ಕೆನಡಾದಲ್ಲಿನ ಭಾರತೀಯ ಮೂಲದ ಹಿಂದೂ ಸಂಸದ ಚಂದ್ರ ಆರ್ಯರ ಹೇಳಿಕೆ
ಒಟಾವಾ (ಕೆನಡಾ) – ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಕೃತ್ಯಗಳಿಂದಾಗಿ ಹಿಂದೂ ಸಮುದಾಯ ಹೆದರಿದೆ ಎಂದು ಕೆನಡಾ ಸಂಸದ ಚಂದ್ರ ಆರ್ಯ ಹೇಳಿದ್ದಾರೆ.
ಒಂದು ವಿಡಿಯೋ ಸಂದೇಶದಲ್ಲಿ ಚಂದ್ರ ಆರ್ಯ ಹೇಳಿರುವುದು,
1. ನಾನು ಇತ್ತೀಚಿನ ಘಟನೆಗಳ ಬಗ್ಗೆ ಕೆನಡಾದ ಹಿಂದೂಗಳ ಮನಸ್ಸಿನಲ್ಲಿರುವ ಆತಂಕವನ್ನು ಕೇಳಿದ್ದೇನೆ. ಓರ್ವ ಹಿಂದೂ ಸಂಸದನಾಗಿ ನಾನೂ ಈ ಆತಂಕವನ್ನು ಪ್ರತ್ಯಕ್ಷ ಅನುಭವಿಸಿದ್ದೇನೆ. ಕಳೆದ ವಾರ ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ ರಕ್ಷಣೆಯಲ್ಲಿ ಹಿಂದೂ ಕಾರ್ಯಕ್ರಮಗಳಿಗೆ ಹಾಜರಾಗಬೇಕಾಯಿತು; ಕಾರಣ ಖಲಿಸ್ತಾನಿ ಪ್ರತಿಭಟನೆಗಳ ಒಂದು ಗುಂಪು ಅವರ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು.
2. ಕೆನಡಾದಲ್ಲಿ ನಾವು ಖಲಿಸ್ತಾನಿ ಹಿಂಸಾತ್ಮಕ ಭಯೋತ್ಪಾದನೆಯ ಗಂಭೀರ ಸಮಸ್ಯೆಯನ್ನು ಗುರುತಿಸಿದ್ದೇವೆ. ಕೆನಡಾದ ಯಾವುದೇ ಒಬ್ಬ ರಾಜಕಾರಣಿ ಅಥವಾ ಸರಕಾರಿ ಅಧಿಕಾರಿ ಇಲ್ಲಿನ ಹಿಂದೂಗಳಿಗೆ ಧೈರ್ಯ ತುಂಬುವ ಕಾರ್ಯ ಮಾಡಿರುವುದನ್ನು ನಾನು ಕೇಳಿಲ್ಲ. ಬಹಳಷ್ಟು ಹಿಂದೂಗಳು ಇತ್ತೀಚಿನ ಘಟನೆಯ ಹಿನ್ನೆಲೆಯಲ್ಲಿ ಅವರ ಭದ್ರತೆಯ ಕುರಿತು ಚಿಂತಿತ ಹಾಗೂ ಭಯಭೀತರಾಗಿದ್ದಾರೆ.
3. ಭಯೋತ್ಪಾದನೆ ರಾಷ್ಟ್ರೀಯ ಗಡಿಯನ್ನು ಗುರುತಿಸುವುದಿಲ್ಲ. ಕೆನಡಾದಲ್ಲಿನ ಖಲಿಸ್ತಾನಿ ಹಿಂಸಾತ್ಮಕ ಭಯೋತ್ಪಾದಕ ಕೃತ್ಯಗಳ ಹಿನ್ನೆಲೆಯಲ್ಲಿ, ನಮ್ಮ ಸರಕಾರ ಮತ್ತು ಅವರ ವ್ಯವಸ್ಥೆ ನಮ್ಮ ನಾಗರಿಕರ ಭದ್ರತೆಗಾಗಿ ಭಯೋತ್ಪಾದನೆಯ ಪೀಡುಗನ್ನು ಅನುಭವಿಸುತ್ತಿರುವ ದೇಶಗಳಿಗೆ ಸಹಕರಿಸಬೇಕೆಂದು ನಾವು ಅಪೇಕ್ಷಿಸುತ್ತೇವೆ.
4. ಕೆನಡಾದಲ್ಲಿರುವ ಹಿಂದೂಗಳಿಗೆ ಮನವಿ ಮಾಡುವಾಗ ಚಂದ್ರ ಆರ್ಯ ಅವರು, ನಾವು ಈ ದೇಶದಲ್ಲಿ ಅತ್ಯಂತ ವಿದ್ಯಾವಂತ ಮತ್ತು ಯಶಸ್ವಿ ಸಮುದಾಯಗಳಲ್ಲಿ ಒಬ್ಬರಾಗಿದ್ದೇವೆ. ಇಲ್ಲಿನ ಹಿಂದೂಗಳು ಕೆನಡಾದ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡುತ್ತಾರೆ. ಹೀಗಿರುವಾಗಲೂ, ರಾಜಕಾರಣಿಗಳು ಅನೇಕಬಾರಿ ನಮ್ಮ ಸಹನೆಯನ್ನು ದೌರ್ಬಲ್ಯವೆಂದು ತಿಳಿಯುತ್ತಾರೆ. ನಾನು ನಿಮ್ಮ ಪರವಾಗಿ ವಕೀಲನಾಗಿ ಕಾರ್ಯನಿರ್ವಹಿಸಲು ಪ್ರತಿಜ್ಞೆ ಮಾಡುತ್ತೇನೆ; ಆದರೆ ನನ್ನ ಒಬ್ಬನ ಪ್ರಯತ್ನ ಸಾಕಾಗುವುದಿಲ್ಲ. ಹಿಂದೂಗಳು ಧ್ವನಿ ಎತ್ತುವುದು ಮತ್ತು ಎಲ್ಲಾ ರಾಜಕಾರಣಿಗಳನ್ನು ಜವಾಬ್ದಾರರನ್ನಾಗಿ ಮಾಡುವುದು ಈ ಸಮಸ್ಯೆಯನ್ನು ಪರಿಹರಿಸುವ ಏಕೈಕ ಮಾರ್ಗವಾಗಿದೆ. ನಮ್ಮ ಸುರಕ್ಷತೆ ಮತ್ತು ಹಿತಾಸಕ್ತಿ ರಕ್ಷಿಸಲಾಗುತ್ತದೆಯೆನ್ನುವುದನ್ನು ನಾವು ಸಾಮೂಹಿಕವಾಗಿ ದೃಢಪಡಿಸಬೇಕಾಗಿದೆ.
ಖಲಿಸ್ತಾನಿಗಳಿಗೆ ರಾಜಕೀಯ ರಕ್ಷಣೆ
ಚಂದ್ರ ಆರ್ಯ ಇವರು ಕೆನಡಾದ ಪತ್ರಿಕೆ ‘ದಿ ಗ್ಲೋಬ್ ಅಂಡ್ ಮೇಲ್’ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಲೇಖನವನ್ನು ಉಲ್ಲೇಖಿಸಿ ಕೆನಡಾದ ರಾಜಕಾರಣಿಗಳ ಭಯೋತ್ಪಾದಕ ದಾಳಿಗಳನ್ನು ಪ್ರೋತ್ಸಾಹಿಸುವ ಕ್ರಮಗಳನ್ನು ವಿವರಿಸಲಾಗಿದೆ. ಈ ಲೇಖನದಲ್ಲಿ ಈ ದೇಶದ ಮತ್ತು ಎಲ್ಲ ದೇಶಗಳ ರಾಜಕೀಯ ನಾಯಕರು ಇತರ ದೇಶಗಳ ಪ್ರತ್ಯೇಕತಾವಾದಿ ಚಳುವಳಿಗಳನ್ನು ಪ್ರೋತ್ಸಾಹಿಸಬಾರದು ವಿಶೇಷವಾಗಿ ಹಿಂಸಾಚಾರವನ್ನು ಬೆಂಬಲಿಸುವವರನ್ನು ಅಥವಾ ಅದರಲ್ಲಿ ಭಾಗವಹಿಸುವವರನ್ನು ಎಂದು ಹೇಳಲಾಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಕೆನಡಾದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಹಿಂದೂಗಳು ಭಯಭೀತರಾಗಿದ್ದಾರೆ. ಭಾರತದಲ್ಲಿಯೂ ಅವರು ಜೀವವನ್ನು ಗಟ್ಟಿ ಹಿಡಿದುಕೊಂಡೇ ಬದುಕುತ್ತಿದ್ದಾರೆ. ಇದು ಹಿಂದೂಗಳಿಗೇ ನಾಚಿಕೆಗೇಡು ! |