ಉತ್ತರಪ್ರದೇಶದ ಮದರಸಾದ ಸಿಬ್ಬಂದಿಗಳ ನೇಮಕದ ಬಗ್ಗೆ ತನಿಖೆ ನಡೆಯಲಿದೆ

ಉತ್ತರಪ್ರದೇಶದ ಅಲ್ಪಸಂಖ್ಯಾತ ಖಾತೆ ಸಚಿವ ಮೊಹಸೀನ್ ರಜಾ ಇವರ ಆದೇಶ

  • ನಕಲಿ ಕಾಗದಪತ್ರಗಳ ಆಧಾರದಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡಿರುವ ಮಾಹಿತಿ ಬಹಿರಂಗ

  • ಸಮಾಜವಾದಿ ಪಕ್ಷದ ರಾಜ್ಯಾಡಳಿತದಲ್ಲಿ ಭ್ರಷ್ಟಾಚಾರ ಆಗಿದೆ ಎಂಬ ಆರೋಪ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದ ಮದರಸಾದಲ್ಲಿ ಆಗಿರುವ ಎಲ್ಲ ಸಿಬ್ಬಂದಿಗಳ ನೇಮಕದ ಬಗ್ಗೆ ತನಿಖೆ ನಡೆಯಲಿದೆ, ಎಂದು ರಾಜ್ಯದ ಅಲ್ಪಸಂಖ್ಯಾತ ಖಾತೆಯ ಸಚಿವ ಮೊಹಸೀನ ರಜಾ ಇವರು ತಿಳಿಸಿದ್ದಾರೆ. ಸಮಾಜವಾದಿ ಪಕ್ಷದ ಸರಕಾರ ಇರುವಾಗ ಮದರಸಾದಲ್ಲಿ ಆದಂತಹ ನೇಮಕದ ಬಗ್ಗೆ ತನಿಖೆ ನಡೆಯಲಿದೆ.
ರಜಾ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ‘ನಕಲಿ ಕಾಗದಪತ್ರಗಳನ್ನು ತಯಾರಿಸಿ ಮದರಸಾದಲ್ಲಿ ಕೆಲಸವನ್ನು ಗಿಟ್ಟಿಸಿರುವ ಮಾಹಿತಿ ಸಿಕ್ಕಿದ್ದರಿಂದ ಈ ತನಿಖೆ ನಡೆಯಲಿದೆ. ಸಮಾಜವಾದಿ ಪಕ್ಷವು ಮತಪೆಟ್ಟಿಗೆಗಾಗಿ ಮದರಸಾದಲ್ಲಿ ಭ್ರಷ್ಟಾಚಾರ ಮಾಡಿದೆ ಹಾಗೂ ಅವರ ಆಪ್ತರಿಗೆ ಅದರ ಲಾಭವನ್ನು ನೀಡಿದೆ. ತನಿಖೆಯಲ್ಲಿ ಆರೋಪ ಸಿದ್ಧವಾದರೆ ಅವರಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುವುದು’ ಎಂದು ಹೇಳಿದ್ದಾರೆ.