Temple Idol Vandalised : ಭಾಗ್ಯನಗರ (ತೆಲಂಗಾಣ)ದಲ್ಲಿ ದೇವಸ್ಥಾನಕ್ಕೆ ನುಗ್ಗಿ ದೇವಿಯ ಮೂರ್ತಿ ಧ್ವಂಸಗೊಳಿಸಿದ ಸಲೀಂನ ಬಂಧನ !

ಭಾಗ್ಯನಗರ (ತೆಲಂಗಾಣ) – ಇಲ್ಲಿಯ ಮುತ್ಯಾಲಮ್ಮಾ ದೇವಸ್ಥಾನಕ್ಕೆ ನುಗ್ಗಿ ದೇವಿಯ ಮೂರ್ತಿಯನ್ನು ಧ್ವಂಸಗೊಳಿಸಿದ ಪ್ರಕರಣದಲ್ಲಿ ಭಾಗ್ಯನಗರ ಪೊಲೀಸರು ಸಲೀಂ ಸಲ್ಮಾನ್ ಠಾಕೂರ್ ಎಂಬ ಮುಸಲ್ಮಾನ ಯುವಕನನ್ನು ಬಂಧಿಸಿದ್ದಾರೆ. ಸಿಕಂದರಾಬಾದ್ ನ ಹೋಟೆಲನಿಂದ ದೇವಸ್ಥಾನದ ಕಡೆಗೆ ಹೋಗುತ್ತಿರುವಾಗ ದೇವಸ್ಥಾನದ ಮೇಲೆ ದಾಳಿ ಮಾಡಿರುವುದಾಗಿ ಸಲೀಂ ಒಪ್ಪಿಕೊಂಡಿದ್ದಾನೆ.

೧. ಪೊಲೀಸರು, ಸಲೀಂನ ಜೊತೆಗೆ ಇತರ ಕೆಲವು ಮತಾಂಧರು ಭಾಗ್ಯನಗರದಲ್ಲಿನ ಕುರಮಾಗುಡ ಪ್ರದೇಶದಲ್ಲಿನ ಮುತ್ಯಾಲಮ್ಮ ದೇವಸ್ಥಾನದಲ್ಲಿನ ದೇವಿಯ ಮೂರ್ತಿಯನ್ನು ಧ್ವಂಸಗೊಳಿಸಿದ ನಂತರ ಸಿಕಂದರಾಬಾದಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

೨. ಸ್ಥಳೀಯ ಹಿಂದೂಗಳು ಈ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಪ್ರಸಾರವಾಗಿದೆ. ಈ ಘಟನೆಯ ನಂತರ ಪೊಲೀಸ ಅಧಿಕಾರಿಗಳು ಸುರಕ್ಷಾ ವ್ಯವಸ್ಥೆಯನ್ನು ಬಿಗಿಗೊಳಿಸಿದ್ದು ಶಾಂತಿ ಸ್ಥಾಪನೆಗಾಗಿ ಪ್ರಯತ್ನ ನಡೆಸುತ್ತಿದ್ದಾರೆ.

೩. ಸ್ಥಳೀಯರು ದೇವಸ್ಥಾನದ ಹತ್ತಿರ ಪ್ರತಿಭಟನೆಗಳ ನಡೆಸುತ್ತಾ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಭಾಜಪದ ನಾಯಕರು ಕೂಡ ಸಹಕಾಗಿ ಆಗಿದ್ದರು. ಈ ಸಮಯದಲ್ಲಿ ಭಾಗ್ಯನಗರ ಲೋಕಸಭಾ ಮತದಾರ ಕ್ಷೇತ್ರದಲ್ಲಿನ ಭಾಜಪದ ಅಭ್ಯರ್ಥಿ ಮಾಧವಿ ಲತಾ ಸಹಿತ ಭಾಜಪದ ಅನೇಕ ಕಾರ್ಯಕರ್ತರನ್ನು ಬಂಧಿಸಲಾಗಿದೆ.

೪. ಈ ಸಮಯದಲ್ಲಿ ಕೇಂದ್ರ ಸಚಿವ ಜಿ. ಕಿಶನ ರೆಡ್ಡಿ ಇವರು ದೇವಸ್ಥಾನಕ್ಕೆ ಹೋಗಿ ಬಳಿಕ ಪ್ರತಿಭಟನಾಕಾರರನ್ನು ಭೇಟಿ ಮಾಡಿದರು. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಮಹಮ್ಮದ್ ಗಝನಿಯ ವಂಶಜರು ಇಂದಿಗೂ ಭಾರತದಲ್ಲಿ ಇರುವುದರಿಂದ ಅವರಿಗೆ ಎಲ್ಲಿಯವರೆಗೆ ಕಡಿವಾಣ ಹಾಕುವುದಿಲ್ಲ ಅಲ್ಲಿಯವರೆಗೆ ಈ ರೀತಿಯ ಘಟನೆಗಳು ನಿಲ್ಲುವುದಿಲ್ಲ !