ಮಥುರಾ (ಉತ್ತರ ಪ್ರದೇಶ)ದ ಆಶ್ರಮದಲ್ಲಿ ೨ ಸಾಧುಗಳ ಅನುಮಾನಾಸ್ಪದ ಸಾವು, ಮೂರನೆಯವರ ಸ್ಥಿತಿ ಗಂಭೀರ

ವಿಷದ ಪ್ರಯೋಗ ಮಾಡಲಾಗಿದೆ ಎಂದು ಓರ್ವ ಸಾಧುವಿನ ಸಹೋದರನ ಆರೋಪ

ಬಿಜೆಪಿಯ ರಾಜ್ಯವಾಗಿರುವ ಉತ್ತರಪ್ರದೇಶದಲ್ಲಿ ಸಾಧುಗಳು, ಸಂತರು ಮತ್ತು ಹಿಂದುತ್ವನಿಷ್ಠರ ನಿರಂತರ ಹತ್ಯೆಯಾಗುವುದು, ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಮಥುರಾ (ಉತ್ತರ ಪ್ರದೇಶ) – ಗೋವರ್ಧನದ ಕಾಡಿನಲ್ಲಿರುವ ಗಿರಿರಾಜ ಉದ್ಯಾನವನದ ಹಿಂದುಗಡೆ ೩ ಸನ್ಯಾಸಿಗಳು ಒಂದು ವರ್ಷದಿಂದ ಆಶ್ರಮ ಕಟ್ಟಿ ಅಲ್ಲಿ ವಾಸಿಸುತ್ತಿದ್ದರು. ಇವರಲ್ಲಿ ೨ ಸಾಧುಗಳ ಶವಗಳು ಆಶ್ರಮದಲ್ಲಿ ಪತ್ತೆಯಾಗಿವೆ, ಮತ್ತು ಮೂರನೆಯವರ ಆರೋಗ್ಯದ ಸ್ಥಿತಿ ಚಿಂತಾಜನಕವಾಗಿದೆ. ಸಾಧುಗಳ ಸಾವಿನ ಬಗ್ಗೆ ತಿಳಿಯುತ್ತಿದ್ದಂತೆ ಇಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ತಲುಪಿದ್ದಾರೆ. ಪೊಲೀಸರು ಶವಗಳನ್ನು ಶವಪರೀಕ್ಷೆಗಾಗಿ ಕಳುಹಿಸಿದ್ದಾರೆ. ಆಶ್ರಮದಲ್ಲಿರುವ ಹಸುವಿನ ಹಾಲಿನಿಂದ ಚಹಾ ಕುಡಿದ ನಂತರ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಮೃತಪಟ್ಟವರು ಗೋಪಾಲ ದಾಸ ಮತ್ತು ಶ್ಯಾಮ ಸುಂದರ ದಾಸ ಎಂದು ಗುರುತಿಸಲಾಗಿದ್ದು, ರಾಮಬಾಬು ದಾಸ ಅವರ ಸ್ಥಿತಿ ಗಂಭೀರವಾಗಿದೆ. ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷವನ್ನು ನೀಡಿ ಸಾಧುಗಳನ್ನು ಕೊಲ್ಲಲಾಯಿತು ಎಂದು ಗೋಪಾಲ ದಾಸರ ಸಹೋದರ ಟಿಕಮ್ ಇವರು ಆರೋಪಿಸಿದ್ದಾರೆ. ಆಶ್ರಮದಿಂದ ವಿಷಕಾರಿ ಔಷಧಿಗಳ ವಾಸನೆ ಬರುತ್ತಿದೆ ಎಂದು ಅವರು ಹೇಳಿದ್ದಾರೆ.