|
ಢಾಕಾ (ಬಾಂಗ್ಲಾದೇಶ) – ಮಹಮ್ಮದ್ ಯೂನಸ ಇವರ ನೇತೃತ್ವದ ಮಧ್ಯಂತರ ಸರಕಾರ ಬಾಂಗ್ಲಾದೇಶವನ್ನು ತಾಲಿಬಾನ್ ಮಾರ್ಗದಲ್ಲಿ ಒಯ್ಯುತ್ತಿದೆ. ಶೇಖ್ ಹಸೀನಾ ಅವರನ್ನು ತೆಗೆದುಹಾಕಿದ ನಂತರ ಸ್ಥಾಪನೆಗೊಂಡಿರುವ ಮಧ್ಯಂತರ ಸರಕಾರವು ಈಗ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟ ಶೇಖ್ ಮುಜಿಬುರ್ ರೆಹಮಾನ್ ಅವರ ನೆನಪುಗಳನ್ನು ಅಳಿಸುವ ಅಭಿಯಾನವನ್ನು ನಡೆಸುತ್ತಿದೆ. ಶೇಖ್ ಮುಜಿಬುರ್ ರಹಮಾನ್ ಇವರ ನೇತೃತ್ವದಡಿಯ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ 8 ರಾಷ್ಟ್ರೀಯ ದಿನಗಳನ್ನು ಆಚರಿಸುವುದನ್ನು ರದ್ದುಗೊಳಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಈ ನಿರ್ಣಯ 1971 ಸ್ವಾತಂತ್ರ್ಯ ಚಳುವಳಿಯ ವಿರುದ್ಧವಾಗಿದೆಯೆಂದು ಬಾಂಗ್ಲಾದೇಶಿ ನಾಗರಿಕರು ಟೀಕಿಸುತ್ತಿದ್ದಾರೆ.
ಬಾಂಗ್ಲಾದೇಶದಲ್ಲಿ ಪಾಕಿಸ್ತಾನದ ವಿಚಾರಸರಣಿಗೆ ಚಾಲನೆ !
‘ಅವಾಮಿ ಲೀಗ್’ ಈ ನಿರ್ಧಾರದ ಬಗ್ಗೆ, ಹೀಗಾದರೆ ಬಾಂಗ್ಲಾದೇಶದಲ್ಲಿ ಪಾಕಿಸ್ತಾನಿ ವಿಚಾರಸರಣಿಗೆ ಚಾಲನೆ ನೀಡುವ ಪ್ರಯತ್ನವಾಗುತ್ತಿದೆ. ಆಗಸ್ಟ್ 5ರಂದು ಬಂಗಬಂಧುಗಳ ಪ್ರತಿಮೆ ಧ್ವಂಸಗೊಳಿಸುವುದರ ಮೂಲಕ ಐತಿಹಾಸಿಕ ಸ್ಮಾರಕಗಳನ್ನು ನಾಶಪಡಿಸುವ ಪ್ರಯತ್ನ ನಡೆಸಲಾಗಿದೆ. ಬಾಂಗ್ಲಾದೇಶದ ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ರಾಷ್ಟ್ರೀಯ ದಿನಗಳನ್ನೂ ಮಧ್ಯಂತರ ಸರಕಾರ ಗುರಿ ಮಾಡಿದೆ. ರಾಷ್ಟ್ರಪಿತ ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮದಿನವಾದ ಮಾರ್ಚ್ 17 ಅನ್ನು ‘ರಾಷ್ಟ್ರೀಯ ಮಕ್ಕಳ ದಿನ’ ಎಂದು ಆಚರಿಸುವುದನ್ನು ರದ್ದುಗೊಳಿಸುವುದು ಹಾಗೆಯೇ ನವೆಂಬರ್ 4 ಅನ್ನು ‘ಸಂವಿಧಾನ ದಿನ’ ಎಂದು ಆಚರಿಸುವುದನ್ನು ರದ್ದುಗೊಳಿಸುವ ನಿರ್ಣಯ ಒಳಗೊಂಡಿದೆ. ಯೂನಸ್ ಸರಕಾರದ ಅಕ್ರಮ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತುವಂತೆ ಅವಾಮಿ ಲೀಗ್ ನೀಂದ ಜನರಿಗೆ ಕರೆ ನೀಡಿದೆ.
ಬಾಂಗ್ಲಾದೇಶದ ಮಧ್ಯಂತರ ಸರಕಾರದ ಸಲಹೆಗಾರ ನಹೀದ್ ಇಸ್ಲಾಂ ಇವರು ಮಾತನಾಡಿ, ಮಧ್ಯಂತರ ಸರಕಾರವು ಶೇಖ್ ಮುಜಿಬುರ್ ರೆಹಮಾನ್ ಅವರನ್ನು ರಾಷ್ಟ್ರಪಿತ ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.