ಸಂದೇಸರ ಹಗರಣ ಪ್ರಕರಣದಲ್ಲಿ ‘ಇಡಿ’ಯಿಂದ ಸೋನಿಯಾ ಗಾಂಧಿಯವರ ರಾಜಕೀಯ ಸಲಹೆಗಾರ ಅಹಮದ ಪಟೇಲ್ ತನಿಖೆ

  • ದೆಹಲಿಯ ಮನೆಯ ಮೇಲೆ ದಾಳಿ

  • ಪಂಜಾಬ ನ್ಯಾಶನಲ್ ಬ್ಯಾಂಕ್ ಹಗರಣಕ್ಕಿಂತ ದೊಡ್ಡ ಹಗರಣವಾಗಿದೆ ಎಂದು ‘ಇಡಿ’ಯ ಮಾಹಿತಿ

ನವ ದೆಹಲಿ – ಸಂದೇಸರಾ ಹಗರಣದ ಪ್ರಕರಣದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಸೋನಿಯಾ ಗಾಂಧಿಯ ರಾಜಕೀಯ ಸಲಹೆಗಾರ ಅಹಮದ ಪಟೇಲ್ ಇವರನ್ನು ಜಾರಿ ನಿರ್ದೇಶನಾಲಯ(‘ಇಡಿ’) ದಿಂದ ವಿಚಾರಣೆ ಮಾಡಲಾಯಿತು. ಇದರೊಂದಿಗೆ ಅವರ ದೆಹಲಿಯಲ್ಲಿನ ನಿವಾಸದಲ್ಲಿ ‘ಇಡಿ’ಯು ದಾಳಿ ನಡೆಸಿದೆ. ಈ ಹಗರಣದ ಪ್ರಕರಣದಲ್ಲಿ ‘ಇಡಿ’ಯು ಪಟೇಲರ ಹೇಳಿಕೆಯನ್ನು ಪಡೆದುಕೊಂಡಿರುವ ಬಗ್ಗೆ ಮೂಲಗಳು ಮಾಹಿತಿ ತಿಳಿಸಿವೆ. ಈ ಹಿಂದೆ ‘ಇಡಿ’ ಈ ಪ್ರಕರಣದಲ್ಲಿ ಅವರಿಗೆ ಅನೇಕ ಸಲ ವಿಚಾರಣೆಗಾಗಿ ಕರೆದಿತ್ತು; ಆದರೆ ಅವರು ಕೊರೋನಾದ ಹಾವಳಿಯ ಕಾರಣವನ್ನು ನೀಡಿ ವಿಚಾರಣೆಗಾಗಿ ಹೋಗಲು ಮೀನಮೇಷ ಎಣಿಸುತ್ತಿದ್ದರು. ಈ ಹಿಂದೆ ಪಟೇಲರ ಮಗ ಫೈಸಲ್ ಹಾಗೂ ಅಳಿಯ ನ್ಯಾಯವಾದಿ ಸಿದ್ದಕೀಯವರಲ್ಲಿಯೂ ಈ ಪ್ರಕರಣದಲ್ಲಿ ವಿಚಾರಣೆಯನ್ನು ಮಾಡಲಾಗಿದೆ. ‘ಇಡಿ’ಯು, ‘ಸಂದೆಸರಾ ಸಹೋದರರು ಮಾಡಿದ ಹಗರಣವು ಪಂಜಾಬ ನ್ಯಾಶನಲ್ ಬ್ಯಾಂಕಿನ ಹಗರಣಕ್ಕಿಂತ ದೊಡ್ಡ ಹಗರಣ ಆಗಿದೆ’ ಎಂದು ಹೇಳಿದೆ.

‘ಸ್ಟರಲಿಂಗ್ ಬಯೋಟೆಕ್ ಲಿಮಿಟೆಡ್’ ಇದು ‘ಸಂದೇಸರಾ ಗ್ರೂಪ್’ನ ಒಡೆತನದಲ್ಲಿದೆ. ‘ಸಂದೇಸರಾ ಗ್ರೂಪ್’ನ ಸಂಚಾಲಕ ನಿತಿನ್ ಸಂದೇಸರಾ, ಚೇತನ ಸಂದೇಸರಾ ಹಾಗೂ ದೀಪ್ತಿ ಸಂದೇಸರಾ ಇವರು ಭಾರತೀಯ ಬ್ಯಾಂಕಿನ ೧೪ ಸಾವಿರದ ೫೦೦ ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಹಣದ ವಂಚನೆ ಮಾಡಿದೆ. ‘ಸ್ಟರಲಿಂಗ್ ಬಯೋಟೆಕ್’ನ ಮಾಲೀಕರಾದ ಸಂದೇಸರಾ ಸಹೋದರ ಚೇತನ ಜಯಂತಿಲಾಲ್ ಸಂದೇಸರಾ ಹಾಗೂ ನಿತೀನ್ ಜಯಂತಿಲಾಲ್ ಸಂದೇಸರಾ ಇವರ ಮೇಲೆ ನಕಲಿ ಕಂಪನಿಯಯನ್ನು ನಿರ್ಮಿಸಿ ಬ್ಯಾಂಕಿನಿಂದ ಸಾಲವನ್ನು ಪಡೆದಿದ್ದರೆಂಬ ಆರೋಪವಿದೆ. ಸಂದೇಸರ ಸಹೋದರರ ವಿರುದ್ಧ ಸಿಬಿಐವು ೫ ಸಾವಿರದ ೭೦೦ ಕೋಟಿ ರೂಪಾಯಿಯ ವಂಚನೆಯ ಅಪರಾಧವನ್ನು ದಾಖಲಿಸಿದೆ. ಈ ಹಗರಣದ ವಿಚಾರಣೆಗಾಗಿ ಪಟೇಲ್, ಫೈಸಲ್ ಹಾಗೂ ನ್ಯಾಯವಾದಿ ಸಿದ್ದಕಿ ಇವರ ಹೆಸರುಗಳು ಬೆಳಕಿಗೆ ಬಂದವು. ಫೈಸಲ್ ಹಾಗೂ ಸಿದ್ದಕಿ ಇವರು ಸಂದೇಸರಾನಿಂದ ಹಣ ಪಡೆದಿದ್ದಾರೆಂದು ಹೇಳಲಾಗುತ್ತಿದೆ.