಸೀದಿಯನ್ನು ಪ್ರವೇಶಿಸಿ ‘ಜೈ ಶ್ರೀ ರಾಮ’ ಎಂದು ಕೂಗಿದ್ದರು.

2. ತದನಂತರ ಸ್ಥಳೀಯ ಪೊಲೀಸರು ಅವರ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 295 (ಎ) (ಧಾರ್ಮಿಕ ಶ್ರದ್ಧೆಯ ಅಪಮಾನ ಮಾಡುವುದು), 447 (ಅಪರಾಧಿ ನುಸುಳುವಿಕೆ) ಮತ್ತು 506 (ಬೆದರಿಕೆ) ಈ ಕಲಂಗಳ ಅಡಿಯಲ್ಲಿ ಅಪರಾಧವನ್ನು ದಾಖಲಿಸಿದ್ದರು. ಆರೋಪಿಗಳು ತಮ್ಮ ವಿರುದ್ಧದ ಆರೋಪ ರದ್ದುಗೊಳಿಸುವಂತೆ ಕೋರಿ ಉಚ್ಚನ್ಯಾಯಾಲಯದ ಮೆಟ್ಟಿಲೇರಿದ್ದರು.

3. ರಾಜ್ಯ ಸರಕಾರವು ಅರ್ಜಿದಾರರ ಅರ್ಜಿಯನ್ನು ವಿರೋಧಿಸಿತು ಮತ್ತು ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆಯ ಅವಶ್ಯಕತೆಯಿದೆ ಎಂದು ಹೇಳಿ ಅವರ ಕಸ್ಟಡಿಗೆ ಒತ್ತಾಯಿಸಿತು; ಆದರೆ ‘ಜೈ ಶ್ರೀರಾಮ’ ಘೋಷಣೆ ಕೂಗಿದ್ದರಿಂದ ಸಾರ್ವಜನಿಕ ಭದ್ರತೆಗೆ ಯಾವುದೇ ಅಪಾಯ ನಿರ್ಮಾಣವಾಗಿಲ್ಲವೆಂದು ತಿಳಿಸುತ್ತಾ, ಉಚ್ಚನ್ಯಾಯಾಲಯವು ಈ ಬೇಡಿಕೆಯನ್ನು ತಿರಸ್ಕರಿಸಿತು.