ಹೊಸ್ಟನ್‌ನಲ್ಲಿರುವ ಚೀನಾದ ವಾಣಿಜ್ಯ ರಾಯಭಾರಿ ಕಛೇರಿ ಬೇಹುಗರಿಕೆಯ ಮುಖ್ಯಕೇಂದ್ರವಾಗಿತ್ತು ! – ಅಮೇರಿಕಾ

ಹೊಸ್ಟನ್‌ನಲ್ಲಿಯ ಚೀನಾದ ವಾಣಿಜ್ಯ ರಾಯಭಾರಿ ಕಛೇರಿಯು ಬೇಹುಗರಿಕೆಯ ಮುಖ್ಯಕೇಂದ್ರವಾಗಿತ್ತು. ಈ ರಾಯಭಾರಿ ಕಛೇರಿಯಿಂದ ಬೆಹುಗರಿಕೆಯೊಂದಿಗೆ ಬೌದ್ಧಿಕ ಸಂಪತ್ತಿನ ಕಳ್ಳತನವನ್ನೂ ಮಾಡಲಾಗುತ್ತಿತ್ತು. ಆದ್ದರಿಂದ ನಾವು ಅದನ್ನು ಮುಚ್ಚುವ ನಿರ್ಧಾರಕ್ಕೆ ಬಂದೆವು, ಎಂದು ಅಮೇರಿಕಾದ ವಿದೇಶಾಂಗ ಸಚಿವ ಮೈಕ್ ಪಾಂಪಿಒ ಮಾಹಿತಿ ನೀಡಿದರು.

ಕೊರೋನಾದ ರೋಗಿ ಪತ್ತೆಯಾಗಿದ್ದರಿಂದ ವಸತಿಗೃಹವನ್ನು ಸೀಲ್ ಮಾಡುವಾಗ ಕೆಲವು ನಾಗರಿಕರು ಒಳಗೆ ಸಿಲುಕಿದ್ದರು !

ಇಲ್ಲಿ ಒಂದು ಕಟ್ಟಡದಲ್ಲಿ ಕೊರೋನಾದ ರೋಗಿ ಪತ್ತೆಯಾಗಿದ್ದರಿಂದ ಮಹಾನಗರಪಾಲಿಕೆಯ ಸಿಬ್ಬಂದಿಗಳು ೨ ವಸತಿಗೃಹಗಳ ಬಾಗಿಲನ್ನು ಸೀಲ್ ಮಾಡಿದರು; ಆದರೆ ಈ ಮನೆಗಳಲ್ಲಿ ೧ ಮಹಿಳೆ, ೨ ಮಕ್ಕಳು ಹಾಗೂ ೧ ಹಿರಿಯ ನಾಗರಿಕರು ಇದ್ದರು. ಈ ಘಟನೆಯಿಂದಾಗಿ ಜನರಲ್ಲಿ ಆಕ್ರೋಶ ವ್ಯಕ್ತವಾದಾಗ ಮಹಾನಗರಪಾಲಿಕೆಯ ಆಯುಕ್ತರು ಸೀಲನ್ನು ತೆಗೆಯುವಂತೆ ಆದೇಶ ನೀಡುತ್ತ ಕ್ಷಮೆ ಯಾಚಿಸಬೇಕಾಯಿತು.

ಹಿಂದೂಗಳ ವಿರೋಧದ ನಂತರ ‘ಪೇಟಾ’ದಿಂದ ಕ್ಷಮಾಯಾಚನೆ

ರಾಖಿಯನ್ನು ಹಸುವಿನ ಚರ್ಮದೊಂದಿಗೆ ಸಂಬಂಧ ಜೋಡಿಸಲು ಪ್ರಯತ್ನಿಸುತ್ತ ‘ಚರ್ಮಮುಕ್ತ ರಕ್ಷಾಬಂಧನವನ್ನು ಆಚರಿಸಿರಿ’ ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದ ‘ಪೇಟಾ’(ಪಿಪಲ್ ಆಫ್ ದ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಆನಿಮಲ್) ಈ ತಥಾಕಥಿತ ಪ್ರಾಣಿಸ್ನೇಹಿ ಸಂಘಟನೆಯು ಹಿಂದೂಗಳ ವಿರೋಧದ ನಂತರ ಈ ಸಂದರ್ಭದಲ್ಲಿನ ಲೇಖನವನ್ನು ತನ್ನ ಜಾಲತಾಣದಿಂದ ತೆಗೆದುಹಾಕಿದೆ.

ಧನಬಾದ (ಝಾರಖಂಡ)ನ ಶಿವಮಂದಿರಕ್ಕೆ ಹೋಗುತ್ತಿದ್ದ ಹಿಂದೂ ಮಹಿಳೆಗೆ ಮತಾಂಧರಿಂದ ಕಿರುಕುಳ ನೀಡಿ ಹಲ್ಲೆ

ಇಲ್ಲಿಯ ಜಿಯಲಗೊರಾ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಶಿವಮಂದಿರಕ್ಕೆ ಹೋಗುತ್ತಿದ್ದ ಹಿಂದೂ ಮಹಿಳೆಗೆ ಕಿರುಕುಳ ನೀಡಲಾಗುತ್ತಿತ್ತು. ಈ ಮಹಿಳೆಯು ಅದಕ್ಕೆ ವಿರೋಧಿಸಿದಾಗ ಆಕೆಯ ಮೇಲೆ ಹಲ್ಲೆಯನ್ನು ಮಾಡಿದರು. ಇದರಲ್ಲಿ ಆಕೆ ಗಾಯಗೊಂಡು ಆಸ್ಪತ್ರೆಗೆ ಸೇರಿಸಲಾಗಿದೆ.

ತ್ರಾವಣಕೋರ ದೇವಸ್ವಮ್ ಮಂಡಳಿಗೆ ಸಂಬಂಧಿಸಿದ ಶಾಲೆಗಳಲ್ಲಿ ಅರಬಿ ಭಾಷೆ ಕಲಿಸಲು ಶಿಕ್ಷಕರ ನೇಮಕ

ತ್ರಾವಣಕೊರ ದೇವಸ್ವಮ್ ಮಂಡಳಿಯ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ ಅರಬಿ ಭಾಷೆ ಕಲಿಸಲು ಮುಸಲ್ಮಾನ ಶಿಕ್ಷಕರ ನೇಮಕ ಮಾಡಲಾಗುತ್ತಿದೆ. ಇಂತಹ ೪ ಶಿಕ್ಷಕರ ಪಟ್ಟಿ ಪ್ರಕಟಿಸಲಾಗಿದೆ. ಇದರಲ್ಲಿ ಶಮಿರಾ, ಬುಶರಾ ಬೇಗಮ್, ಮುಬಾಶ ಹಾಗೂ ಸುಮಯ್ಯಾ ಮಹಮ್ಮದ ಇವರ ಸಮಾವೇಶ ಇದೆ.

ಪೂರ್ವ ಲಡಾಖನಲ್ಲಿ ಭಾರತೀಯ ಸೈನಿಕರ ಸಿದ್ಧತೆಯಿಂದ ವಿರೋಧಕರಿಗೆ ಕಠಿಣ ಸಂದೇಶ ರವಾನೆಯಾಗಿದೆ ! – ರಕ್ಷಣಾಸಚಿವ

ಭಾರತೀಯ ವಾಯುದಳವು ಬಾಲಾಕೋಟದಲ್ಲಿ ಆಧುನಿಕ ಪದ್ದತಿಯಿಂದ ಮಾಡಿದ ದಾಳಿ ಹಾಗೂ ಪೂರ್ಣ ಲಡಾಕನಲ್ಲಿ ತ್ವರಿತವಾಗಿ ಸಾಮಗ್ರಿಗಳನ್ನು ಒಟ್ಟು ಮಾಡಿದ್ದರಿಂದ ವಿರೋಧಕರಿಗೆ ಕಠಿಣ ಸಂದೇಶ ರವಾನೆಯಾಗಿದೆ, ಎಂದು ರಕ್ಷಣಾ ಸಚಿವ ರಾಜನಾಥ ಸಿಂಹ ಇವರು ಚೀನಾದ ಹೆಸರು ಉಚ್ಚರಿಸದೇ ಹೇಳಿದ್ದಾರೆ. ಭಾರತೀಯ ವಾಯುದಳದ ಮುಖ್ಯ ‘ಕಮಾಂಡರ‍್ಸ್’ಗಳಿಗಾಗಿ ಆಯೋಜಿಸಿದ ೩ ದಿನಗಳ ಪರಿಷತ್ತಿನ ಮೊದಲನೇ ದಿನದಲ್ಲಿ ಮಾತನಾಡಿದರು.

ದೇಶದಲ್ಲಿ ತ್ರಿವಳಿ ತಲಾಕ್ ಪ್ರಮಾಣ ಶೇ. ೮೨ ರಷ್ಟು ಇಳಿಕೆ ! – ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಖ್ತಾರ ಅಬ್ಬಾಸ ನಕ್ವಿಯವರಿಂದ ಮಾಹಿತಿ

ದೇಶದಲ್ಲಿ ‘ಮುಸ್ಲಿಮ್ ಮಹಿಳಾ ವಿವಾಹ ಸಂರಕ್ಷಣ ಕಾಯ್ದೆ’ ಅಸ್ತಿತ್ವಕ್ಕೆ ಬಂದಾಗಿನಿಂದ ತ್ರಿವಳಿ ತಲಾಕ ಘಟನೆಗಳಲ್ಲಿ ಶೇ. ೮೨ ರಷ್ಟು ಇಳಿಕೆ ಆಗಿದೆ ಎಂದು ಕೇಂದ್ರದ ಅಲ್ಪಸಂಖ್ಯಾತ ಸಚಿವ ಮುಖ್ತಾರ ಅಬ್ಬಾಸ ನಕ್ವಿಯವರು ಮಾಹಿತಿಯನ್ನು ನೀಡಿದರು. ‘ಇತಿಹಾಸದಲ್ಲಿ ಆಗಸ್ಟ್ ೧ ರಂದು ‘ಮುಸ್ಲಿಮ್ ಮಹಿಳಾ ಅಧಿಕಾರ ದಿನ’ವಾಗಿದೆ’, ಎಂದು ಹೇಳಿದರು.

ಭಗವಾನ ಕಾರ್ತಿಕೇಯನ ಸ್ತುತಿಯನ್ನು ಅವಮಾನಿಸಿದ ಯೂ ಟ್ಯೂಬ್ ವಾಹಿನಿಯ ಮೇಲೆ ಸರಕಾರವು ಕ್ರಮಕೈಗೊಂಡಿದ್ದರಿಂದ ಸರಕಾರವನ್ನು ಶ್ಲಾಘಿಸಿದ ನಟ ರಜನಿಕಾಂತ

ಭಗವಾನ ಕಾರ್ತಿಕೇಯನ ಸ್ತುತಿಯ ಅವಮಾನ ಮಾಡಿದ ಯೂ ಟ್ಯೂಬ್ ವಾಹಿನಿಯ ಮೇಲೆ ಸರಕಾರವು ಕ್ರಮಕೈಗೊಂಡಿದ್ದರಿಂದ ನಟ ರಜನಿಕಾಂತ ಇವರು ಸರಕಾರವನ್ನು ಶ್ಲಾಘಿಸಿದ್ದಾರೆ. ರಜನಿಕಾಂತ ಟ್ವೀಟ್ ಮಾಡುವ ಮೂಲಕ, ‘ಸ್ಕಂದ ಷಷ್ಠೀ ಕವಚಮ್’ಅನ್ನು ಭಗವಾನ ಕಾರ್ತಿಕೇಯನ ಗೌರವಾರ್ಥವಾಗಿ ಹಾಡಲಾಗುತ್ತದೆ.

ರಾಮಮಂದಿರದ ಭೂಮಿ ಪೂಜೆಗೆ ಆರಿಸಿದ ಅಗಸ್ಟ್ ೫ರ ಮುಹೂರ್ತ ಶುಭವಿಲ್ಲ ! – ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ

ರಾಮಮಂದಿರದ ಭೂಮಿ ಪೂಜೆಗೆ ಆರಿಸಿದ ಅಗಸ್ಟ ೫ರ ಮುಹೂರ್ತ ಶುಭವಿಲ್ಲ ಎಂದು ಜ್ಯೋತಿಷ್ಪೀಠಾಧೀಶ್ವರ ಹಾಗೂ ದ್ವಾರಕಾ ಶಾರದಾ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರು ಹೇಳಿದ್ದಾರೆ.