೧ ಸಾವಿರ ವರ್ಷ ತಡವಾದರೂ ಪರವಾಗಿಲ್ಲ ‘ಬಾಬ್ರಿ ಮಸೀದಿ ಮತ್ತೊಮ್ಮೆ ಕಟ್ಟುವೆವು !’ (ಅಂತೆ)

ಮತಾಂಧ ಎಸ್.ಡಿ.ಪಿ.ಐ. ಪಕ್ಷದ ಸಚಿವ ತಸ್ಲೀಮ್ ರಹಮಾನಿಯ ಪ್ರಚೋದನಕಾರಿ ಹೇಳಿಕೆ

ಸರ್ವೋಚ್ಚ ನ್ಯಾಯಾಲಯದ ಬಗ್ಗೆ ಆದರ ಇರುವುದರಿಂದ ತಾಳ್ಮೆ ಇಟ್ಟುಕೊಂಡಿದ್ದೇವೆ ಎಂಬ ಫೂತ್ಕಾರ

  • ಇದರಿಂದ ಮತಾಂಧರ ಮನಸ್ಸಿನಲ್ಲಿ ಏನು ನಡೆಯುತ್ತಿರುತ್ತದೆ, ಎಂಬುದು ಗಮನಕ್ಕೆ ಬರುತ್ತದೆ! ಸರಕಾರ ಹಾಗೂ ಭದ್ರತಾದಳದವರು ಶೀಘ್ರವಾಗಿ ಹಸ್ತಕ್ಷೇಪ ಮಾಡಿ ಇಂತಹವರನ್ನು ಕೂಡಲೇ ಬಂಧಿಸಬೇಕು !
  • ಮತಾಂಧರ ಉದ್ಧಟತನ ಅರಿತುಕೊಳ್ಳಿರಿ ! ಇದರಿಂದ ಮತಾಂಧರು ಭಾರತೀಯ ಕಾನೂನು, ಸರಕಾರ, ಪ್ರಜಾಪ್ರಭುತ್ವ ವ್ಯವಸ್ಥೆ, ನ್ಯಾಯಾಂಗ ಯಾವುದರಿಂದಲೂ ಬಗ್ಗುವುದಿಲ್ಲ ಎಂಬುದು ಸಾಬೀತಾಗುತ್ತದೆ !
  • ಪ್ರಚೋದನಕಾರಿ ಹೇಳಿಕೆಯನ್ನು ನೀಡಿ ಒಂದುರೀತಿಯಲ್ಲಿ ವ್ಯವಸ್ಥೆಗೆ ಸಲಾಲೆಸೆಯುವ ಇಂತಹ ಪಕ್ಷದ ಮೇಲೆ ಸರಕಾರ ನಿಷೇಧವನ್ನೇಕೆ ಹೇರುತ್ತಿಲ್ಲ ?
  • ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ತಪ್ಪೆಂದು ಬಹಿರಂಗವಾಗಿ ಹೇಳುವವರ ಮೇಲೆ ಸರಕಾರ ಹಾಗೂ ನ್ಯಾಯಾಲಯವು ಏನು ಕ್ರಮ ಕೈಗೊಳ್ಳಲಿದೆ ?
ತಸ್ಲೀಮ್ ರಹಮಾನಿ

ಬೆಂಗಳೂರು – ೧ ಸಾವಿರ ವರ್ಷಗಳಾದರೂ ಪರವಾಗಿಲ್ಲ ‘ಬಾಬ್ರಿ ಮಸೀದಿಯನ್ನು ಮತ್ತೊಮ್ಮೆ ಕಟ್ಟುವೆವು ಎಂದು ‘ಸೋಶಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’(ಎಸ್.ಡಿ.ಪಿ.ಐ.) ಪಕ್ಷದ ಸಚಿವ ತಸ್ಲೀಮ್ ರಹಮಾನಿಯು ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದಾನೆ. ‘ಝಿ ನ್ಯೂಸ್’ ಸುದ್ದಿವಾಹಿನಿಯಲ್ಲಿ ಶ್ರೀಕೃಷ್ಣಜನ್ಮಭೂಮಿಯ ವಿಷಯದಲ್ಲಿ ಆಯೋಜಿಸಲಾಗಿದ್ದ ಚರ್ಚಾಕೂಟದಲ್ಲಿ ಅವರು ಮಾತನಾಡುತ್ತಿದ್ದರು. ‘ಅಯೋಧ್ಯೆಯ ಸ್ಥಳದಲ್ಲಿ ಮಸೀದಿ ಇತ್ತು, ಇದೆ ಹಾಗೂ ಅಲ್ಲಿಯೇ ಅಲ್ಲೇ ಇರಲಿದೆ’, ಈ ವಾಕ್ಯವನ್ನು ಉದ್ದೇಶಪೂರ್ವಕವಾಗಿ ೨ ಬಾರಿ ಹೇಳಿದರು. ಇದಕ್ಕೆ ಚರ್ಚಾಕೂಟದ ನಿವೇದಕರು ರಹಮಾನಿಯವರಿಗೆ ದ್ವಿಮುಖ ನಿಲುವು ತೆಗೆದುಕೊಳ್ಳುತ್ತಿರುವ ಛೀಮಾರಿ ಹಾಕಿದಾಗ ರಹಮಾನಿಯು, ‘ನಾವು ಸರ್ವೋಚ್ಚ ನ್ಯಾಯಾಲಯವನ್ನು ನಂಬುತ್ತೇವೆ; ಆದ್ದರಿಂದಲೇ ತಪ್ಪು ನಿರ್ಧಾರದ ಬಗ್ಗೆ ಸಂಯಮವನ್ನು ತೋರಿದ್ದೇವೆ’ ಎಂದು ಹೇಳಿದರು.

ಬೆಂಗಳೂರಿನಲ್ಲಿ ಆಗಸ್ಟ್ ೨೦೨೦ ರಂದು ನಡೆದ ಗಲಬೆಯಲ್ಲಿ ಎಸ್.ಡಿ.ಪಿ.ಐ. ಪಕ್ಷದ ಕೈವಾಡ ಇದೆ ಎಂದು ರಾಷ್ಟ್ರೀಯ ತನಿಖಾ ದಳವು ಹೇಳಿತ್ತು. ಈ ಗುಂಪುಕಟ್ಟಿದ್ದವರಿಗೆಲ್ಲ ಗಲಭೆ ಮಾಡಲು ಪ್ರಚೋದಿಸಿದ ಆರೋಪ ಹೊತ್ತಿರುವ ಇದೇ ಪಕ್ಷದ ನಾಯಕ ಮುಜಮ್ಮಿಲ ಪಾಶಾನನ್ನು ಪೊಲೀಸರು ಬಂಧಿಸಿದ್ದಾರೆ.