(‘ರಾ’ ಎಂದರೆ ಭಾರತದ ‘ ರಿಸರ್ಚ ಅಂಡ್ ಅನಾಲಿಸಿಸ್ ವಿಂಗ್’, ಗುಪ್ತಚರ ಸಂಸ್ಥೆ)
ನ್ಯೂಯಾರ್ಕ್ (ಅಮೇರಿಕಾ) – ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ ಸಿಂಗ ಪನ್ನುವಿನ ಹತ್ಯೆಗೆ ಸಂಚು ರೂಪಿಸಿರುವ ಪ್ರಕರಣದಲ್ಲಿ ಅಮೇರಿಕಾದ ಗುಪ್ತಚರ ಸಂಸ್ಥೆ ಎಫ್.ಬಿ.ಐ. (ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದೆ. ಇದರಲ್ಲಿ ಭಾರತದ ಗುಪ್ತಚರ ಸಂಸ್ಥೆ ‘ರಾ’ದ ವಿಕಾಸ ಯಾದವ ಈ ಮಾಜಿ ಅಧಿಕಾರಿಯ ಮೇಲೆ ಹತ್ಯೆಯ ಸಂಚು ರೂಪಿಸಿದ್ದರೆಂದು ಆರೋಪಿಸಿದೆ. ಯಾದವ ಅವರು ಭಾರತದ ಕ್ಯಾಬಿನೆಟ ಸಚಿವಾಲಯದಲ್ಲಿ ಸೇವೆ ಸಲ್ಲಿಸಿದ್ದರು, ಇದರಲ್ಲಿ ಭಾರತೀಯ ವಿದೇಶಿ ಗುಪ್ತಚರ ಸೇವೆ, ಸಂಶೋಧನೆ ಮತ್ತು ವಿಶ್ಲೇಷಣಾ ವಿಂಗ್ (ರಾ) ಸೇರಿದೆ. ಅವರ ಮೇಲೆ ಹತ್ಯೆಯ ಸಂಚು ಮತ್ತು ಹಣಕಾಸಿನ ಅವ್ಯವಹಾರ ಮಾಡಿರುವ ಆರೋಪವಿದೆ. ಈಗಲೂ ಅವರು ತಲೆಮರೆಸಿಕೊಂಡಿದ್ದಾರೆ. ಅವರ ನಿಕಟವರ್ತಿ ನಿಖಿಲ ಗುಪ್ತಾ ಅವರನ್ನು ಕಳೆದ ವರ್ಷ ಯುರೋಪ್‌ನ ಜೆಕೊಸ್ಲೊವಾಕಿಯಾದಲ್ಲಿ ಬಂಧಿಸಲಾಗಿತ್ತು ಮತ್ತು ಹಸ್ತಾಂತರದ ನಂತರ ಅವರು ಅಮೇರಿಕೆಯ ಜೈಲಿನಲ್ಲಿದ್ದಾರೆ. ಭಾರತವು ಈ ಹಿಂದೆ ಅಮೇರಿಕೆಯ ಈ ಸಂದರ್ಭದಲ್ಲಿನ ಆರೋಪವನ್ನು ತಿರಸ್ಕರಿಸಿತ್ತು.
1. ಎಫ್.ಬಿ.ಐ. ತನ್ನ ಆರೋಪಪತ್ರದಲ್ಲಿ, ವಿಕಾಸ ಅವರು ನಿಖಿಲ ಗುಪ್ತಾ ಇವರನ್ನು ಈ ಸಂಚಿನಲ್ಲಿ ಸಹಚರರನ್ನಾಗಿ ಮಾಡಿಕೊಂಡಿದ್ದರು ಮತ್ತು ನೀಡಿರುವ ಸೂಚನೆಯಲ್ಲಿ ಅವರ ಬಳಿ ಪನ್ನೂವಿನ ವಿಷಯದ ಸಂಪೂರ್ಣ ಮಾಹಿತಿಯಿತ್ತು. ಅದರಲ್ಲಿ ಪನ್ನೂವಿನ ವಿಳಾಸ, ಮೊಬೈಲ ಸಂಖ್ಯೆ ಮತ್ತು ದಿನನಿತ್ಯದ ಕೆಲಸ ಕಾರ್ಯಗಳು ಒಳಗೊಂಡಿದ್ದವು. ಅದರ ನಂತರ, ಗುಪ್ತಾ ಅವರು ಪನ್ನೂವಿನ ಹತ್ಯೆ ಮಾಡಲು ಒಬ್ಬ ಕೊಲೆಗಾರನನ್ನು ಸಂಪರ್ಕಿಸಿದರು, ಅವನಿಗೆ ಸುಪಾರಿ ನೀಡಿ ಹತ್ಯೆ ಮಾಡಿಸುವವರಿದ್ದರು. ವಾಸ್ತವದಲ್ಲಿ ಅವನು ಅಮೇರಿಕೆಯ `ಡ್ರಗ ಎನ್ಫೋರ್ಸಮೆಂಟ ಅಡ್ಮಿನಿಸ್ಟ್ರೇಷನ್, ವಿಭಾಗದ ರಹಸ್ಯ ಏಜೆಂಟ್ ಆಗಿದ್ದನು. ಈ ಹತ್ಯೆಗಾಗಿ ಯಾದವ 1 ಲಕ್ಷ ಡಾಲರ್ (ಸುಮಾರು 83 ಲಕ್ಷ ರೂಪಾಯಿ) ನೀಡುವ ಯೋಜನೆಯನ್ನು ರೂಪಿಸಿದ್ದರು.
2. ಅಮೇರಿಕಾದ ಅಟರ್ನಿ ಜನರಲ ಮೆರಿಕ ಬಿ. ಗಾರಲ್ಯಾಂಡ ಮಾತನಾಡಿ, ಅಮೇರಿಕೆಯ ಜನರನ್ನು ಗುರಿಯಾಗಿಸುವ, ಅಪಾಯಕ್ಕೊಡ್ಡುವ ಮತ್ತು ಪ್ರತಿಯೊಬ್ಬ ಅಮೇರಿಕೆಯ ನಾಗರಿಕರ ಅಧಿಕಾರಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ನ್ಯಾಯಾಂಗ ಇಲಾಖೆ ಸಹಿಸುವುದಿಲ್ಲ ಎಂದು ಹೇಳಿದರು.
3. ‘ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್’ ನಿರ್ದೇಶಕ ಕ್ರಿಸ್ಟೋಫರ್ ರೇ ಇವರು ಮಾತನಾಡಿ, ಆರೋಪಿ ಭಾರತ ಸರಕಾರದ ಸಿಬ್ಬಂದಿಯಾಗಿದ್ದಾರೆ. ಅವನು ಒಬ್ಬ ಅಪರಾಧಿ ಸಹಚರನೊಂದಿಗೆ ಸಂಚು ರಚಿಸಿದ್ದು, ಅಮೇರಿಕೆಯ ಒಬ್ಬ ಅಮೇರಿಕನ್ ಪ್ರಜೆಯನ್ನು ಕೊಲ್ಲಲು ಪ್ರಯತ್ನಿಸಿದರು ಎಂದು ಹೇಳಿದರು.
4. ಅಮೇರಿಕೆಯು ಮಾಡಿರುವ ಆರೋಪದ ನಂತರ ಭಾರತವು ಈ ಪ್ರಕರಣದ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಿತ್ತು. ಇದಕ್ಕೆ ಅಮೇರಿಕಾ ಸಮಾಧಾನವನ್ನು ವ್ಯಕ್ತಪಡಿಸಿತ್ತು.
ನಿಜ್ಜರನ ಹತ್ಯೆಯಲ್ಲಿ ವಿಕಾಸ ಯಾದವ ಇವರ ಕೈವಾಡ ಇದೆ ಎಂದು ಕೆನಡಾ ಮಾಡಿದ ಆರೋಪವನ್ನು ಅಮೇರಿಕಾ ತಿರಸ್ಕರಿಸಿದೆ
ಪನ್ನು ಹತ್ಯೆಯ ಸಂಚಿನಲ್ಲಿ ಭಾರತದ ಹೆಸರು ಬಹಿರಂಗವಾದ ಬಳಿಕ ಕೆನಡಾ ಪ್ರಧಾನಿ ಜಸ್ಟಿನ ಟ್ರುಡೋ ಇವರು `ನಿಜ್ಜರನ ಹತ್ಯೆಯಲ್ಲಿ ವಿಕಾಸ ಯಾದವ ಇವರ ಕೈವಾಡವಿದೆ’ ಎಂದು ಹೇಳಿತ್ತು; ಆದರೆ ಅಮೇರಿಕೆಯು ಅದನ್ನು ತಿರಸ್ಕರಿಸಿದೆ. `ವಿಕಾಸರಿಗೂ ಕೆನಡಾದ ನಿಜ್ಜರ ಹತ್ಯಾಕಾಂಡಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಅಮೇರಿಕೆಯ ವಿದೇಶಾಂಗ ಸಚಿವಾಲಯವು ಹೇಳಿದೆ.
ಸಂಪಾದಕೀಯ ನಿಲುವುಯಾವುದೇ ಸಾಕ್ಷಿಗಳಿಲ್ಲದಿರುವಾಗ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇವರು ಖಲಿಸ್ತಾನಿ ಭಯೋತ್ಪಾದಕ ನಿಜ್ಜರನ ಹತ್ಯೆಯ ಆರೋಪ ಮಾಡಿದ ಬಳಿಕ, ಈಗ ಅವರು ಪುರಾವೆಗಳಿಲ್ಲದೇ ಆರೋಪಿಸಿರುವುದಾಗಿ ನಾಚಿಕೆಯಿಲ್ಲದೇ ಒಪ್ಪಿಕೊಂಡರು. ಅದೇ ರೀತಿ ಅಮೇರಿಕಾದಿಂದಲೂ ಆಗುತ್ತದೆ. ಆಮೇರಿಕಾಗೂ ಇದನ್ನೇ ಹೇಳಬೇಕಾಗುವುದು ! |