ನ್ಯಾಯ ದೇವತೆಯ ಕಣ್ಣಿನ ಮೇಲಿನ ಪಟ್ಟಿ ತೆರೆವು : ಕೈಯಲ್ಲಿ ಖಡ್ಗದ ಬದಲು ಸಂವಿಧಾನ !

ನವ ದೆಹಲಿ – ನ್ಯಾಯಾಲಯದಲ್ಲಿ ಕಣ್ಣಿನ ಮೇಲೆ ಪಟ್ಟಿ ಕಟ್ಟಿರುವ ನ್ಯಾಯ ದೇವತೆಯ ಮೂರ್ತಿ ನಾವು ನೋಡಿರಬಹುದು; ಆದರೆ ಈ ಪಟ್ಟಿ ತೆಗೆಯಲಾಗಿದೆ. ಅದರ ಜೊತೆಗೆ ಆಕೆಯ ಕೈಯಲ್ಲಿ ಖಡ್ಗದ ಬದಲು ಸಂವಿಧಾನ ನೀಡಲಾಗಿದೆ. ಖಡ್ಗ ಇದು ಹಿಂಸೆಯ ಪ್ರತೀಕವಾಗಿದೆ, ಎಂದು ನ್ಯಾಯಾಧೀಶರ ಅಭಿಪ್ರಾಯವಾಗಿದೆ. ನ್ಯಾಯಾಲಯ ಹಿಂಸಾಚಾರದ ಮೂಲಕ ನ್ಯಾಯ ನೀಡುವುದಿಲ್ಲ, ಅದು ಸಂವಿದಾನದ ಕಾನೂನಿನ ಪ್ರಕಾರ ನ್ಯಾಯ ನೀಡುತ್ತದೆ. ಇನ್ನೊಂದು ಕೈಯಲ್ಲಿ ತಕ್ಕಡಿ ಯೋಗ್ಯವಾಗಿದೆ, ಅದು ಪ್ರತಿಯೊಬ್ಬರಿಗೂ ಸಮಾನ ನ್ಯಾಯದ ಪ್ರತೀಕವಾಗಿದೆ.

ನ್ಯಾಯ ದೇವತೆಯ ಮೂರ್ತಿ ಭಾರತಕ್ಕೆ ಎಲ್ಲಿಂದ ಬಂದಿತು ?

ನ್ಯಾಯದ ದೇವಿ ಈಕೆ ಒಂದು ಪ್ರಾಚೀನ ಗ್ರೀಕ ದೇವಿ ಆಗಿದ್ದಾಳೆ, ಆಕೆಯ ನ್ಯಾಯದ ಪ್ರತೀಕ ಎಂದು ಹೇಳಲಾಗುತ್ತದೆ. ಆಕೆಯ ಹೆಸರು ಜಸ್ಟಿಯ ಎಂದಾಗಿದೆ. ಆಕೆ ಹೆಸರಿನಿಂದ ನ್ಯಾಯ ಈ ಶಬ್ದ ರೂಪಗೊಂಡಿದೆ. ಆಕೆಯ ಕಣ್ಣಿನ ಮೇಲೆ ಕಟ್ಟಿರುವ ಪಟ್ಟಿಯ ಅರ್ಥ ನ್ಯಾಯ ದೇವತೆಯು ಯಾವಾಗಲೂ ನಿಸ್ಪಕ್ಷವಾಗಿ ನ್ಯಾಯ ನೀಡುವಳು’, ಎಂದು ಆಗಿದೆ.

ಈ ಪುತ್ತಳಿಯನ್ನು ಬ್ರಿಟಿಷ್ ಅಧಿಕಾರಿ ಭಾರತಕ್ಕೆ ತಂದನು

ಈ ಪುತ್ತಳಿ ಗ್ರೀಸ್ ನಿಂದ ಬ್ರಿಟನಿಗೆ ತಲುಪಿತು. ೧೭ ನೇ ಶತಮಾನದಲ್ಲಿ ಬ್ರಿಟಿಷ್ ಅಧಿಕಾರಿಯು ಅದನ್ನು ಮೊದಲು ಬಾರಿ ಭಾರತಕ್ಕೆ ತಂದನು. ಈ ಬ್ರಿಟಿಷ್ ಅಧಿಕಾರಿ ನ್ಯಾಯಾಲಯದಲ್ಲಿ ಅಧಿಕಾರಿಯಾಗಿದ್ದನು. ೧೮ ನೇ ಶತಮಾನದಲ್ಲಿ ಬ್ರಿಟಿಷರ ಕಾಲದಲ್ಲಿ ನ್ಯಾಯ ದೇವಿಯ ಮೂರ್ತಿ ಸಾರ್ವಜನಿಕವಾಗಿ ಉಪಯೋಗಿಸಲಾಯಿತು. ಮುಂದೆ ದೇಶ ಸ್ವತಂತ್ರ ಆದ ನಂತರ ಇದೇ ನ್ಯಾಯ ದೇವತೆಯನ್ನು ಸ್ವೀಕರಿಸಲಾಯಿತು.