Indian Tradition by German Ambassador : ಭಾರತದಲ್ಲಿರುವ ಜರ್ಮನ ರಾಯಭಾರಿಯು ಹೊಸ ವಾಹನಕ್ಕೆ ‘ನಿಂಬೆ-ಮೆಣಸಿನಕಾಯಿ’ ಕಟ್ಟಿದರು

ಶ್ರೀಫಲವನ್ನು ಒಡೆದು ವಾಹನದ ಉದ್ಘಾಟನೆ

ನವ ದೆಹಲಿ – ಭಾರತದಲ್ಲಿರುವ ಜರ್ಮನಿಯ ರಾಯಭಾರಿ ಫಿಲಿಪ್ ಅಕರ್ಮನ ಅವರು ತಮ್ಮ ಕಚೇರಿಗಾಗಿ ಹೊಸ ಎಲೆಕ್ಟ್ರಿಕ್ ಬಿ.ಎಂ ಡಬ್ಲ್ಯೂ ವಾಹನವನ್ನು ಖರೀದಿಸಿದ್ದಾರೆ. ಅಕರಮನ ಅವರು ಈ ಹೊಸ ಬಿ.ಎಂ.ಡಬ್ಲ್ಯೂ. ವಾಹನಕ್ಕೆ ದೃಷ್ಟಿ ತಗುಲಬಾರದೆಂದು ವಾಹನದ ಕನ್ನಡಿಗೆ `ಲಿಂಬೆಹಣ್ಣು-ಮೆಣಸಿನ ಕಾಯಿ’ ಕಟ್ಟಿದರು. ಹಾಗೆಯೇ ವಾಹನದ ಎದುರು ಶ್ರೀಫಲವನ್ನು ಒಡೆದರು. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಫಿಲಿಪ್ ಅಕರಮನ ಈ ಸಂದರ್ಭದಲ್ಲಿ ಮಾತನಾಡಿ, ಜರ್ಮನಿ ಮತ್ತು ಭಾರತವು ಪರಸ್ಪರ ಪಾಲುದಾರಿಕೆಗೆ ವಚನಬದ್ಧವಾಗಿದೆ. ಚಳಿಗಾಲದಲ್ಲಿ ಪರಿಸರ ಮಾಲಿನ್ಯ ಅತ್ಯಧಿಕವಾಗುತ್ತದೆ. ಆದ್ದರಿಂದ ಪರಿಸರ ಮಾಲಿನ್ಯ ತಗ್ಗಿಸಲು ಕೈಜೋಡಿಸಬೇಕು ಎಂದು ನನಗೆ ಅನಿಸಿತು. ನನಗೆ ಎಲೆಕ್ಟ್ರಿಕ್ ವಾಹನ ಖರೀದಿಸುವುದಿತ್ತು. ಈ ವಿಷಯದಲ್ಲಿ ನಾನು ನನ್ನ ಪ್ರಧಾನ ಕಚೇರಿಯೊಂದಿಗೆ ಮಾತನಾಡಿದ್ದೆನು. ಕೆಲವೇ ದಿನಗಳಲ್ಲಿ ನನ್ನ ಕೋರಿಕೆಯನ್ನು ಸ್ವೀಕರಿಸಿದರು. ಇದು ಎಲೆಕ್ಟ್ರಿಕ್ ವಾಹನವಾಗಿದ್ದು, ಇದು ಕಡಿಮೆ ಮಾಲಿನ್ಯವನ್ನು ಮಾಡುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ವಿದೇಶೀಯರಿಗೆ ಅರ್ಥವಾಗಿರುವುದು ಭಾರತದಲ್ಲಿರುವ ಕಪಟಿ ಪ್ರಗತಿ(ಅಧೋ)ಪರರಿಗೆ ತಿಳಿಯುವುದಿಲ್ಲ, ಎನ್ನುವುದನ್ನು ಗಮನಿಸಬೇಕು !