ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಶಿಫಾರಸ್ಸು
ರೋಗಕ್ಕಿಂತ ಮದ್ದು ಭಯಂಕರ ! ಇದರಿಂದ ಜಾತಿಮತ ದೂರವಾಗುವ ಬದಲು ಹೆಚ್ಚಾಗುತ್ತದೆ ! ಸ್ವಾತಂತ್ರ್ಯದ ೭೨ ವರ್ಷಗಳಲ್ಲಿ ದೇಶದಲ್ಲಿ ಜಾತಿ ಮತ ನಿರ್ಮೂಲನೆ ಮಾಡದಿರಲು ಇಲ್ಲಿಯವರೆಗಿನ ಆಡಳಿತಗಾರರು ಕಾರಣಕರ್ತರು ! ಸರಕಾರಿ ಕ್ಷೌರದಂಗಡಿಯನ್ನು ತೆರೆಯುವ ಬದಲು, ಸಮಾಜದಲ್ಲಿ ಜಾತಿ ಭೇದ ನಿರ್ಮೂಲನೆ ಮಾಡಲು ಸರಕಾರ ಪ್ರಯತ್ನ ಮಾಡಬೇಕು; ಆದರೆ ಮತಕ್ಕಾಗಿ ಜಾತಿಭೇದವನ್ನು ಉದ್ದೇಶಪೂರ್ವಕವಾಗಿ ಕಾಪಾಡಿಕೊಳ್ಳುವ ರಾಜಕಾರಣಿಗಳು ಇದನ್ನು ಎಂದಿಗೂ ಮಾಡುವುದಿಲ್ಲ, ಅದು ಅಷ್ಟೇ ನಿಜವಾಗಿದೆ ! |
ಬೆಂಗಳೂರು – ರಾಜ್ಯದ ವಿವಿಧ ಹಳ್ಳಿಗಳಲ್ಲಿ ಕ್ಷೌರದಂಗಡಿ ಇಂದ ಜಾತಿಭೇದ ಘಟನೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅನೇಕರು ದಲಿತರ ಕೂದಲನ್ನು ಕತ್ತರಿಸಲು ಹಾಗೂ ಗಡ್ಡ ತೆಗೆಯುವುದಕ್ಕೆ ನಿರಾಕರಿಸುತ್ತಿದ್ದಾರೆ. (ಸರಕಾರ ಅಂತಹವರಿಗೆ ಶಿಕ್ಷೆ ವಿಧಿಸಬೇಕು ! – ಸಂಪಾದಕ) ಆದ್ದರಿಂದ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯು ಸರಕಾರಿ ಕ್ಷೌರದಂಗಡಿಯನ್ನು ನಡೆಸಬೇಕೆಂದು ಶಿಫಾರಸು ಮಾಡಿದೆ.
This move comes after the Kerala government started the government-run barber shops in villages, where #dalits were shunned from using a common salon@BSYBJPhttps://t.co/GBiTuMnrEf
— The Logical Indian (@LogicalIndians) November 16, 2020
ಈ ರೀತಿ ಕೇರಳದಲ್ಲಿ ಮಾಡಲಾಗಿದೆ. ಅಲ್ಲಿಯ ಸರಕಾರದಿಂದ ಕ್ಷೌರದಂಗಡಿಗಳನ್ನು ನಡೆಸಲಾಗುತ್ತಿದೆ.