ಕರ್ಣಾವತಿ (ಗುಜರಾತ)ನ ‘ಆರ್ಚರ್ ಆರ್ಟ್ಸ್ ಗ್ಯಾಲರಿ’ಯು ಹಿಂದೂ ವಿರೋಧಿ ಚಿತ್ರಕಾರ ಎಂ.ಎಫ್. ಹುಸೇನ್‌ನ ಚಿತ್ರಗಳನ್ನು ತೆಗೆಯಿತು !

ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂಗಳ ಸಂಘಟಿತವಾಗಿ ವಿರೋಧಿಸಿದ ಪರಿಣಾಮ

ಹಿಂದೂಗಳೇ, ಈ ಯಶಸ್ಸಿಗೆ ಭಗವಾನ ಶ್ರೀಕೃಷ್ಣನ ಚರಣಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸಿ !

ಮುಂಬಯಿ – ಕರ್ಣಾವತಿಯ ‘ಆರ್ಚರ್ ಆರ್ಟ್ಸ್ ಗ್ಯಾಲರಿ’ಯ ಜಾಲತಾಣದಿಂದ ಚಿತ್ರಗಳ ಆನ್‌ಲೈನ್ ಮಾರಾಟ ಮಾಡಲಾಗುತ್ತಿತ್ತು. ಅದರಲ್ಲಿ ಹಿಂದೂದ್ವೇಷಿ ಚಿತ್ರಕಾರ ಎಂ.ಎಫ್. ಹುಸೇನ್‌ರ ಚಿತ್ರಗಳನ್ನು ಸಹ ಸೇರಿಸಲಾಗಿತ್ತು.

ಈ ಮಾಹಿತಿ ಸಿಕ್ಕಿದ ನಂತರ ಹಿಂದೂ ಜನಜಾಗೃತಿ ಸಮಿತಿ ಇದನ್ನು ವಿರೋಧಿಸಿ ಚಿತ್ರಗಳನ್ನು ಮಾರಾಟ ಮಾಡದಂತೆ ಒತ್ತಾಯಿಸಿ ಈ ಸಂಸ್ಥೆಗೆ ಪತ್ರ ಕಳುಹಿಸಿತ್ತು. ಅದೇರೀತಿ ಹಿಂದೂಗಳಿಗೆ ಈ ಚಿತ್ರಗಳನ್ನು ಕಾನೂನುಬದ್ಧ ರೀತಿಯಲ್ಲಿ ವಿರೋಧಿಸಬೇಕೆಂದು ಮನವಿ ಮಾಡಿತ್ತು. ಅದರಂತೆ ಹಿಂದೂಗಳು ಇದನ್ನು ಕಾನೂನು ರೀತಿಯಲ್ಲಿ ವಿರೋಧಿಸಲು ಪ್ರಾರಂಭಿಸಿದರು.

ಅದರ ಪರಿಣಾಮದಿಂದ ಸಂಸ್ಥೆಯು ಹುಸೇನ್ ಅವರ ಚಿತ್ರಗಳನ್ನು ಮಾರಾಟದಿಂದ ತೆಗೆದುಹಾಕಿತು. ಹುಸೇನ್ ಹಿಂದೂ ದೇವತೆಗಳ ಮತ್ತು ಭಾರತಮಾತೆಯ ಅಶ್ಲೀಲ ಮತ್ತು ನಗ್ನ ಚಿತ್ರಗಳನ್ನು ಚಿತ್ರಿಸಿದ್ದರು. ಪರಿಣಾಮವಾಗಿ ಕೋಟ್ಯವಧಿ ಹಿಂದೂಗಳ ಹಾಗೂ ಭಾರತೀಯರ ಭಾವನೆಗಳು ಘಾಸಿಗೊಂಡಿದ್ದವು.