ದಮೋಹ (ಮಧ್ಯಪ್ರದೇಶ)ದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿ ಆಕೆಯ ಚಿತ್ರೀಕರಣ ಮಾಡಿ ವಿಡಿಯೋ ಪ್ರಸಾರ

ಇಲ್ಲಿಯ ಪಟ್ಟಣದಿಂದ ೭೦ ಕಿ.ಮೀ ದೂರದಲ್ಲಿರುವ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳು ಕ್ಯಾಮೆರಾ ಎದುರೇ ಓರ್ವ ಅಪ್ರಾಪ್ತೆಯ ಮೇಲೆ ಆಕೆಯ ಮನೆಯಲ್ಲೇ ಅತ್ಯಾಚಾರ ಮಾಡಿ ಅದರ ವಿಡಿಯೋವನ್ನು ಪ್ರಸಾರ ಮಾಡಿದ್ದಾರೆ. ಪೊಲೀಸರು ವಿಡಿಯೋವನ್ನು ಮಾಡುವ ೧೫ ವರ್ಷದ ಹುಡುಗನನ್ನು ಬಂಧಿಸಿದ್ದಾರೆ.

ಹಿಂದೂಗಳ ಬೇಡಿಕೆಗಾಗಿ ವಾವುನಿಯಾ (ಶ್ರೀಲಂಕಾ)ದಲ್ಲಿ ಹಿಂದೂಗಳ ಭವ್ಯ ಮೆರವಣಿಗೆ

ಶ್ರೀಲಂಕಾದಲ್ಲಿ ಹಿಂದುತ್ವನಿಷ್ಠ ನಾಯಕ ಶ್ರೀ. ಸಚಿತಾನಂದನಜಿ, ಶಿವಸೇನಾಯಿಯವರ ನೇತೃತ್ವದಲ್ಲಿ ಎಲ್ಲಾ ಹಿಂದೂ ಸಂಘಟನೆಗಳು ಸರಕಾರದ ಬಳಿ ೬ ಕಲಂನ ಬೇಡಿಕೆಗಳನ್ನು ಮಂಡಿಸಿ ಲಂಕಾದ ವಾವುನಿಯಾದಲ್ಲಿ ಭವ್ಯ ಮೆರವಣಿಗೆ ನಡೆಸಿದರು. ಸುಮಾರು ೨೫೦೦ ಹಿಂದೂಗಳು ಇದರಲ್ಲಿ ಭಾಗವಹಿಸಿದ್ದರು.

೧ ಸಾವಿರ ವರ್ಷ ತಡವಾದರೂ ಪರವಾಗಿಲ್ಲ ‘ಬಾಬ್ರಿ ಮಸೀದಿ ಮತ್ತೊಮ್ಮೆ ಕಟ್ಟುವೆವು !’ (ಅಂತೆ)

೧ ಸಾವಿರ ವರ್ಷಗಳಾದರೂ ಪರವಾಗಿಲ್ಲ ‘ಬಾಬ್ರಿ ಮಸೀದಿಯನ್ನು ಮತ್ತೊಮ್ಮೆ ಕಟ್ಟುವೆವು ಎಂದು ‘ಸೋಶಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’(ಎಸ್.ಡಿ.ಪಿ.ಐ.) ಪಕ್ಷದ ಸಚಿವ ತಸ್ಲೀಮ್ ರಹಮಾನಿಯು ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದಾನೆ. ‘ಝಿ ನ್ಯೂಸ್’ ಸುದ್ದಿವಾಹಿನಿಯಲ್ಲಿ ಶ್ರೀಕೃಷ್ಣಜನ್ಮಭೂಮಿಯ ವಿಷಯದಲ್ಲಿ ಆಯೋಜಿಸಲಾಗಿದ್ದ ಚರ್ಚಾಕೂಟದಲ್ಲಿ ಅವರು ಮಾತನಾಡುತ್ತಿದ್ದರು.

ಜಗತ್ತಿನಾದ್ಯಂತ ಇಸ್ಲಾಂ ಸಂಕಟದಲ್ಲಿದೆ ! – ಫ್ರಾನ್ಸ್‌ನ ರಾಷ್ಟ್ರಪತಿ ಎಮ್ಯಾನುಯೆಲ್ ಮ್ಯಾಕ್ರೊಂ

ಒಂದು ಧರ್ಮದಿಂದಾಗಿ ಇಡೀ ಜಗತ್ತು ಇಂದು ಗಂಡಾಂತರದಲ್ಲಿದೆ. ‘ನಮಗೆ ಕಟ್ಟರ(ಅಸಹಿಷ್ಣು/ ಛಲವಾದಿ) ಇಸ್ಲಾಮ್‌ವಾದಿಗಳೊಂದಿಗೆ ಹೋರಾಡಬೇಕಿದೆ’ ಎಂದು ಫ್ರೆಂಚ್‌ನ ರಾಷ್ಟ್ರಪತಿ ಇಮ್ಯಾನುಯೆಲ್ ಮ್ಯಾಕ್ರೋಂ ಒಂದು ಭಾಷಣದ ಮೂಲಕ ಕರೆ ನೀಡಿದರು. ಇದನ್ನು ‘ಎ.ಎಫ್.ಪಿ.’ ಈ ಸುದ್ದಿ ಸಂಸ್ಥೆಯು ವರದಿ ಮಾಡಿದೆ.

ತಮಿಳುನಾಡಿನ ಮುಜರಾಯಿ ಇಲಾಖೆಯಿಂದ ೪೫ ದೇವಸ್ಥಾನಗಳ ಮೇಲೆ ಅಕ್ರಮವಾಗಿ ನಿಯಂತ್ರಣ !

‘ಇಂಡಿಕ್ ಕಲೆಕ್ಟಿವ್ ಟ್ರಸ್ಟ್’ನ ಶ್ರೀ. ಟಿ.ಆರ್. ರಮೇಶರವರು ಮದ್ರಾಸ್ ಉಚ್ಚ ನ್ಯಾಯಾಲಯಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ (‘ಎಚ್.ಆರ್. ಅಂಡ್ ಸಿ.ಇ.’ಯ) ಅಧಿಕಾರಿಗಳು ತಮಿಳುನಾಡಿನ ೪೫ ದೇವಸ್ಥಾನಗಳನ್ನು ಅಕ್ರಮವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬಾರಾಬಂಕಿ (ಉತ್ತರಪ್ರದೇಶ)ಯಲಿ ತನ್ನ ೧೬ ವರ್ಷದ ಮಗಳ ಮೇಲೆ ಲೈಂಗಿಕ ಅತ್ಯಾಚಾರಗೈದ ಮತಾಂಧ

ಇಲ್ಲಿಯ ಫತೇಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ತನ್ನ ೧೬ ವರ್ಷದ ಬಾಲಕಿಯ ಮೇಲೆ ಮತಾಂಧನು ನಿರಂತರ ಅತ್ಯಾಚಾರ ಮಾಡಿರುವ ಹಾಗೂ ಇದರಿಂದ ಆಕೆ ಗರ್ಭ ಧರಿಸಿದ ಘಟನೆ ನಡೆದಿದೆ. ಸಂತ್ರಸ್ತ ಬಾಲಕಿ ತನ್ನ ತಂದೆ ಗುಲಾಮ್ ರಸೂಲ್ ವಿರುದ್ಧ ದೂರನ್ನು ದಾಖಲಿಸಿದ್ದಳು. ಆಕೆ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದ್ದಾಳೆ.

ಕರ್ಣಾವತಿ (ಗುಜರಾತ)ನ ‘ಆರ್ಚರ್ ಆರ್ಟ್ಸ್ ಗ್ಯಾಲರಿ’ಯು ಹಿಂದೂ ವಿರೋಧಿ ಚಿತ್ರಕಾರ ಎಂ.ಎಫ್. ಹುಸೇನ್‌ನ ಚಿತ್ರಗಳನ್ನು ತೆಗೆಯಿತು !

ಕರ್ಣಾವತಿಯ ‘ಆರ್ಚರ್ ಆರ್ಟ್ಸ್ ಗ್ಯಾಲರಿ’ಯ ಜಾಲತಾಣದಿಂದ ಚಿತ್ರಗಳ ಆನ್‌ಲೈನ್ ಮಾರಾಟ ಮಾಡಲಾಗುತ್ತಿತ್ತು. ಅದರಲ್ಲಿ ಹಿಂದೂದ್ವೇಷಿ ಚಿತ್ರಕಾರ ಎಂ.ಎಫ್. ಹುಸೇನ್‌ರ ಚಿತ್ರಗಳನ್ನು ಸಹ ಸೇರಿಸಲಾಗಿತ್ತು. ಈ ಮಾಹಿತಿ ಸಿಕ್ಕಿದ ನಂತರ ಹಿಂದೂ ಜನಜಾಗೃತಿ ಸಮಿತಿ ಇದನ್ನು ವಿರೋಧಿಸಿ ಚಿತ್ರಗಳನ್ನು ಮಾರಾಟ ಮಾಡದಂತೆ ಒತ್ತಾಯಿಸಿ ಈ ಸಂಸ್ಥೆಗೆ ಪತ್ರ ಕಳುಹಿಸಿತ್ತು.

ದೋಷಿಗಳಿಗೆ ಎಂತಹ ಶಿಕ್ಷೆ ನೀಡುತ್ತೇವೆಂದರೆ ಭವಿಷ್ಯದಲ್ಲಿ ಆ ಶಿಕ್ಷೆಯು ಉದಾಹರಣೆಯಾಗಿ ನೋಡಲಾಗುವುದು ! – ಹತ್ರಾಸ್ ಪ್ರಕರಣದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಹೇಳಿಕೆ

ಉತ್ತರಪ್ರದೇಶದ ಎಲ್ಲ ತಾಯಂದಿರು ಹಾಗೂ ಸಹೋದರಿಯರ ಗೌರವ ಮತ್ತು ಸ್ವಾಭಿಮಾನವನ್ನು ಕೆಡಿಸಲು ಪ್ರಯತ್ನಿಸುವವರ ನಾಶ ಖಚಿತವಿದೆ. ಭವಿಷ್ಯದಲ್ಲಿ ಅದನ್ನು ಉದಾಹರಣೆಯಾಗಿ ನೋಡುವ ರೀತಿಯಲ್ಲಿ ಅವರಿಗೆ ಶಿಕ್ಷೆಯಾಗುವುದು. ನಿಮ್ಮ ಉತ್ತರ ಪ್ರದೇಶ ಸರಕಾರ ಪ್ರತಿಯೊಬ್ಬ ತಾಯಿ ಮತ್ತು ಸಹೋದರಿಯ ರಕ್ಷಣೆ ಮತ್ತು ಅಭಿವೃದ್ಧಿಗೆ ಬದ್ಧವಾಗಿದೆ.

ಅರುಣಾಚಲ ಪ್ರದೇಶ ಭಾರತದ ಭೂಪ್ರದೇಶ ! ಅಮೇರಿಕಾದಿಂದ ಚೀನಾಗೆ ಬುದ್ಧಿಮಾತು

ಅರುಣಾಚಲ ಪ್ರದೇಶವನ್ನು ತನ್ನ ಭೂಪ್ರದೇಶವೆಂದು ಹೇಳಿಕೊಂಡಿದ್ದ ಚೀನಾಗೆ ಅಮೆರಿಕವು ವಾಗ್ದಾಳಿ ನಡೆಸಿದೆ. ‘ಅರುಣಾಚಲ ಪ್ರದೇಶ ಭಾರತದ ಭಾಗವಾಗಿದೆ’ ಎಂದು ಅಮೇರಿಕಾ ಹೇಳಿದೆ. ಗಡಿ ವಿವಾದಗಳನ್ನು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಬಗೆಹರಿಸುವಂತೆ ಅಮೆರಿಕಾವು ಭಾರತ ಮತ್ತು ಚೀನಾಗೆ ಕರೆ ನೀಡಿದೆ.

ಬಾಬ್ರಿ ಮಸೀದಿ ನೆಲಸಮಗೊಳಿಸುವಲ್ಲಿ ಪಾಕಿಸ್ತಾನ ಕೈವಾಡ ಇರುವ ಸಾಧ್ಯತೆಯ ಬಗ್ಗೆಯೂ ಸಿಬಿಐ ತನಿಖೆ ನಡೆಸಿಲ್ಲ – ಸಿಬಿಐನ ವಿಶೇಷ ನ್ಯಾಯಾಲಯ

ಭಾರತದಲ್ಲಿ ಕೋಮುದ್ವೇಷ ಉತ್ಪನ್ನ ಮಾಡಲು ಅಯೋಧ್ಯೆಯ ಶ್ರೀರಾಮಜನ್ಮಭೂಮಿಯ ಮೇಲಿನ ಬಾಬ್ರಿ ಮಸೀದಿಯನ್ನು ಕೆಡವಲು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐ.ಎಸ್.ಐ. ಕೆಲವು ವ್ಯಕ್ತಿಗಳನ್ನು ಕಳುಹಿಸಿತ್ತು’, ಈ ರಹಸ್ಯ ಮಾಹಿತಿಯ ಬಗ್ಗೆ ಸಿಬಿಐ ತನಿಖೆ ನಡೆಸಿಲ್ಲ, ಎಂದು ಬಾಬ್ರಿ ಮಸೀದಿ ಧ್ವಂಸ ಮಾಡಿದ ಅರ್ಜಿಯ ತೀರ್ಪಿನಲ್ಲಿ ವಿಶೇಷ ನ್ಯಾಯಾಲಯವು ತಿಳಿಸಿದೆ.