ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರಿಂದ ನಿರ್ಲಜ್ಜ ಸ್ವೀಕೃತಿ !
ಓಟಾವಾ (ಕೆನಡಾ) /ನವದೆಹಲಿ – ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯ ಪ್ರಕರಣದಲ್ಲಿ ಭಾರತದ ಮೇಲೆ ಆರೋಪ ಮಾಡುವ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಈಗ ಹಿಂದೆ ಸರಿದಿದ್ದಾರೆ. ಈ ಎಲ್ಲಾ ಪ್ರಕರಣದ ಸಂದರ್ಭದಲ್ಲಿ ಕೆನಡಾದ ಅಂತರ್ಗತ ವಿಚಾರಣಾ ಸಮಿತಿಯ ಎದುರು ಸುದೀರ್ಘ ಮಾಹಿತಿ ನೀಡುವಾಗ ಜಸ್ಟಿನ್ ಟ್ರೂಡೋ ಇವರು, ನನಗೆ, ಕೆನಡಾದಿಂದ ಮತ್ತು ನಮ್ಮ ಇತರ ೫ ಮಿತ್ರ ದೇಶಗಳಿಂದ ಬಂದಿರುವ ಗುಪ್ತಚರ ಇಲಾಖೆಯ ಮಾಹಿತಿ ಪ್ರಕಾರ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯಲ್ಲಿ ಭಾರತದ ಸಹಭಾಗ ಇರುವುದು ಕಂಡು ಬರುತ್ತಿದೆ ಎಂದು ಹೇಳಲಾಗಿತ್ತು. ಈ ಮಾಹಿತಿ ದೊರೆತನಂತರ ನಾನು ತಕ್ಷಣ ಭಾರತ ಸರಕಾರದ ಜೊತೆಗೆ ಚರ್ಚಿಸಿದೆ. ಭಾರತ ಸರಕಾರವು ನಮಗೆ ಸಾಕ್ಷಿ ಕೇಳಿತು. ಅದರ ಬಗ್ಗೆ ನಾವು ‘ಸಾಕ್ಷಿಗಳು ನಿಮ್ಮ ಭದ್ರತಾ ವ್ಯವಸ್ಥೆಯಲ್ಲಿಯೇ ಇದೆ’ ಎಂದು ಉತ್ತರ ನೀಡಿದೆವು; ಆದರೆ ಭಾರತ ಸರಕಾರ ಸಾಕ್ಷಿ ಕೇಳುವುದರ ಬಗ್ಗೆ ದೃಢವಾಗಿತ್ತು; ಆದರೆ ಆಗ ನಮ್ಮ ಬಳಿ ಯಾವುದೇ ದೃಢವಾದ ಸಾಕ್ಷಿಗಳು ಇರಲಿಲ್ಲ, ಆದರೆ ಕೇವಲ ಗುಪ್ತಚರ ಇಲಾಖೆಯಿಂದ ಬಂದಿರುವ ಮಾಹಿತಿ ಇತ್ತು. ಆದ್ದರಿಂದ ನಾವು ಭಾರತಕ್ಕೆ, ನಾವು ಒಟ್ಟಾಗಿ ಸೇರಿ ನಿಮ್ಮ ಭದ್ರತಾ ಇಲಾಖೆಯ ವರದಿ ಪಡೆಯೋಣ, ಬಹುಶಃ ನಮಗೆ ಅಲ್ಲಿ ಸಾಕ್ಷಿಗಳು ದೊರೆಯಬಹುದು ಎಂದು ಹೇಳಿದೆ. (ಮೂಲತಃ ಆರೋಪ ಕೆನಡಾದಿಂದ ಮಾಡಲಾಗಿರುವುದರಿಂದ ಭಾರತ ಸಾಕ್ಷಿ ಏಕೆ ಹುಡುಕಬೇಕು ? ನಾಳೆ ಭಾರತ ಕೆನಡಾದ ಮೇಲೆ ಯಾವುದಾದರೂ ಪ್ರಕರಣದಲ್ಲಿ ಸುಳ್ಳ ಆರೋಪ ಹೊರಿಸಿ ಸಾಕ್ಷಿಗಳು ಕೆನಡಾದಲ್ಲಿ ಹುಡುಕಲು ಹೇಳಿದರೆ, ಆಗ ಅವರಿಗೆ ಅದು ಒಪ್ಪಿಗೆಯೇ ? – ಸಂಪಾದಕರು)
“We accused India of murder without any evidence” – Canadian PM #JustinTrudeau’s Shameless Admission
If the leader of a country is so irresponsible, one can only imagine how the country is being run!
Due to the false allegations against India, #Canada’s reputation has been… pic.twitter.com/ZF3wKTOmyo
— Sanatan Prabhat (@SanatanPrabhat) October 17, 2024
ಭಾರತ-ಕೆನಡಾ ಇವರಲ್ಲಿನ ಸಂಬಂಧ ಹದಗೆಡಲು ಟ್ರುಡೋ ಹೊಣೆ ! – ಭಾರತ
ಟ್ರುಡೋ ಇವರ ಮಾಹಿತಿಯಿಂದ ಅವರು ಭಾರತದ ಮೇಲೆ ಸುಳ್ಳು ಆರೋಪ ಮಾಡಿದೆ, ಇದು ಸ್ಪಷ್ಟವಾಗಿದೆ. ಟ್ರುಡೋ ಇವರ ಈ ಮಾಹಿತಿಯ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯ ಕೂಡ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಇವರು, ನಾವು ಇಂದು ಏನು ಕೇಳುತ್ತಿದ್ದೇವೆ ಅದನ್ನೇ ಹೇಳುತ್ತಿದ್ದೆವು, ಆದರೆ ‘ಕೆನಡಾವು ಭಾರತ ಮತ್ತು ಭಾರತೀಯ ಮುತ್ಸದ್ದಿಗಳ ಮೇಲೆ ಮಾಡಿರುವ ಗಂಭೀರ ಆರೋಪವನ್ನು ಬೆಂಬಲಿಸುವವರು ಯಾವುದೇ ಸಾಕ್ಷಿಗಳು ಪ್ರಸ್ತುತಪಡಿಸಿಲ್ಲ.’ ಅದನ್ನೇ ಟ್ರುಡೋ ಇವರು ಹೇಳಿದ್ದಾರೆ. ಟ್ರುಡೋ ಇವರ ವರ್ತನೆಯಿಂದ ಭಾರತ-ಕೆನಡಾ ಸಂಬಂಧ ಹದಗೆಡಲು ಪ್ರಧಾನ ಮಂತ್ರಿ ಟ್ರೂಡೋ ಇವರೊಬ್ಬರೇ ಹೊಣೆಗಾರರಾಗಿದ್ದಾರೆ ಎಂದು ಹೇಳಿದೆ.
ಸಂಪಾದಕೀಯ ನಿಲುವು
|