ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಗೋರಕ್ಷರ ಹತ್ಯೆಯಾಗುವುದು ಚಿಂತಾಜನಕವಾಗಿದೆ !
ಹೊಶಂಗಾಬಾದ (ಮಧ್ಯಪ್ರದೇಶ) – ಇಲ್ಲಿಯ ಪಿಪರಿಯಾದಲ್ಲಿ ಜಿಲ್ಲಾ ಗೋರಕ್ಷಕಮುಖ್ಯಸ್ಥ ರವಿ ವಿಶ್ವಕರ್ಮನನ್ನು ಜೂನ್ ೨೬ ರಂದು ಸಂಜೆ ಅಜ್ಞಾತರು ಗುಂಡಿಕ್ಕಿ ಹತ್ಯೆ ಮಾಡಿದರು. ಈ ಹತ್ಯೆಯ ಕಾರಣ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.
೧. ರವಿಯು ತಮ್ಮ ಚತುಷ್ಚಕ್ರ ವಾಹನದಿಂದ ತಮ್ಮ ಸಹಚರರೊಂದಿಗೆ ಹೋಗುತ್ತಿರುವಾಗ ಇನ್ನೊಂದು ಚತುಷ್ಚಕ್ರ ವಾಹನ ಅವರ ವಾಹನವನ್ನು ಅಡ್ಡಗಟ್ಟಿತು ಹಾಗೂ ಆ ವಾಹನದಿಂದ ೬ ಜನ ಕೋಲು, ಕಬ್ಬಿಣದ ಸಲಾಕೆ, ಬಂದೂಕಿನೊಂದಿಗೆ ಹೊರಬಂದು ರವಿ ಮೇಲೆ ಗುಂಡು ಹಾರಿಸಿದರು. ಇದರಿಂದ ಗಾಯಗೊಂಡ ರವಿಯವರನ್ನು ಆಸ್ಪತ್ರೆಗೆ ಸಾಗಿಸುತ್ತಿರುವಾಗಲೇ ಮೃತಪಟ್ಟರು.
೨. ರವಿಯ ಸಹೋದರ ಅಮಿತನ ದೂರಿನ ಮೇರೆಗೆ ನಿತು ವಂಶಕಾರ, ಮುನ್ನಾ ಪಟೇಲ, ಸಂಜು ಪಟೇಲ, ಅಭಿ ತಿವಾರಿ, ಅಭಿಷೇಕ ಚೌರಸಿಯಾ, ಕಲ್ಲು ಮೆಹರಾ, ನಿತಿನ ಸಿಲಾವಟ, ರಜ್ಜು ಪುರಬಿಯಾ, ಅಜಿತ ಪಟೇಲ್ ಹಾಗೂ ಇತರ ಕೆಲವರ ವಿರುದ್ಧ ದೂರು ದಾಖಲಿಸಲಾಗಿದೆ.