ಕೈಥಲ (ಹರಿಯಾಣಾ)ನ ಪ್ರಾಚೀನ ಶೃಂಗೀ ಋಷಿ ಆಶ್ರಮದ ಮಹಂತ ರಾಮಭಜ ದಾಸ ಇವರ ಹತ್ಯೆ

  • ಹರಿಯಾಣಾದಲ್ಲಿ ಭಾಜಪದ ಸರಕಾರ ಇರುವಾಗ ಮಹಂತರ ಹತ್ಯೆ ಆಗುವುದು ಚಿಂತಾಜನಕವಾಗಿದೆ !

  • ದೇಶದಾದ್ಯಂತ ಸಾಧು, ಸಂತರು ಹಾಗೂ ಹಿಂದುತ್ವನಿಷ್ಠರ ಆಗುತ್ತಿರುವ ಹತ್ಯೆಯನ್ನು ತಡೆಗಟ್ಟಲು ಹಾಗೂ ಅವರ ರಕ್ಷಣೆಗಾಗಿ ಕೇಂದ್ರ ಸರಕಾರವು ವಿಶೇಷ ದಳವನ್ನು ನಿರ್ಮಿಸುವುದು ಅಗತ್ಯವಿದೆ !

ಕೈಥಲ (ಹರಿಯಾಣಾ) – ಜೂನ್ ೨೪ ರಂದು ೨೩ ವರ್ಷ ವಯಸ್ಸಿನ ಮಹಂತ ರಾಮಭಜ ದಾಸ ಇವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹಲ್ಲೆಖೋರರು ಅವರನ್ನು ಅಮಾನವೀಯವಾಗಿ ಥಳಿಸಿ ಕಲಾಯತನಲ್ಲಿನ ಖರಕಪಾಂಡವಾ ಗ್ರಾಮದ ಗದ್ದೆಯಲ್ಲಿ ಎಸೆದರು. ಗಂಭೀರವಾಗಿ ಗಾಯಗೊಂಡ ಮಹಂತರನ್ನು ಆಸ್ಪತ್ರೆಗೆ ದಾಖಲಿಸಲಾಯಿತು; ಆದರೆ ಚಿಕಿತ್ಸೆ ನಡೆಯುತ್ತಿರುವಾಗಲೇ ಅವರು ಮೃತಪಟ್ಟರು. ಮಹಂತ ರಾಮಭಜ ದಾಸರು ‘ಷಡ್‌ದರ್ಶನ ಸಾಧು ಸಮಾಜ, ಹರಿಯಾಣಾ’ದ ಉಪಾಧ್ಯಕ್ಷ ಹಾಗೂ ಕೈಥಲನ ಸಾಂಘನ ಗ್ರಾಮದ ಪ್ರಾಚೀನ ಶೃಂಗಿ ಋಷಿ ಆಶ್ರಮದ ಮಹಂತರಾಗಿದ್ದರು. ಅವರು ‘ಎಮ್.ಎ. ತನಕ ಶಿಕ್ಷಣವನ್ನು ಪಡೆದಿದ್ದಾರೆ. ಮಹಂತ ರಾಮಭಜ ಇವರು ತಮ್ಮ ಮೃತ್ಯುವಿನ ಮೊದಲು ಪೊಲೀಸರಿಗೆ ನೀಡಿದ ಮಾಹಿತಿಗನುಸಾರ ಛವಿದಾಸ ಎಂಬ ವ್ಯಕ್ತಿಯು ಅವರ ಮೇಲೆ ಹಲ್ಲೆ ಮಾಡಿದರು. ಹಲ್ಲೆಖೋರನಿಗೆ ಬೆಲರಖಾ ಗ್ರಾಮದ ಕುಲದೀಪ ಹಾಗೂ ನೆಹರಾ ಇವರಿಬ್ಬರು ಸಹಾಯ ಮಾಡಿದರು. ಇವರಿಬ್ಬರು ಮಹಂತರನ್ನು ಆಶ್ರಮದಿಂದ ಹೊರಗೆ ಎಳೆದುಕೊಂಡು ಹೋದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ೩ ಜನರ ವಿರುದ್ಧ ದೂರನ್ನು ದಾಖಲಿಸಿಕೊಂಡಿದ್ದಾರೆ.