ವಾರಣಾಸಿ – ರಾಮಮಂದಿರದ ಭೂಮಿ ಪೂಜೆಗೆ ಆರಿಸಿದ ಅಗಸ್ಟ್ ೫ರ ಮುಹೂರ್ತ ಶುಭವಿಲ್ಲ ಎಂದು ಜ್ಯೋತಿಷ ಪೀಠಾಧೀಶ್ವರ ಹಾಗೂ ದ್ವಾರಕಾ ಶಾರದಾ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರು ಹೇಳಿದ್ದಾರೆ.
ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ,
೧. ಯಾವುದೇ ಶುಭಕಾರ್ಯವನ್ನು ಉತ್ತಮ ಮುಹೂರ್ತದಲ್ಲಿ ಮಾಡಲಾಗುತ್ತದೆ. ಅಗಸ್ಟ್ ೫ ರಂದು ದಕ್ಷಿಣಾಯನ ಭಾದ್ರಪದ ಮಾಸ ಕೃಷ್ಣ ಪಕ್ಷ ದ್ವಿತೀಯಾ ತಿಥಿಯಾಗಿದೆ.
೨. ಶಾಸ್ತ್ರಾನುಸಾರ ಭಾದ್ರಪದ ಮಾಸವು ಗೃಹ-ದೇವಸ್ಥಾನ ನಿರ್ಮಾಣಕ್ಕಾಗಿ ನಿಷಿದ್ಧವಾಗಿದೆ.
೩. ವಿಷ್ಣು ಧರ್ಮಶಾಸ್ತ್ರಾನುಸಾರ, ‘ಭಾದ್ರಪದ ಮಾಸದಲ್ಲಿ ಮಾಡಿದ ಶುಭಾರಂಭ ವಿನಾಶಕ್ಕೆ ಕಾರಣವಾಗುತ್ತದೆ.’
೪. ದೈವಜ್ಞ ವಲ್ಲಭ ಗ್ರಂಥದಲ್ಲಿ ಹೇಳಿದಂತೆ, ‘ಭಾದ್ರಪದದಲ್ಲಿ ಮಾಡಿದ ಗೃಹಾರಂಭ ದಾರಿದ್ರ್ಯ ತರುತ್ತದೆ.’
೫. ವಾಸ್ತು ಪ್ರದೀಪದಲ್ಲಿಯೂ ಇದೇ ಹೇಳಲಾಗಿದೆ.
೬. ವಾಸ್ತು ರಾಜವಲ್ಲಭಾನುಸಾರ, ‘ಭಾದ್ರಪದದ ಆರಂಭ ಶೂನ್ಯ ಫಲ ನೀಡುತ್ತದೆ.’
೭. ಅಭಿಜಿತ ಮುಹೂರ್ತ ಇರುವುದರಿಂದ ಈ ದಿನವನ್ನು ಶುಭ ಎಂದು ಪರಿಗಣಿಸುವುದು ಯೋಗ್ಯವಲ್ಲ. ಮುಹೂರ್ತ ಚಿಂತಾಮಣಿಯ ವಿವಾಹ ಪ್ರಕರಣದಲ್ಲಿ ಬುಧವಾರದಂದು ಅಭಿಜಿತ ನಿಷಿದ್ಧ ಇದೆ.
೮. ಸೂರ್ಯ ಕರ್ಕದಲ್ಲಿರುವ ತನಕ ಕೇವಲ ಶ್ರಾವಣ ಮಾಸದಲ್ಲಿ ಭೂಮಿ ಪೂಜೆ ಮಾಡಬಹುದು, ಭಾದ್ರಪದದಲ್ಲಿ ಅಲ್ಲ.
ವಿವಾಹ ಇತ್ಯಾದಿ ಮಂಗಲ ಕಾರ್ಯಗಳು ನಿಷಿದ್ಧ; ಆದರೆ ಪೂಜೆಯಂತಹ ಧಾರ್ಮಿಕ ಕಾರ್ಯ ಮಾಡುವುದರ ಮೇಲೆ ಯಾವುದೇ ರೀತಿಯ ಬಂಧನವಿಲ್ಲ ! – ಕಾಶಿ ವಿದ್ವತ ಪರಿಷತ್ತು
‘ಕಾಶಿ ವಿದ್ವತ’ ಪರಿಷತ್ತಿನಲ್ಲಿ’ನ ಸಚಿವ ಪ್ರಾ. ರಾಮನಾರಾಯಣ ದ್ವಿವೇದಿಯವರು, “ಹರಿಶಯನಿ ಎಕಾದಶಿಯಿಂದ ದೇವೋತ್ಥಾನ ಎಕಾದಶಿ ಈ ಕಾಲಾವಧಿಯಲ್ಲಿ ವಿವಾಹ ಇತ್ಯಾದಿ ಮಂಗಲಕಾರ್ಯ ಮಾಡುವುದು ನಿಷಿದ್ಧ; ಆದರೆ ಈ ಕಾಲಾವಧಿಯಲ್ಲಿ ಪೂಜೆಯಂತಹ ಧಾರ್ಮಿಕ ಕಾರ್ಯ ಮಾಡುವುದಕ್ಕೆ ಯಾವುದೇ ಬಂಧನವಿಲ್ಲ” ಎಂದು ಹೇಳಿದರು. ಜೊತೆಗೆ ಅವರು ಶ್ರೀರಾಮಚರಿತಮಾನಸದಲ್ಲಿ ಒಂದು ಪ್ರಸಂಗದ ಉದಾಹರಣೆಯನ್ನು ನೀಡಿದರು. ಅವರು, ‘ಯಾವಾಗ ದಶರಥ ರಾಜನು ಇವರು ಭಗವಾನ ಶ್ರೀರಾಮನ ರಾಜ್ಯಾಭಿಷೇಕಕ್ಕಾಗಿ ಮಹರ್ಷಿ ವಶಿಷ್ಠರಲ್ಲಿ ಮುಹೂರ್ತ ತೆಗೆಯಲು ಹೇಳಿದಾಗ, ಜ್ಯೋತಿಷಶಾಸ್ತ್ರದ ಅಷ್ಟಾದಶ ಪ್ರವರ್ತಕರಲ್ಲಿ ಪ್ರಮುಖರಾದ ಮಹರ್ಷಿ ವಶಿಷ್ಠರು ಒಂದು ಶ್ಲೋಕದ ಮೂಲಕ ಹೇಳುತ್ತಾರೆ, ‘ಯಾವಾಗ ಭಗವಾನ ಶ್ರೀರಾಮ ರಾಜ್ಯಾಭಿಷೇಕ ಮಾಡಲಿಚ್ಛಿಸುವರೋ, ಆ ದಿನಾಂಕ ಆ ಸಮಯ ಶುಭ ಹಾಗೂ ಮಂಗಲಮಯವೇ ಆಗಿರುತ್ತದೆ’ ಎಂದು ಹೇಳಿದರು. ಈ ದೃಷ್ಟಿಕೋನದಿಂದ ಯಾವ ದಿನ ರಾಮಮಂದಿರದ ಭೂಮಿಪೂಜೆ ಆಗುವುದೋ, ಅದೇ ದಿನ ಶುಭ ಹಾಗೂ ಮಂಗಲಕರವೇ ಆಗಿರುವುದು” ಎಂದು ಹೇಳಿದ್ದಾರೆ.