ಯೋಗಋಷಿ ರಾಮದೇವ ಬಾಬಾ ಇವರ ‘ಕೊರೋನಿಲ್’ ಔಷಧಿಯ ಮಾರಾಟದ ಮೇಲಿನ ನಿಷೇಧ ರದ್ದು

ನವದೆಹಲಿ – ಯೋಗಋಷಿ ರಾಮದೇವ ಬಾಬಾ ಇವರ ‘ಪತಂಜಲಿ’ ಸಂಸ್ಥೆಯ ‘ಕೊರೋನಿಲ್’ ಈ ಔಷಧಿಯ ಬಗ್ಗೆ ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ರದ್ದು ಪಡಿಸಿದೆ. ಅದಲ್ಲದೇ ಸರ್ವೋಚ್ಚ ನ್ಯಾಯಾಲಯವು ಈ ಬಗೆಗಿನ ಅರ್ಜಿಯನ್ನೂ ತಿರಸ್ಕರಿಸಿದೆ.

ಚೆನ್ನೈನ ‘ಅರುದ್ರ ಇಂಜಿನಿಯರಿಂಗ್ ಪ್ರೈ. ಸಂಸ್ಥೆ’ಯು ‘ಕೊರೋನಿಲ್’ ಹೆಸರಿನ (ಟ್ರೇಡ್ ಮಾರ್ಕ) ನೋಂದಣಿಯು ೧೯೯೩ ರಿಂದ ತನ್ನಲ್ಲಿದೆ ಎಂದು ಹೇಳುತ್ತಾ ‘ಪತಂಜಲಿ’ಯ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿತ್ತು. ಈ ಸಂಸ್ಥೆಯ ಹೇಳಿಕೆಯನ್ನು ಆಧರಿಸಿ ಮದ್ರಾಸ್ ಉಚ್ಚನ್ಯಾಯಾಲಯವು ‘ಪತಂಜಲಿ’ಯ ‘ಕೊರೋನಿಲ್’ ಔಷಧಿಯ ಮಾರಾಟದ ಮೇಲೆ ತಡೆ ನೀಡಿತ್ತು. ಇದರ ವಿರುದ್ಧ ‘ಪತಂಜಲಿ’ಯು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.