ಭಗವಾನ ಕಾರ್ತಿಕೇಯನ ಸ್ತುತಿಯನ್ನು ಅವಮಾನಿಸಿದ ಯೂ ಟ್ಯೂಬ್ ವಾಹಿನಿಯ ಮೇಲೆ ಸರಕಾರವು ಕ್ರಮಕೈಗೊಂಡಿದ್ದರಿಂದ ಸರಕಾರವನ್ನು ಶ್ಲಾಘಿಸಿದ ನಟ ರಜನಿಕಾಂತ

ನಟ ರಜನಿಕಾಂತ

ಚೆನ್ನೈ (ತಮಿಳುನಾಡು) – ಭಗವಾನ ಕಾರ್ತಿಕೇಯನ ಸ್ತುತಿಯ ಅವಮಾನ ಮಾಡಿದ ಯೂ ಟ್ಯೂಬ್ ವಾಹಿನಿಯ ಮೇಲೆ ಸರಕಾರವು ಕ್ರಮಕೈಗೊಂಡಿದ್ದರಿಂದ ನಟ ರಜನಿಕಾಂತ ಇವರು ಸರಕಾರವನ್ನು ಶ್ಲಾಘಿಸಿದ್ದಾರೆ.

ರಜನಿಕಾಂತ ಟ್ವೀಟ್ ಮಾಡುವ ಮೂಲಕ, ‘ಸ್ಕಂದ ಷಷ್ಠೀ ಕವಚಮ್’ಅನ್ನು ಭಗವಾನ ಕಾರ್ತಿಕೇಯನ ಗೌರವಾರ್ಥವಾಗಿ ಹಾಡಲಾಗುತ್ತದೆ. ಈ ಕವಚದ ಅವಮಾನ ಮಾಡಿ ಕೋಟಿಗಟ್ಟಲೆ ತಮಿಳು ಜನರ ಭಾವನೆಯನ್ನು ನೋಯಿಸಿದ್ದಾರೆ. ಇನ್ನಾದರೂ ಕೋಮುದ್ವೇಷ ಹಾಗೂ ಈಶ್ವರನ ನಿಂದನೆ ನಿಲ್ಲಿಸಬೇಕು’ ಎಂದು ಹೇಳಿದ್ದಾರೆ.