ಅಮೇರಿಕಾದ ವೈಟ್ ಹೌಸ್‌ನಲ್ಲಿನ ಕಾರ್ಯಕ್ರಮದಲ್ಲಿ ಭಾರತೀಯ ಮಹಿಳಾ ಕಂಪ್ಯೂಟರ್ ಇಂಜಿನಿಯರ್‌ನಿಂದ ಅಮೇರಿಕಾದ ಪೌರತ್ವದ ಪ್ರಮಾಣವಚನ ಸ್ವೀಕಾರ

ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರ ಉಪಸ್ಥಿತಿಯಲ್ಲಿ ವೈಟ್ ಹೌಸ್‌ನಲ್ಲಿ ನೆರವೇರಿದ ಒಂದು ಕಾರ್ಯಕ್ರಮದಲ್ಲಿ ಭಾರತೀಯ ಸಂಜಾತೆ ಹಾಗೂ ಕಂಪ್ಯೂಟರ್ ಇಂಜಿನಿಯರ್ ಆಗಿರುವ ಸುಧಾ ಸುಂದರಿ ನಾರಾಯಣನ್ ಇವರು ಅಮೇರಿಕಾದ ಪೌರತ್ವದ ಪ್ರಮಾಣವಚನವನ್ನು ಸ್ವೀಕರಿಸಿದರು. ಅಮೇರಿಕಾದ ರಾಷ್ಟ್ರಾಧ್ಯಕ್ಷರ ಉಪಸ್ಥಿತಿಯಲ್ಲಿ ಈ ರೀತಿಯ ಕಾರ್ಯಕ್ರಮ ನಡೆಯುವುದು ಅಪರೂಪದ ಘಟನೆಯಾಗಿದೆ

ರಾಜ್ಯದಲ್ಲಿ ‘ಲವ್ ಜಿಹಾದ್’ನ ಘಟನೆಯನ್ನು ತಡೆಗಟ್ಟಲು ‘ಕಾರ್ಯ ಯೋಜನೆ’ ನಿರ್ಮಿಸಲು ಯೋಗಿ ಆದಿತ್ಯನಾಥ ಇವರ ಆದೇಶ

ಇತ್ತೀಚೆಗೆ ಉತ್ತರಪ್ರದೇಶದ ಮೆರಠ, ಕಾನಪುರ ಹಾಗೂ ಲಖಿಮಪುರ ಖಿರಿಯಲ್ಲಿ ಮತಾಂಧರು ಹಿಂದೂ ಹುಡುಗಿಯರನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಮೋಸಗೊಳಿಸುವ ಘಟನೆಯು ಬಹಿರಂಗಗೊಂಡಿತ್ತು. ‘ಲವ್ ಜಿಹಾದ್’ನ ಘಟನೆಗಳಲ್ಲಿ ಮೆರಠ ಹಾಗೂ ಲಖಿಮಪುರ ಖಿರಿಯಲ್ಲಿ ಹಿಂದೂ ಹುಡುಗಿಯರ ಹತ್ಯೆಯೂ ಆಗಿತ್ತು.

ಯೋಗಋಷಿ ರಾಮದೇವ ಬಾಬಾ ಇವರ ‘ಕೊರೋನಿಲ್’ ಔಷಧಿಯ ಮಾರಾಟದ ಮೇಲಿನ ನಿಷೇಧ ರದ್ದು

ಯೋಗಋಷಿ ರಾಮದೇವ ಬಾಬಾ ಇವರ ‘ಪತಂಜಲಿ’ ಸಂಸ್ಥೆಯ ‘ಕೊರೋನಿಲ್’ ಈ ಔಷಧಿಯ ಬಗ್ಗೆ ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ರದ್ದು ಪಡಿಸಿದೆ. ಅದಲ್ಲದೇ ಸರ್ವೋಚ್ಚ ನ್ಯಾಯಾಲಯವು ಈ ಬಗೆಗಿನ ಅರ್ಜಿಯನ್ನೂ ತಿರಸ್ಕರಿಸಿದೆ.

ಪಿ.ಎಫ್.ಐ. ಹಾಗೂ ಎಸ್.ಡಿ.ಪಿ.ಐ. ಈ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯ

ಆಗಸ್ಟ್ ೧೧ ರಂದು ಬೆಂಗಳೂರಿನಲ್ಲಿ ಮತಾಂಧರು ಮಾಡಿದ ಗಲಭೆಯ ಹಿಂದೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’(ಪಿ.ಎಫ್.ಐ.) ಹಾಗೂ ಅದರ ರಾಜಕೀಯ ಶಾಖೆಯಾಗಿರುವ ‘ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ಈ ಪಕ್ಷಗಳು ಇರುವ ಬಗ್ಗೆ ತನಿಖೆಯಿಂದ ಬಹಿರಂಗವಾಗಿದೆ.

ದೆಹಲಿ ಗಲಭೆಯ ಆರೋಪಿ ತಾಹಿರ್ ಹುಸೇನ್‌ನ ಕಾರ್ಪೊರೇಟರ್ ಹುದ್ದೆ ರದ್ದು

ಪೂರ್ವ ದೆಹಲಿಯ ಆಮ್ ಆದ್ಮಿ ಪಕ್ಷದ ವಾರ್ಡ್ ಸಂ. ೫೯-ಈ ಯ ಕಾರ್ಪೊರೇಟರ್ ಹಾಗೂ ಅಲ್ಲಿಯ ಗಲಭೆಯ ಆರೋಪಿ ತಾಹಿರ್ ಹುಸೇನ್ ಇವರನ್ನು ಕಾರ್ಪೊರೇಟರ್ ಹುದ್ದೆಯಿಂದ ತೆಗೆದುಹಾಕಲಾಗಿದೆ. ಪೂರ್ವ ದೆಹಲಿಯ ಮಹಾನಗರ ಪಾಲಿಕೆಯು ಆಗಸ್ಟ್ ೨೬ ರಂದು ನಿರ್ಧಾರ ತೆಗೆದುಕೊಂಡರು.

ಚೆನ್ನೈಯ ಯುವತಿಯನ್ನು ಬ್ರಿಟನ್‌ನಿಂದ ಅಪಹರಿಸಿ ಬಾಂಗ್ಲಾದೇಶಕ್ಕೆ ಕೊಂಡೊಯ್ದ ಬಾಂಗ್ಲಾದೇಶಿ ಮತಾಂಧ

ಕೆಲವು ಬಾಂಗ್ಲಾದೇಶಿ ಮತಾಂಧರು ಚೆನ್ನೈಯ ಯುವತಿಯನ್ನು ಬ್ರಿಟನ್‌ನಿಂದ ಅಪಹರಿಸಿ ಆಕೆಯನ್ನು ಬಾಂಗ್ಲಾದೇಶಕ್ಕೆ ಕರೆದುಕೊಂಡು ಹೋಗಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಪೀಡಿತೆಯ ಪೋಷಕರು ೨೨ ಮೇ ೨೦೨೦ ರಂದು ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದರು. ಅಲ್ಲಿಂದ ಈ ಪ್ರಕರಣವು ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾಯಿಸಲಾಯಿತು.

ಬೀರಭೂಮ್(ಬಂಗಾಲ)ದಲ್ಲಿ ದಂಡ ಕಟ್ಟಲಿಲ್ಲವೆಂದು ೭ ಪಂಚರಿಂದಲೇ ಆದಿವಾಸಿ ಮಹಿಳೆಯ ಮೇಲೆ ಬಲಾತ್ಕಾರ

ಇಲ್ಲಿಯ ಮಹಮ್ಮದ ಬಾಜಾರ ಪ್ರದೇಶದಲ್ಲಿ ಓರ್ವ ಆದಿವಾಸಿ ಮಹಿಳೆಯ ಮೇಲೆ ಅನೈತಿಕ ಸಂಬಂಧದ ಆರೋಪ ಮಾಡಲಾಗಿತ್ತು ಹಾಗೂ ಪಂಚಾಯತರು ಆಕೆಗೆ ೧ ಲಕ್ಷ ರೂಪಾಯಿ ದಂಡ ನೀಡುವ ಶಿಕ್ಷೆಯನ್ನು ಹೇಳಿದ್ದರು; ಆದರೆ ಇಷ್ಟು ದಂಡ ತುಂಬಲು ಸಾಧ್ಯವಾಗಲಿಲ್ಲ. ದಂಡವನ್ನು ತುಂಬದೇ ಇದ್ದರಿಂದ ಪಂಚರೇ ಆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದರು.

ತೆಲಂಗಾಣಾದಲ್ಲಿ ಕೊರೋನಾಮುಕ್ತರಾಗಿದ್ದ ೨ ರೋಗಿಗಳಿಗೆ ಪುನಃ ಕೊರೋನಾದ ಸೋಂಕು

ರಾಜ್ಯದಲ್ಲಿ ಕೊರೋನಾಮುಕ್ತರಾಗಿದ್ದ ೨ ರೋಗಿಗಳಿಗೆ ಪುನಃ ಕೊರೋನಾದ ಸೋಂಕು ತಗಲಿರುವ ಮಾಹಿತಿ ತೆಲಂಗಾಣ ರಾಜ್ಯದ ಆರೋಗ್ಯ ಸಚಿವ ಇತೆಲಾ ರಾಜೆಂದರ ಇವರು ನೀಡಿದರು. ಆದ್ದರಿಂದ ‘ನಾಗರಿಕರು ಭಯಪಡಬಾರದು. ಕೊರೋನಾದ ಸಾವಿನ ಪ್ರಮಾಣ ತುಂಬಾ ನಗಣ್ಯವಾಗಿದೆ. ಶೇ. ೯೯ ರಷ್ಟು ಜನರು ಗುಣಮುಖರಾಗುತ್ತಿದ್ದಾರೆ’, ಎಂದೂ ಅವರು ಹೇಳಿದರು.

ಚೀನಾ ಹಾಗೂ ಪಾಕಿಸ್ತಾನ ಜೈವಿಕ ಅಸ್ತ್ರ ಅಭಿವೃದ್ಧಿ ಪಡಿಸುತ್ತಿದೆ ! – ಆಸ್ಟ್ರೇಲಿಯಾದ ಜಾಲತಾಣದ ಮಾಹಿತಿ

‘ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್’ (ಸಿಪಿಇಸಿ- ಚೀನಾ-ಪಾಕಿಸ್ತಾನ ಆರ್ಥಿಕ ಹೆದ್ದಾರಿ) ಇವರಿಂದ ಚೀನಾ ಹಾಗೂ ಪಾಕಿಸ್ತಾನ ಜೈವಿಕ ಅಸ್ತ್ರಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಕಳೆದ ೫ ವರ್ಷಗಳಿಂದ ಇದರ ಮೇಲೆ ಕೆಲಸ ನಡೆಯುತ್ತಿದೆ, ಎಂದು ಆಸ್ಟ್ರೇಲಿಯಾದ ಜಾಲತಾಣ ‘ಕ್ಲಾಕ್ಸೋನ್’ ಹೇಳಿದೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾದಿಂದ ಕಟ್ಟಲಾಗುತ್ತಿರುವ ಆಣೆಕಟ್ಟಿನ ವಿರುದ್ಧ ನಾಗರಿಕರಿಂದ ಪಂಜಿನ ಮೆರವಣಿಗೆ

ಒಂದು ಚೀನಾದ ಸಂಸ್ಥೆಯ ಸಹಾಯದಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೀಲಮ್-ಝೇಲಮ್ ನದಿಯ ಮೇಲೆ ಕಟ್ಟಲಾಗುತ್ತಿರುವ ಆಣೆಕಟ್ಟಿನ ವಿರುದ್ಧ ಆಗಸ್ಟ್ ೨೪ ರಂದು ರಾತ್ರಿ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಝಾಫ್ಫರಾಬಾದನಲ್ಲಿ ಸ್ಥಳೀಯರಿಂದ ರಸ್ತೆಗಿಳಿದು ಪಂಜು ಹಿಡಿದು ಮೆರವಣಿಗೆಯನ್ನು ಮಾಡಿದರು.