ಮತಾಂತರಕ್ಕೆ ಪ್ರೊತ್ಸಾಹ ನೀಡುವ ‘ಗಾಡ್ ಟಿವಿ’  ಈ ಖಾಸಗಿ ಕ್ರೈಸ್ತ ದೂರದರ್ಶನದ ಮೇಲೆ ಇಸ್ರೈಲ್‌ನಿಂದ ನಿರ್ಬಂಧ

ವಾಹಿನಿಯ ಒಡೆತನ ಮಿಷನರಿ ಬಳಿ ಇರುವ ಮಾಹಿತಿಯನ್ನು ಮುಚ್ಚಿಟ್ಟಿದ್ದರ ಆರೋಪ

  • ಭಾರತದಲ್ಲಿಯೂ ಆಗುತ್ತಿದೆ ಪ್ರಕ್ಷೇಪಣೆ

  • ಭಾರತದಲ್ಲಿಯೂ ಇದರ ಪ್ರಕ್ಷೇಪಣೆಯಾಗುತ್ತದೆ. ಕೇಂದ್ರ ಸರಕಾರವು ಇದನ್ನು ಗಮನದಲ್ಲಿಟ್ಟಿಕೊಂಡು ‘ಈ ವಾಹಿನಿಯು ಭಾರತದಲ್ಲಿಯೂ ಮತಾಂತರಕ್ಕೆ ಪ್ರೊತ್ಸಾಹ ನೀಡುತ್ತದೆಯೇ ?’ ಎಂಬುದು ಹುಡುಕಿ ಅದಕ್ಕನುಸಾರ ನಿರ್ಣಯವನ್ನು ತೆಗೆದುಕೊಳ್ಳಬೇಕು !

ಜೆರುಸಲೆಮ (ಇಸ್ರೇಲ್) – ಹಿಬ್ರು ಭಾಷೆಯಲ್ಲಿ ಪ್ರಕ್ಷೇಪಣೆಯಾಗುವ ‘ಗಾಡ್ ಟಿವಿ’ ಎಂಬ ಕ್ರೈಸ್ತ ಮಿಷನರಿಯ ಖಾಸಗಿ ದೂರದರ್ಶನವನ್ನು ಇಸ್ರೇಲ್ ನಿಷೇಧ ಹೇರಿದೆ. ‘ಈ ವಾಹಿನಿಯು ಪ್ರಕ್ಷೇಪಣೆ ಆರಂಭಿಸುವ ಬಗ್ಗೆ ಅರ್ಜಿ ಸಲ್ಲಿಸಿದಾಗ ಅದರ ಒಡೆತನ ಮಿಷನರಿಗಳ ಬಳಿ ಇದೆ ಎಂಬ ಮಾಹಿತಿಯನ್ನು ಅಡಗಿಸಿಟ್ಟಿದ್ದು ಈ ವಾಹಿನಿಯ ಮೂಲಕ ದೇಶದಲ್ಲಿ ಮತಾಂತರಕ್ಕೆ ಪ್ರೋತ್ಸಾಹ ನೀಡುತ್ತಿತ್ತು’, ಎಂದು ಆರೋಪಿಸಲಾಗಿದೆ. ಇಸ್ರೇಲ್‌ನಲ್ಲಿ ‘ಗಾಡ್ ಟಿವಿ’ಯ ‘ಶೇಲಾನ್’ ಹೆಸರಿನ ಹಿಬ್ರು ಭಾಷೆಯ ವಾಹಿನಿಯ ಮೂಲಕ ಅದರ ಪ್ರಸಾರ ಸಾಹಿತ್ಯಗಳನ್ನು ಭಿತ್ತರಿಸುತ್ತಿತ್ತು.

೧. ಇಸ್ರೇಲ್‌ನಲ್ಲಿ ‘ಟಿವಿ ಕೇಬಲ ನಿಯಂತ್ರಣ ಪರಿಷತ್ತಿ’ನ ಅಧ್ಯಕ್ಷ ಅಶರ ಬಿಟಾನ್ ಇವರು, ‘ಪ್ರಸಾರ ನಿಲ್ಲಿಸಲು ‘ಗಾಡ್ ಟಿವಿ’ಗೆ ೯ ದಿನಗಳ ಕಾಲಾವಕಾಶ ನೀಡಲಾಗಿದೆ’ ಎಂದು ಹೇಳಿದ್ದಾರೆ.

೨. ಬಿಟಾನ್ ಇವರು ನೀಡಿದ ಮಾಹಿತಿಗನುಸಾರ, ‘ಈ ವಾಹಿನಿಯ ಪ್ರಕ್ಷೇಪಣೆ ಕ್ರೈಸ್ತ ಜನರಿಗಾಗಿ ಮಾಡಲಾಗುತ್ತಿದೆ; ಆದರೆ ಅದು ಕ್ರೈಸ್ತ ಧರ್ಮದ ಮಾಹಿತಿಯ ಮೂಲಕ ಜ್ಯೂ ಜನರಿಗೆ ಮತಾಂತರಕ್ಕೆ ಕರೆಯನ್ನು ನೀಡುತ್ತಿದೆ’ ಎಂದು ಹೇಳಿದ್ದಾರೆ.

೩. ೧೯೯೫ ರಲ್ಲಿ ‘ಗಾಡ್ ಟಿವಿ’ಯ ಸ್ಥಾಪನೆಯು ಇಂಗ್ಲೆಂಡ್‌ನಲ್ಲಿ ಆಗಿತ್ತು. ಸದ್ಯ ೩೦ ಕೋಟಿ ಕುಟುಂಬದ ತನಕ ತಲುಪುತ್ತದೆ ಎಂದು ಹೇಳುವ ಈ ವಾಹಿನಿಯು ಅನೇಕ ದೇಶಗಳಲ್ಲಿ ಪ್ರಕ್ಷೇಪಣೆ ಆಗುತ್ತಿದೆ. ಈ ವಾಹಿನಿಯ ಅಂತರರಾಷ್ಟ್ರೀಯ ಪ್ರಕ್ಷೇಪಣೆಯ ಪರವಾನಗಿ ಅಮೇರಿಕಾದ ಫ್ಲೊರಿಡಾದಲ್ಲಿಯ ಒಂದು ಸಂಸ್ಥೆಯ ಬಳಿ ಇದೆ.