ದೇಶದಲ್ಲಿ ತ್ರಿವಳಿ ತಲಾಕ್ ಪ್ರಮಾಣ ಶೇ. ೮೨ ರಷ್ಟು ಇಳಿಕೆ ! – ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಖ್ತಾರ ಅಬ್ಬಾಸ ನಕ್ವಿಯವರಿಂದ ಮಾಹಿತಿ

ನವ ದೆಹಲಿ – ದೇಶದಲ್ಲಿ ‘ಮುಸ್ಲಿಮ್ ಮಹಿಳಾ ವಿವಾಹ ಸಂರಕ್ಷಣ ಕಾಯ್ದೆ’ ಅಸ್ತಿತ್ವಕ್ಕೆ ಬಂದಾಗಿನಿಂದ ತ್ರಿವಳಿ ತಲಾಕ ಘಟನೆಗಳಲ್ಲಿ ಶೇ. ೮೨ ರಷ್ಟು ಇಳಿಕೆ ಆಗಿದೆ ಎಂದು ಕೇಂದ್ರದ ಅಲ್ಪಸಂಖ್ಯಾತ ಸಚಿವ ಮುಖ್ತಾರ ಅಬ್ಬಾಸ ನಕ್ವಿಯವರು ಮಾಹಿತಿಯನ್ನು ನೀಡಿದರು. ‘ಇತಿಹಾಸದಲ್ಲಿ ಆಗಸ್ಟ್ ೧ ರಂದು ‘ಮುಸ್ಲಿಮ್ ಮಹಿಳಾ ಅಧಿಕಾರ ದಿನ’ವಾಗಿದೆ’, ಎಂದು ಹೇಳಿದರು.

ಜುಲೈ ೨೦೧೯ ರಲ್ಲಿ ಸಂಸತ್ತಿನ ಎರಡೂ ಸಭಾಗೃಹಗಳಲ್ಲಿ ‘ಮುಸ್ಲಿಮ್ ಮಹಿಳಾ ಅಧಿಕಾರ ಸಂರಕ್ಷಣ ವಿಧೇಯಕ’ ಮಂಡಿಸಲಾಗಿತ್ತು. ಅದಕ್ಕೆ ರಾಷ್ಟ್ರಪತಿ ರಾಮನಾಥ ಕೊವಿಂದ ಇವರು ೧ ಆಗಸ್ಟ್ ೨೦೧೯ ರಂದು ಒಪ್ಪಿಗೆ ನೀಡಿದ್ದರು. ತದನಂತರ ಈ ಕಾನೂನು ಅಸ್ತಿತ್ವಕ್ಕೆ ಬಂದಿತು. ಈ ಕಾಯ್ದೆಗೆ ೧ ಆಗಸ್ಟ್ ೨೦೨೦ ರಂದು ೧ ವರ್ಷ ಪೂರ್ಣವಾಗಲಿದೆ. ಈ ಹಿನ್ನೆಲೆಯಲ್ಲಿ ನಕ್ವಿಯವರು ‘ಪತ್ರಿಕಾ ಮಾಹಿತಿ ಬ್ಯೂರೋ’ಯ (‘ಪಿಐಬಿ’ಯ) ಜಾಲತಾಣಕ್ಕಾಗಿ ನೀಡಿದ ಲೇಖನದಲ್ಲಿ ಈ ಮೇಲಿನ ಮಾಹಿತಿಯನ್ನು ನೀಡಿದ್ದಾರೆ.

ನಕ್ವಿಯವರು ಈ ಲೇಖನದಲ್ಲಿ,

೧. ೧ ಆಗಸ್ಟ್ ೨೦೧೯ ಇದು ಸಂಸತ್ತಿನ ಐತಿಹಾಸಿಕ ದಿನವಾಗಿದೆ. ಈ ದಿನ ತಮ್ಮನ್ನು ಜಾತ್ಯತೀತವವೆಂದು ಹೇಳಿಕೊಳ್ಳುವ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷ, ಸಮಾಜವಾದಿ ಪಕ್ಷ, ಬಸಪ ಹಾಗೂ ತೃಣಮೂಲಕ ಕಾಂಗ್ರೆಸ್ ಇವರೆಲ್ಲರ ವಿರೋಧದ ನಡುವೆಯೂ ಈ ಕಾನೂನು ಅಸ್ತಿತ್ವಕ್ಕೆ ಬಂದಿತು.

೨. ಶಹಾಬಾನೊ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದ ನಂತರ ಈ ಕಾಯ್ದೆ ೧೯೮೬ ರಲ್ಲೇ ಅಸ್ತಿತ್ವಕ್ಕೆ ಬರಬಹುದಿತ್ತು. ಆ ಸಮಯದಲ್ಲಿ ೫೪೫ ಸದಸ್ಯರ ಪೈಕಿ ಕಾಂಗ್ರೆಸ್ ಬಳಿ ೪೦೦ ಸದಸ್ಯರ ಸಂಖ್ಯಾಬಲವಿತ್ತು. ರಾಜ್ಯಸಭೆಯಲ್ಲಿಯೂ ಸದಸ್ಯರ ಸಂಖ್ಯೆ ೨೪೫ ರ ಪೈಕಿ ೧೫೯ ಸದಸ್ಯರು ಕಾಂಗ್ರೆಸ್‌ನವರಿದ್ದರು. ಆದರೂ ರಾಜೀವ ಗಾಂಧಿ ಸರಕಾರವು ಈ ಸಂಖ್ಯಾಬಲವನ್ನು ಸರ್ವೋಚ್ಚ ನ್ಯಾಯಾಲಯದ ತೀರ್ಪು ಪ್ರಭಾವಹೀನಗೊಳಿಸಲು ಮತ್ತು ಮುಸಲ್ಮಾನ ಮಹಿಳೆಯರ ಸಂವಿಧನಾತ್ಮಕ ಹಾಗೂ ಮೂಲಭೂತ ಅಧಿಕಾರಗಳಿಂದ ವಂಚಿತಗೊಳಿಸಲು ಉಪಯೋಗಿಸಿತು.