- ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇರುವಾಗ ಇಂತಹ ಘಟನೆಗಳು ಘಟಿಸುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !
ಹಾಸನ(ಕರ್ನಾಟಕ) – ಇಲ್ಲಿನ ದೊಡ್ಡಗಡಾವಳ್ಳಿ ಚತುಶಕುತಾ ದೇವಸ್ಥಾನದಲ್ಲಿ ಶ್ರೀ ಮಹಾಕಾಳಿದೇವಿಯ ವಿಗ್ರಹವನ್ನು ಅಜ್ಞಾತ ವ್ಯಕ್ತಿಗಳು ಒಡೆದಿರುವುದು ಬೆಳಕಿಗೆ ಬಂದಿದೆ. ಈ ದೇವಸ್ಥಾನವನ್ನು ೧೧೧೩ ರಲ್ಲಿ ಹೊಯ್ಸಳ ರಾಜವಂಶದ ರಾಜ ವಿಷ್ಣುವರ್ಧನ ಇವರ ಆಡಳಿತಾವಧಿಯಲ್ಲಿ ನಿರ್ಮಿಸಲಾಗಿತ್ತು. ಇಲ್ಲಿ ಶ್ರೀ ಮಹಾಲಕ್ಷ್ಮೀಯ ವಿಶೇಷ ದೇವಸ್ಥಾನವೂ ಇದೆ ಮತ್ತು ದಕ್ಷಿಣ ಗರ್ಭಗುಡಿಯಲ್ಲಿ ಶ್ರೀ ಮಹಾಕಾಳಿದೇವಿಯ ವಿಗ್ರಹವನ್ನು ಸ್ಥಾಪಿಸಲಾಗಿತ್ತು. ಈ ದೇವಸ್ಥಾನದ ನಿರ್ವಹಣೆಯ ಜವಾಬ್ದಾರಿಯು ಪುರಾತತ್ವ ಇಲಾಖೆಯ ಬಳಿಯಿದೆ. ನವೆಂಬರ್ ೨೦ ರಂದು ಭಕ್ತರು ದರ್ಶನಕ್ಕಾಗಿ ದೇವಸ್ಥಾನಕ್ಕೆ ಹೋಗಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ.
Deeply disturbed and distraught to watch this desecration in Mahalakshmi Temple at Doddagaddavalli. I clearly remember my visit here.
Request Home Minister Sri @BSBommai to constitute a special Team to uncover the truth behind this act.
Anyone found guilty must be punished. pic.twitter.com/scFeqvsS5x
— C T Ravi 🇮🇳 ಸಿ ಟಿ ರವಿ (@CTRavi_BJP) November 20, 2020
(ಈ ಮೇಲಿನ ಚಿತ್ರ ಹಾಗು ವಿಡಿಯೋ ಯಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಲು ಆಗಿರದೇ, ನಿಜಸ್ಥಿತಿಯನ್ನು ತಿಳಿಸಬೇಕು ಈ ಉದ್ದೇಶಕ್ಕಾಗಿ ಪ್ರಕಟಿಸಲಾಗಿದೆ – ಸಂಪಾದಕ)
೧. ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರದ ತಜ್ಞ ಡಾ. ಶಾಲವಪಿಲ ಅಯ್ಯಂಗಾರ ಇವರು ಈ ಘಟನೆಗೆ ಪುರಾತತ್ವ ಇಲಾಖೆಯನ್ನು ದೂಷಿಸಿದ್ದಾರೆ. ಪ್ರಾಚೀನ ವಿಗ್ರಹದ ನಾಶವು ದೊಡ್ಡ ನಷ್ಟವಾಗಿದೆ ಎಂದು ಹೇಳಿದರು. ಸರಕಾರವು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಈ ಬಗ್ಗೆ ಪುರಾತತ್ವ ಇಲಾಖೆಯು ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ
೨. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಇವರೂ ಕೂಡ ಈ ಘಟನೆಯ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ತನಿಖೆ ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ವಿಶೇಷ ತಂಡವನ್ನು ರಚಿಸಬೇಕು ಎಂದು ಕರ್ನಾಟಕ ಗೃಹ ಸಚಿವರಿಗೆ ಒತ್ತಾಯಿಸಿದ್ದಾರೆ.