ಕೇಂದ್ರ ಸರಕಾರದಿಂದ ‘ಸುದರ್ಶನ್ ಟಿವಿ’ಯ ‘ಯು.ಪಿ.ಎಸ್.ಸಿ. ಜಿಹಾದ್’ ಕಾರ್ಯಕ್ರಮಕ್ಕೆ ಅನುಮತಿ

ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ತನ್ನ ನಿಲುವನ್ನು ಮಂಡಿಸುತ್ತ ಕಾರ್ಯಕ್ರಮದಲ್ಲಿ ಬದಲಾವಣೆಗಳನ್ನು ಸೂಚಿಸಿದೆ

ಸರ್ವೋಚ್ಚ ನ್ಯಾಯಾಲಯದಿಂದ ಪ್ರಸಾರದ ಬಗ್ಗೆ ಅಂತಿಮ ತೀರ್ಪು ಬರಲಿದೆ

ನವ ದೆಹಲಿ – ಕೇಂದ್ರದ ಬಿಜೆಪಿ ಸರಕಾರವು ‘ಸುದರ್ಶನ್ ಟಿವಿ’ ಈ ಖಾಸಗಿ ಸುದ್ದಿ ವಾಹಿನಿಯಲ್ಲಿ ವಾರಕ್ಕೊಮ್ಮೆ ಪ್ರಸಾರವಾಗುವ ‘ಬಿಂದಾಸ್ ಬೋಲ್ ’ಕಾರ್ಯಕ್ರಮದಲ್ಲಿ ‘ಯು.ಪಿಎಸ್.ಸಿ. ಜಿಹಾದ್’ ವಿಷಯದ ಕಾರ್ಯಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಪ್ರಸರಣಕ್ಕೆ ಅನುಮತಿ ನೀಡಿದೆ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದೆ. ಸರ್ವೋಚ್ಚ ನ್ಯಾಯಾಲಯವು ಈ ಕಾರ್ಯಕ್ರಮಕ್ಕೆ ಸ್ಥಗಿತಿಯನ್ನು ನೀಡಿ ಕೇಂದ್ರ ಸರಕಾರದ ಅಭಿಪ್ರಾಯವನ್ನು ಕೇಳಿತ್ತು ಅದರಂತೆ ಸರಕಾರವು ತನ್ನ ನಿಲುವನ್ನು ಮಂಡಿಸಿದೆ. ಈಗ ಸರ್ವೋಚ್ಚ ನ್ಯಾಯಾಲಯದಿಂದ ತೀರ್ಪು ಬರಲು ಬಾಕಿಯಿದ್ದು ಅಲ್ಲಿಯ ತನಕ ಕಾರ್ಯಕ್ರಮದ ಪ್ರಸಾರಣರ ಮಾಡಲು ಸಾಧ್ಯವಾಗುವುದಿಲ್ಲ.

೧. ಕೇಂದ್ರ ಸರಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನ್ಯಾಯಾಲಯಕ್ಕೆ ನೀಡಿದ ಮಾಹಿತಿಯ ಪ್ರಕಾರ, ‘ಯು.ಪಿ.ಎಸ್.ಸಿ. ಜಿಹಾದ್’ ಕಾರ್ಯಕ್ರಮದಲ್ಲಿ ಮುಸಲ್ಮಾನ ಸಮುದಾಯವು ‘ಸರಕಾರೀ ಸೇವೆಯಲ್ಲಿ ಅತಿಕ್ರಮಣ’ ಮಾಡುತ್ತಿದೆ ಎಂಬಂತೆ ತೋರಿಸಲಾಗಿದೆ, ಈ ಕಾರ್ಯಕ್ರಮದ ವಿಷಯವು ಸರಿಯಾಗಿಲ್ಲ ಮತ್ತು ಸಾಮಾಜಿಕ ದ್ವೇಷವನ್ನು ಉತ್ತೇಜಿಸುವ ಸಾಧ್ಯತೆಯಿದೆ. ಈ ಬಗ್ಗೆ ಸುದ್ದಿವಾಹಿನಿಯು ದಕ್ಷತೆಯನ್ನು ವಹಿಸುವ ಅವಶ್ಯಕತೆಯಿದೆ.

೨. ಈ ಮೊದಲು ವಾಹಿನಿಯ ಕಾರ್ಯಕ್ರಮದಿಂದ ನಿಷ್ಕರ್ಷಗಳ ಉಲ್ಲಂಘನೆಯಾಗಿದೆ ಎಂದು ಅದರ ಅದಕ್ಕೆ ‘ಕಾರಣ ನೀಡಿ’ ನೋಟಿಸ್ ನೀಡಲಾಗಿತ್ತು. ಕಾನೂನಿನ ಚೌಕಟ್ಟಿನೊಳಗೆ ‘ಕಾರಣ ನೀಡಿ’ ನೋಟಿಸ್ ಅನ್ನು ನಿಭಾಯಿಸಬೇಕು ಮತ್ತು ಅವರ ನಿಷ್ಕರ್ಷಗಳ ಬಗ್ಗೆ ನ್ಯಾಯಾಲಯಕ್ಕೂ ಮಾಹಿತಿಯನ್ನು ನೀಡುವಂತೆ ಕೇಂದ್ರ ಸರಕಾರಕ್ಕೆ ತಿಳುವಳಿಕೆಯನ್ನು ನೀಡಿತ್ತು.
ಕೇಂದ್ರ ಸರಕಾರದ ನಿಯಮಗಳ ಪ್ರಕಾರ ಧಾರ್ಮಿಕ ಅವಮಾನದಂತಹ ಕಾರ್ಯಕ್ರಮವನ್ನು ಮಾಡಲು ಸಾಧ್ಯವಿಲ್ಲ !
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ‘ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ರೂಲ್ಸ್, ೧೯೯೪’ ರ ಪ್ರಕಾರ, ಒಂದು ನಿರ್ದಿಷ್ಟ ಧರ್ಮ ಅಥವಾ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಅಥವಾ ಧಾರ್ಮಿಕ ಗುಂಪುಗಳನ್ನು ಅವಮಾನಿಸುವ ಅಥವಾ ಧಾರ್ಮಿಕ ದೃಷ್ಟಿಕೋನಗಳನ್ನು ಉತ್ತೇಜಿಸುವಂತಹ ಶಬ್ದಗಳನ್ನು ಉಪಯೋಗಿಸುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಸಾಧ್ಯವಾಗುವುದಿಲ್ಲ.

ಏನಿದು ಪ್ರಕರಣ ?

‘ಮುಸಲ್ಮಾನರು ಸರಕಾರೀ ಉದ್ಯೋಗಗಳಲ್ಲಿ ‘ನುಸುಳಿದ್ದಾರೆ’ ಮತ್ತು ಸರಕಾರದ ‘ಅಧಿಕಾರಶಾಹಿ ಜಿಹಾದ್’ ಹೇಗೆ ನಡೆಯುತ್ತಿದೆ ? ಈ ವಿಶೇಷ ಸುದ್ದಿ ವೀಕ್ಷಿಸಿ’, ಅಂತಹ ವಿಷಯವನ್ನು ಹೊಂದಿರುವ ವೀಡಿಯೊವನ್ನು ‘ಸುದರ್ಶನ ಟಿವಿ’ಯಲ್ಲಿ ಪ್ರಸಾರ ಮಾಡಲಾಗಿತ್ತು. ಆ ನಂತರ ‘ಯು.ಪಿ.ಎಸ್.ಸಿ. ಜಿಹಾದ್’ ಕಾರ್ಯಕ್ರಮದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಕಾರ್ಯಕ್ರಮವು ಮುಸಲ್ಮಾನರ ವಿರುದ್ಧವಾಗಿದೆ ಮತ್ತು ಅವರನ್ನು ಗುರಿಯಾಗಿಸಲು ಸುಳ್ಳು ಸುದ್ದಿಗಳನ್ನು ತೋರಿಸಲಾಗಿದೆ. ‘ಮುಸಲ್ಮಾನರು ‘ಯು.ಪಿ.ಎಸ್.ಸಿ.’ ಈ ಸ್ಪರ್ಧಾತ್ಮಕ ಪರೀಕ್ಷೆಗೆ ಕುಳಿತುಕೊಳ್ಳುವುದು ‘ನುಸುಳುವಿಕೆಯ ಪಿತೂರಿ’ ಎಂದು ಕಾರ್ಯಕ್ರಮದಲ್ಲಿ ಹೇಳಲಾಗಿದೆ’, ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಆಡಳಿತ ಸೇವೆಯಲ್ಲಿ ಅನೇಕ ಚಾರ್ಟರ್ಡ್ ಅಧಿಕಾರಿಗಳು ಮತ್ತು ಐ.ಪಿ.ಎಸ್. ಅಸೋಸಿಯೇಷನ್‌ನಿಂದ ‘ಸುದರ್ಶನ ಟಿವಿ’ಯ ಪ್ರಧಾನ ಸಂಪಾದಕ ಸುರೇಶ್ ಚವ್ಹಾಣಕೆ ಅವರನ್ನು ನಿಷೇಧಿಸಿದ್ದರು. ‘ಸುರೇಶ್ ಚವ್ಹಾಣಕೆಯವರ ವಿರುದ್ಧ ನ್ಯೂಸ್ ಬ್ರಾಡ್ ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿಯು ಕಠಿಣ ಕ್ರಮ ಕೈಗೊಳ್ಳಬೇಕೆಂದು’ ಇಂಡಿಯನ್ ಪೊಲೀಸ್ ಫೌಂಡೇಶನ್ ಒತ್ತಾಯಿಸಿತ್ತು.