ಪಿಪರಿಯಾ (ಮಧ್ಯಪ್ರದೇಶ)ದಲ್ಲಿ ಜಿಲ್ಲಾ ಗೋರಕ್ಷಕ ಮುಖ್ಯಸ್ಥನ ಗುಂಡಿಕ್ಕಿ ಹತ್ಯೆ

ರವಿಯು ತಮ್ಮ ಚತುಷ್ಚಕ್ರ ವಾಹನದಿಂದ ತಮ್ಮ ಸಹಚರರೊಂದಿಗೆ ಹೋಗುತ್ತಿರುವಾಗ ಇನ್ನೊಂದು ಚತುಷ್ಚಕ್ರ ವಾಹನ ಅವರ ವಾಹನವನ್ನು ಅಡ್ಡಗಟ್ಟಿತು ಹಾಗೂ ಆ ವಾಹನದಿಂದ ೬ ಜನ ಕೋಲು, ಕಬ್ಬಿಣದ ಸಲಾಕೆ, ಬಂದೂಕಿನೊಂದಿಗೆ ಹೊರಬಂದು ರವಿ ಮೇಲೆ ಗುಂಡು ಹಾರಿಸಿದರು. ಇದರಿಂದ ಗಾಯಗೊಂಡ ರವಿಯವರನ್ನು ಆಸ್ಪತ್ರೆಗೆ ಸಾಗಿಸುತ್ತಿರುವಾಗಲೇ ಮೃತಪಟ್ಟರು.

ಕೈಥಲ (ಹರಿಯಾಣಾ)ನ ಪ್ರಾಚೀನ ಶೃಂಗೀ ಋಷಿ ಆಶ್ರಮದ ಮಹಂತ ರಾಮಭಜ ದಾಸ ಇವರ ಹತ್ಯೆ

ಜೂನ್ ೨೪ ರಂದು ೨೩ ವರ್ಷ ವಯಸ್ಸಿನ ಮಹಂತ ರಾಮಭಜ ದಾಸ ಇವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹಲ್ಲೆಖೋರರು ಅವರನ್ನು ಅಮಾನವೀಯವಾಗಿ ಥಳಿಸಿ ಕಲಾಯತನಲ್ಲಿನ ಖರಕಪಾಂಡವಾ ಗ್ರಾಮದ ಗದ್ದೆಯಲ್ಲಿ ಎಸೆದರು. ಗಂಭೀರವಾಗಿ ಗಾಯಗೊಂಡ ಮಹಂತರನ್ನು ಆಸ್ಪತ್ರೆಗೆ ದಾಖಲಿಸಲಾಯಿತು;

ಸಂದೇಸರ ಹಗರಣ ಪ್ರಕರಣದಲ್ಲಿ ‘ಇಡಿ’ಯಿಂದ ಸೋನಿಯಾ ಗಾಂಧಿಯವರ ರಾಜಕೀಯ ಸಲಹೆಗಾರ ಅಹಮದ ಪಟೇಲ್ ತನಿಖೆ

ಸಂದೇಸರಾ ಹಗರಣದ ಪ್ರಕರಣದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಸೋನಿಯಾ ಗಾಂಧಿಯ ರಾಜಕೀಯ ಸಲಹೆಗಾರ ಅಹಮದ ಪಟೇಲ್ ಇವರನ್ನು ಜಾರಿ ನಿರ್ದೇಶನಾಲಯ(‘ಇಡಿ’) ದಿಂದ ವಿಚಾರಣೆ ಮಾಡಲಾಯಿತು. ಇದರೊಂದಿಗೆ ಅವರ ದೆಹಲಿಯಲ್ಲಿನ ನಿವಾಸದಲ್ಲಿ ‘ಇಡಿ’ಯು ದಾಳಿ ನಡೆಸಿದೆ.

ಉತ್ತರಪ್ರದೇಶದ ಮದರಸಾದ ಸಿಬ್ಬಂದಿಗಳ ನೇಮಕದ ಬಗ್ಗೆ ತನಿಖೆ ನಡೆಯಲಿದೆ

ಉತ್ತರಪ್ರದೇಶದ ಮದರಸಾದಲ್ಲಿ ಆಗಿರುವ ಎಲ್ಲ ಸಿಬ್ಬಂದಿಗಳ ನೇಮಕದ ಬಗ್ಗೆ ತನಿಖೆ ನಡೆಯಲಿದೆ, ಎಂದು ರಾಜ್ಯದ ಅಲ್ಪಸಂಖ್ಯಾತ ಖಾತೆಯ ಸಚಿವ ಮೊಹಸೀನ ರಜಾ ಇವರು ತಿಳಿಸಿದ್ದಾರೆ. ಸಮಾಜವಾದಿ ಪಕ್ಷದ ಸರಕಾರ ಇರುವಾಗ ಮದರಸಾದಲ್ಲಿ ಆದಂತಹ ನೇಮಕದ ಬಗ್ಗೆ ತನಿಖೆ ನಡೆಯಲಿದೆ.

ಪಾಕಿಸ್ತಾನದಲ್ಲಿ ಅಪ್ರಾಪ್ತ ಹಿಂದೂ ಯುವತಿಯನ್ನು ಅಪಹರಿಸಿ ಬಲವಂತವಾಗಿ ಇಸ್ಲಾಮ್‌ಗೆ ಮತಾಂತರ

ಪಾಕಿಸ್ತಾನದ ಸಿಂಧ ಪ್ರಾಂತ್ರದ ಜಕೊಬಾಬಾದನ ಓರ್ವ ಅಪ್ರಾಪ್ತ ಹಿಂದೂ ಹುಡುಗಿಯನ್ನು ವಜೀರ ಹುಸೈನ್ ಹೆಸರಿನ ಮತಾಂಧನು ಅಪಹರಣ ಮಾಡಿ ಆಕೆಗೆ ಬಲವಂತವಾಗಿ ಇಸ್ಲಾಮ್‌ಗ ಮತಾಂತರಿಸಿದ, ಅದೇರೀತಿ ಆಕೆಯೊಂದಿಗೆ ನಿಕಾಹ ಮಾಡಿಕೊಂಡನು. ಜೂನ್ ೧೮ ರಂದು ಈ ಘಟನೆ ಘಟಿಸಿದೆ.

ಚೀನಾದಿಂದ ಅಪಾಯ ಹೆಚ್ಚಾಗಿದ್ದರಿಂದ  ದಕ್ಷಿಣ-ಪೂರ್ವ ಏಶಿಯಾದಲ್ಲಿ ತನ್ನ ಸೈನಿಕರನ್ನು ಕಳುಹಿಸಲಿರುವ ಅಮೇರಿಕಾ ! – ಅಮೇರಿಕಾ

ಭಾರತ ಹಾಗೂ ದಕ್ಷಿಣ-ಪೂರ್ವ ಏಶಿಯಾಗೆ ಚೀನಾದಿಂದ ದೊಡ್ಡ ಅಪಾಯವಿದೆ. ಚೀನಾ ಕಮ್ಯುನಿಸ್ಟ್ ಪಕ್ಷದ ಕಾರ್ಯಾಚರಣೆಯಿಂದ ಭಾರತ, ವಿಯೆಟ್ನಾಮ, ಇಂಡೋನೇಶಿಯಾ, ಮಲೇಷಿಯಾ, ಫಿಲಿಪಿನ್ಸ್ ಹಾಗೂ ದಕ್ಷಿಣ ಚೀನಾ ಸಮುದ್ರಕ್ಕೆ ದೊಡ್ಡ ಅಪಾಯವಿದೆ. ಮುಂಬರುವ ಸವಾಲನ್ನು ಎದುರಿಸಲು ಅಮೇರಿಕಾದ ಸೈನ್ಯ ದಕ್ಷಿಣ-ಪೂರ್ವ ಏಶಿಯಾದಲ್ಲಿ ಯೊಗ್ಯ ಸ್ಥಳದಲ್ಲಿ ನೇಮಿಸಲಾಗುವುದು

ಬಹಿಷ್ಕಾರದ ಭಯದಿಂದಾಗಿ ಭಾರತದಲ್ಲಿ ತನ್ನ ಅಂಗಡಿಯ ಎದುರು ‘ಮೇಡ್ ಇನ್ ಇಂಡಿಯಾ’ ಫಲಕ ಹಾಕುತ್ತಿರುವ ಚೀನಾದ ‘ಶಾವೋಮಿ’(Xiaomi) ಕಂಪನಿ !

ಬಹಿಷ್ಕಾರದ ಭಯದಿಂದಾಗಿ ಭಾರತದಲ್ಲಿನ ‘ಶಾವೋಮಿ’ ಈ ಸಂಚಾರವಾಣಿಯನ್ನು ನಿರ್ಮಿಸುವ ಚೀನಾದ ಕಂಪನಿಯು ದೆಹಲಿ-ಎನ್.ಸಿ.ಆರ್., ಮುಂಬಯಿ, ಪುಣೆ, ಚೆನ್ನೈ, ಪಟ್ನಾ, ಆಗ್ರಾ ಇತ್ಯಾದಿ ನಗರಗಳಲ್ಲಿಯ ತನ್ನ ಅಂಗಡಿಯ ಮುಂದೆ ‘ಮೇಡ್ ಇನ್ ಇಂಡಿಯಾ’ದ ಫಲಕವನ್ನು ಹಾಕಿದೆ. ಲಡಾಖ ಗಡಿಯಲ್ಲಿ ಚೀನಾದಿಂದ ಸತತವಾಗಿ ಆಗುತ್ತಿರುವ ಘರ್ಷಣೆಯಿಂದಾಗಿ ದೇಶಾದ್ಯಂತ ಚೀನಾ ವಿರೋಧಿ ವಾತಾವರಣ ನಿರ್ಮಾಣವಾಗಿದೆ.

ಇದೇ ಮೊದಲ ಬಾರಿ ‘ಡಿಡಿ ನ್ಯಾಶನಲ್’ ವಾಹಿನಿಯಿಂದ ಅಮರನಾಥ ಯಾತ್ರೆಯ ನೇರ ಪ್ರಸಾರ

ಇದೇ ಮೊದಲ ಬಾರಿ ‘ಡಿಡಿ ನ್ಯಾಶನಲ್’ ವಾಹಿನಿಯಲ್ಲಿ ಅಮರನಾಥ ಯಾತ್ರೆಯ ನೇರ ಪ್ರಸಾರ ಮಾಡಲಾಗುವುದು. ‘ಶ್ರೀ ಅಮರನಾಥ ಶ್ರೈನ್ ಬೋರ್ಡ್’ವು ದೂರದರ್ಶನಕ್ಕೆ ನೀಡಿದ ಕರೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಯಾತ್ರೆಯ ಬಗ್ಗೆ ಬೆಳಗ್ಗೆ ಹಾಗೂ ಸಂಜೆ ಅರ್ಧಗಂಟೆ ನೇರ ಪ್ರಸಾರ ಮಾಡಲಾಗುವುದು.

ಗಡಿವಿವಾದ ಹಾಗೂ ಪೌರತ್ವ ತಿದ್ದುಪಡಿ ಮಸೂದೆಯಿಂದ ನೇಪಾಳದ ಆಡಳಿತಾರೂಢ ಪಕ್ಷದಲ್ಲಿ ಬಿರುಕು ನಿಶ್ಚಿತ

ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಭಾರತದೊಂದಿಗಿನ ಗಡಿ ವಿವಾದದಿಂದ ಭಾರತವನ್ನು ವಿರೋಧಿಸುವ ನೇಪಾಳದ ಪ್ರಧಾನಮಂತ್ರಿ ಕೆ.ಪಿ.ಓಲಿ ಶರ್ಮಾ ಇವರಿಗೆ ತಮ್ಮ ಕಮ್ಯುನಿಸ್ಟ್ ಪಕ್ಷದಿಂದಲೇ ವಿರೋಧವಾಗಲಾರಂಭಿಸಿದೆ. ಈ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಪ್ರಧಾನಮಂತ್ರಿ ಪುಷ್ಪಕಮಲ ದಹಲ ಪ್ರಚಂಡ ಇವರು ಪ್ರಧಾನಮಂತ್ರಿ ಓಲಿಯವರನ್ನು ಟೀಕಿಸುತ್ತ ಅವರು ರಾಜೀನಾಮೆಯನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕಮ್ಯುನಿಸ್ಟ್ ಕಾರ್ಯಕರ್ತೆ ರೆಹಾನಾ ಫಾತಿಮಾ ವಿರುದ್ಧ ದೂರು ದಾಖಲು

೨೦೧೮ ರಲ್ಲಿ ಶಬರಿಮಲೆ ದೇವಸ್ಥಾನವನ್ನು ಪ್ರವೇಶ ಮಾಡಲು ಪ್ರಯತ್ನಿಸಿದ ಕಮ್ಯುನಿಸ್ಟ್ ಕಾರ್ಯಕರ್ತೆ ರೆಹಾನಾ ಫಾತಿಮಾಳು ತನ್ನ ಸಣ್ಣ ಮಗನಿಂದ ತನ್ನ ಅರೆನಗ್ನ ಚಿತ್ರವನ್ನು ತಯಾರಿಸಿ ಅದರದೊಂದು ‘ವಿಡಿಯೋ’ ಸಾಮಾಜಿಕ ಪ್ರಸಾರ ಮಾಧ್ಯಮದಿಂದ ಪ್ರಸಾರ ಮಾಡಿದಳು.