ಪೂರ್ವ ಲಡಾಖನಲ್ಲಿ ಭಾರತೀಯ ಸೈನಿಕರ ಸಿದ್ಧತೆಯಿಂದ ವಿರೋಧಕರಿಗೆ ಕಠಿಣ ಸಂದೇಶ ರವಾನೆಯಾಗಿದೆ ! – ರಕ್ಷಣಾಸಚಿವ

ಇನ್ನು ಪಾಕಿಸ್ತಾನದಂತಹ ಕಪಟಿ ರಾಷ್ಟ್ರವನ್ನು ಜಗತ್ತಿನ ನಕಾಶೆಯಿಂದ ನಾಶ ಮಾಡಿ ಭಯೋತ್ಪಾದನೆಯನ್ನು ಸಂಪೂರ್ಣ ನಿರ್ನಾಮ ಮಾಡಬೇಕು, ಎಂದು ಜನರ ಅಪೇಕ್ಷೆಯಾಗಿದೆ !

ನವ ದೆಹಲಿ – ಭಾರತೀಯ ವಾಯುದಳವು ಬಾಲಾಕೋಟದಲ್ಲಿ ಆಧುನಿಕ ಪದ್ದತಿಯಿಂದ ಮಾಡಿದ ದಾಳಿ ಹಾಗೂ ಪೂರ್ಣ ಲಡಾಕನಲ್ಲಿ ತ್ವರಿತವಾಗಿ ಸಾಮಗ್ರಿಗಳನ್ನು ಒಟ್ಟು ಮಾಡಿದ್ದರಿಂದ ವಿರೋಧಕರಿಗೆ ಕಠಿಣ ಸಂದೇಶ ರವಾನೆಯಾಗಿದೆ, ಎಂದು ರಕ್ಷಣಾ ಸಚಿವ ರಾಜನಾಥ ಸಿಂಹ ಇವರು ಚೀನಾದ ಹೆಸರು ಉಚ್ಚರಿಸದೇ ಹೇಳಿದ್ದಾರೆ. ಭಾರತೀಯ ವಾಯುದಳದ ಮುಖ್ಯ ‘ಕಮಾಂಡರ‍್ಸ್’ಗಳಿಗಾಗಿ ಆಯೋಜಿಸಿದ ೩ ದಿನಗಳ ಪರಿಷತ್ತಿನ ಮೊದಲನೇ ದಿನದಲ್ಲಿ ಮಾತನಾಡಿದರು.

ಅವರು ತಮ್ಮ ಮಾತನ್ನು ಮುಂದುವರಿಸುತ್ತ, ‘ದೇಶದ ಸಾರ್ವಭೌಮತ್ವವನ್ನು ಕಾಪಾಡಲು ನಾವು ಕಟಿಬದ್ಧರಾಗಿದ್ದೇವೆ. ದೇಶದ ಜನರಿಗೆ ನಮ್ಮ ಸಶಸ್ತ್ರ ಸೈನಿಕರ ಮೇಲೆ ಸಂಪೂರ್ಣ ವಿಶ್ವಾಸ ಇದೆ. ಕಳೆದ ಕೆಲವು ತಿಂಗಳಿನಲ್ಲಿ ವಾಯುದಳವು ತನ್ನ ಕ್ಷಮತೆಯನ್ನು ಹೆಚ್ಚಿಸಿದೆ” ಎಂದು ಹೇಳಿದರು. ವಾಯುದಳದ ಮುಖ್ಯಸ್ಥ ಏರ್ ಚೀಫ್ ಮಾರ್ಶಲ್ ಆರ್.ಕೆ.ಎಸ್. ಭದೋರಿಯಾರವರು, ‘ವಾಯುದಳವು ಆಪತ್ಕಾಲದಲ್ಲಿ ಹೋರಾಡಲು ಸಿದ್ಧವಾಗಿದೆ. ವಾಯುದಳದ ಎಲ್ಲ ವಿಭಾಗವು ವಿರೋಧಕರ ಯಾವುದೇ ಆಕ್ರಮಣಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧವಾಗಿದೆ’ ಎಂದು ಹೇಳಿದರು.