|
ನವ ದೆಹಲಿ – ಗುಜರಾತದಲ್ಲಿನ ಗೀರ ಸೋಮನಾಥ ಜಿಲ್ಲೆಯ ಜಿಲ್ಲಾಧಿಕಾರಿ ದಿಗ್ವಿಜಯ ಸಿಂಹ ಜಡೆಜಾ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ, ಜಾಗ ಅತಿಕ್ರಮಣದಿಂದ ಮುಕ್ತಗೊಳಿಸುವುದಕ್ಕಾಗಿ ಅವರು ದರ್ಗಾಗಳು ಮತ್ತು ಮಸೀದಿಗಳನ್ನು ನೆಲೆಸಮ ಮಾಡಿದ್ದಾರೆ. ಈ ಎಲ್ಲಾ ಕಾಮಗಾರಿ ಅಕ್ರಮವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಅದನ್ನು ನೆಲೆಸಮ ಮಾಡುವುದಕ್ಕಾಗಿ ಅನುಮತಿಯ ಅವಶ್ಯಕತೆ ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಇದು ಸರ್ವೋಚ್ಚ ನ್ಯಾಯಾಲಯದ ಆದೇಶದ ಉಲ್ಲಂಘನೆ ಎಂದು ಹೇಳಲಾಗದು ಎಂದು ಹೇಳಿದರು.
೧. ಮುಸಲ್ಮಾನ ಪಕ್ಷದಿಂದ ದಾಖಲಿಸಲಾದ ಅವಮಾನ ಅರ್ಜಿಯ ಕುರಿತು ಗೀರ ಸೋಮನಾಥ ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ಉತ್ತರ ನೀಡಿದ್ದಾರೆ. ಈ ಕಾರ್ಯಾಚರಣೆ ನಡೆಸಿ ಸರಕಾರವು ಸರ್ವೋಚ್ಚ ನ್ಯಾಯಾಲಯದ ಬುಲ್ಡೋಜರ್ ನಿಷೇಧದ ಉಲ್ಲಂಘನೆ ಮಾಡಿದೆ ಎಂದು ಮುಸಲ್ಮಾನ ಪಕ್ಷದ ಅಭಿಪ್ರಾಯವಾಗಿತ್ತು.
ಸಪ್ಟೆಂಬರ್ ೧೭, ೨೦೨೪ ರಂದು ಸರ್ವೋಚ್ಚ ನ್ಯಾಯಾಲಯವು ಅತಿಕ್ರಮಣ ಆಗಿರುವುದನ್ನು ಬಿಟ್ಟರೆ ದೇಶಾದ್ಯಂತದಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿನ ಕಾಮಗಾರಿ ನೆಲಸಮ ಮಾಡಲು ನಿಷೇಧಿಸಿತ್ತು.
೨. ಗೀರ ಸೋಮನಾಥದಲ್ಲಿ ಸಪ್ಟೆಂಬರ್ ೨೭, ೨೦೨೪ ರಂದು ಹಾಜಿ ಮಾಂಗರೋಲಿಷ ಪೀರ ದರ್ಗಾ, ಹಜರತ್ ಮೈಪುರಿ, ಸೀಪೆ ಸಾಲಾರ್ ಮತ್ತು ಮತ್ತಂಶ ಬಾಪು ಈ ಮುಖ್ಯ ದರ್ಗಾಗಳ ಸಹಿತ ಎಲ್ಲಾ ಅಕ್ರಮ ಕಟ್ಟಡಗಳು ನೆಲಸಮ ಮಾಡಿದೆ. ಈ ಕ್ರಮ ಬೃಹತ್ ಪ್ರಮಾಣದಲ್ಲಿ ನಡೆಸಲಾಗಿದೆ. ಈ ಸಮಯದಲ್ಲಿ ಮುಸಲ್ಮಾನರು ವಿರೋಧಿಸಿದ್ದರು; ಆದರೆ ಆ ಸಮಯದಲ್ಲಿ ಪೊಲೀಸ ಕಾರ್ಯಾಚರಣೆಯಿಂದ ಶಾಂತಿಯಲ್ಲಿ ನೆರವೇರಿತ್ತು, ಸುಮಾರು ೭೦ ಜನರನ್ನು ವಶಕ್ಕೆ ಪಡೆದಿದ್ದರು.